Sunday, 15th December 2024

MLA K H Puttaswamygowda: ನವರಾತ್ರಿ ಉತ್ಸವಕ್ಕೆ ತನ್ನದೇ ಪರಂಪರೆ ಇದೆ- ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಗೌರಿಬಿದನೂರು: ನವರಾತ್ರಿ ಉತ್ಸವಕ್ಕೆ ತನ್ನದೇ ಆದ ಪರಂಪರೆ ಇದೆ, ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವದಲ್ಲಿ ಪ್ರತಿದಿನವೂ ಒಂದೊಂದು ಶಕ್ತಿ ದೇವತೆಗಳ ಆರಾಧನೆ ಬಹಳಷ್ಟು ಶ್ರದ್ದಾಭಕ್ತಿಯಿಂದ ನಡೆಯುತ್ತದೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.

ಅವರು ಪಿನಾಕಿನಿ ಯೂತ್ಸ್ ವತಿಯಿಂದ ನಗರದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಪಿನಾಕಿನಿ ಯೂತ್ಸ್ ಬಳಗದ ಮಂಜುನಾಥ್ ಅವರ ಬಳಗದಿಂದ ಶಕ್ತಿ ದೇವತೆಗಳ ಆರಾಧನೆಯ ಮೂಲಕ ಲೋಕ ಕಲ್ಯಾಣಕ್ಕಾಗಿ ಮುಂದಾಗಿರುವ ದೇವತಾ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಮುಖಂಡರಾದ ಆರ.ಅಶೋಕ್ ಕುಮಾರ್ ಅವರು ಮಾತನಾಡಿ ನವರಾತ್ರಿ ಉತ್ಸವ ನಮ್ಮ ಊರಿನಲ್ಲಿ ನಡೆಯುತ್ತಿರು ವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದ ಅವರು ನವರಾತ್ರಿ ಉತ್ಸವದಲ್ಲಿ ಊರಿನ ಎಲ್ಲರೂ ಶ್ರದ್ಧೆಯಿಂದ ಭಾಗವಹಿಸಬೇಕೆಂದು ಕರೆ ನೀಡಿದರು.

ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್ ಮಾತನಾಡಿ ಸನಾತನ ಹಿಂದೂ ಧರ್ಮದಲ್ಲಿ ಶಕ್ತಿ ದೇವತೆಗಳ ಆರಾಧನೆ ನಡೆಯುವ ನವರಾತ್ರಿ ದಿನಗಳಿಗೆ ಬಹಳ ಮಹತ್ವ ಇದೆ.ನಮ್ಮ ದೇಶದ ಪ್ರಧಾನಿ ಮೋದಿಯವರು ನವರಾತ್ರಿಯ ಒಂಬತ್ತು ದಿನಗಳ ಕಾಲ ಕೇವಲ ಬಿಸಿ ನೀರು ಮಾತ್ರ ಕುಡಿದು ಶಕ್ತಿ ದೇವತೆಗಳ ನವರಾತ್ರಿ ಪೂಜೆಗಳನ್ನು ನೆರವೇರಿಸು ತ್ತಾರೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್ ಉಪಾಧ್ಯಕ್ಷ ಫರೀದ್ ಮುಖಂಡರಾದ ಬಿಜಿ.ವೇಣು ಗೋಪಾಲ ರೆಡ್ಡಿ, ಅಲ್ಲಂಪಲ್ಲಿ ವೇಣು, ಸೂರಣ್ಣ, ನಗರಸಭೆ ಸದಸ್ಯರಾದ ರಾಜಕುಮಾರ, ಪದ್ಮಾವತಿ, ಅಸ್ಲಾಂ ಮುಖಂಡರಾದ ನಾಗಾರ್ಜುನ, ರವೀಂದ್ರನಾಥ್,ಸಾಗಾನಹಳ್ಳಿ ಶಿವಕುಮಾರ್, ಹೋಟೆಲ್ ರಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್, ಸುರೇಶ್, ಪಿನಾಕಿನಿ ಯೂತ್ಸ್ ಬಳಗದ ಮಂಜುನಾಥ್, ರಾಜುರೆಡ್ಡಿ, ಅನಿಲ್, ಲಕ್ಷ್ಮಣ್, ಅರವಿಂದ್ ಬಾಬು, ಹರೀಶ್, ಮಹೇಂದ್ರ, ಆನಂದ್, ಕೈಲಾಸ್, ಮಹಮದ್ ಬೇಗ್ ಹಾಗೂ ಇನ್ನಿತರರು ಉಪಸ್ಥಿತ ರಿದ್ದರು.

ಇದನ್ನೂ ಓದಿ: Chickballapur News: ಶಾಸಕರು ರಾಜಕೀಯ ಮಾಡಬೇಕು, ಆದರೆ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು- ಕೆ.ವಿ.ನವೀನ್‌ಕಿರಣ್