Thursday, 12th December 2024

ಗ್ಯಾಸ್ ಸೋರಿಕೆ: ತಪ್ಪಿದ ಅನಾಹುತ 

ತುಮಕೂರು: ನಗರದಲ್ಲಿ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿರುವ ಮೆಗಾಗ್ಯಾಸ್ ಪೈಪ್‌ಲೈನ್‌ನಲ್ಲಿ ಪದೇ ಪದೇ ಗ್ಯಾಸ್ ಸೋರಿಕೆಯಾಗಿ ಬೆಂಕಿಗೆ ಹೊತ್ತಿಕೊಳ್ಳುತ್ತೆ ಇರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇಲ್ಲಿನ ಕುಣಿಗಲ್ ರಸ್ತೆಯ ಎಸ್‌ಎಸ್‌ಐಟಿ ಕಾಲೇಜು ಮುಂಭಾಗ ಮೆಗಾಗ್ಯಾಸ್ ಪೈಪ್‌ಲೈನ್‌ನಲ್ಲಿ ಹಾದು ಹೋಗಿದ್ದು, ಪೈಪ್‌ಲೈನ್‌ನಲ್ಲಿ ಗ್ಯಾಸ್ ಸೋರಿಕೆ ಯಾಗಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಇದನ್ನು ಕಂಡು ಸಾರ್ವಜನಿಕರು ತಕ್ಷಣ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಮೆಗಾಗ್ಯಾಸ್ ಪೈಪ್‌ಲೈನ್ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಈ ಭಾಗದ ಪಾಲಿಕೆ ಸದಸ್ಯ ಧರಣೇಂದ್ರಕುಮಾರ್ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟವರಿಗೆ ವಿಷಯ ತಿಳಿಸಿ ಗ್ಯಾಸ್ ಪೈಪ್‌ಲೈನ್ ದುರಸ್ಥಿಪಡಿಸುವ ಕಾರ್ಯ ಮಾಡಿದರು.
ನಗರದ ವಿವಿಧೆಡೆ ಮೆಗಾಗ್ಯಾಸ್ ಪೈಪ್‌ಲೈನ್‌ನಲ್ಲಿ ಇದೇ ರೀತಿ ಗ್ಯಾಸ್ ಸೋರಿಕೆಯಾಗುತ್ತಾ ಬೆಂಕಿ ಹೊತ್ತಿಕೊಳ್ಳುತ್ತಿದೆ. ಆದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ÷್ಯ ವಹಿಸಿದ್ದಾರೆ ಎಂದು ನಾಗರಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.