ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಭಾರತದ ಹಾಕಿ ಮಾಂತ್ರಿಕ, ದಂತಕತೆ,ಪದ್ಮ ವಿಭೂಷಣ ಮೇಜರ್ ಧ್ಯಾನ್ ಚಂದ್ ರವರ ೧೧೯ ನೇ ಜಯಂತಿಯನ್ನು ಅವರ ಕ್ರೀಡಾ ಜೀವನದ ಕೊಡುಗೆಯನ್ನು ಸ್ಮರಿಸಲು ಮತ್ತು ಸಾಧನೆಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.
ಶಾಲಾ ಮಕ್ಕಳಿಗೆ ಹೊರಾಂಗಣ ಮೈದಾನದಲ್ಲಿ ಆಟೋಟ ಗಳನ್ನು ಏರ್ಪಡಿಸಲಾಗಿತ್ತು. ತದನಂತರ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ.ಪ್ರಕಾಶ್ ಮಾತನಾಡಿ, ಮೇಜರ್ ಧ್ಯಾನ್ ಚಂದ್ ರವರು ಹಾಕಿಯಲ್ಲಿ ಭಾರತ ಮೂರು ಒಲಂಪಿಕ್ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಶ್ರೇಷ್ಠ ಕ್ರೀಡಾ ದಿಗ್ಗಜ ರಾಗಿದ್ದು ಇವರ ಸ್ಮರಣಾರ್ಥ ಅಂಚೆ ಚೀಟಿ, ಪ್ರಶಸ್ತಿ ಪ್ರತಿಮೆ ಮತ್ತು ಕ್ರೀಡಾಂಗಣಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದು ಕ್ರೀಡಾ ಸಂಪ್ರದಾಯವನ್ನು ಆಚರಿಸಲು ಮತ್ತು ಕ್ರೀಡಾ ಪ್ರತಿಭೆಯನ್ನು ಗುರುತಿಸುವ ದಿನವಾಗಿದೆ. ಪೋಷಕರು ಮತ್ತು ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡಾಮನೋಭಾವ ಮತ್ತು ದೈಹಿಕ ಸದೃಢತೆಯನ್ನು ಹೆಚ್ಚಿಸಿಕೊಳ್ಳಬೇಕು. ಈ ದಿನದ ಮಹತ್ವದ ವಾಕ್ಯ ಕ್ರೀಡಾ ಸ್ಪೂರ್ತಿಯ ಅಜೇಯ ಮತ್ತು ಮೇಜರ್ ಧ್ಯಾನ್ ಚಂದ್ ರವರ ನಿರಂತರ ಪರಂಪರೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಎಂ. ಶೋಭಾ ಮಾತನಾಡಿ, ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಅಗಾಧವಾಗಿದೆ.ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿ ಸದಾ ಆರೋಗ್ಯವಂತ ರಾಗಿ ಕ್ರಿಯಾಶೀಲರಾಗಿರುತ್ತಾರೆ. ದೈಹಿಕವಾಗಿ ಸಕ್ರಿಯವಾಗಿಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಲ್ಲಿ ಈ ಕ್ರೀಡಾ ದಿನ ಮಹತ್ವ ಪಡೆದುಕೊಂಡಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸಂಧ್ಯಾ, ಭಾರ್ಗವಿ ಮತ್ತು ಸಾಯಿ ಪ್ರಿಯ ಉಪಸ್ಥಿತರಿದ್ದರು.