ಚಿಂತಾಮಣಿ: ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯಕ್ಷೇತ್ರವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಉರುಸ್ ಕಾರ್ಯಕ್ರಮ ಸೋಮ ವಾರದಿಂದ ಆರಂಭಗೊಳ್ಳಲಿದ್ದು ಈ ದಿನ ನೂರಾನಿ ಸಂದಲ್ ಅನ್ನು ದರ್ಗಾ ಮುಜಾವರ ಸೈಯದ್ ರಹಮತುಲ್ಲಾ ರವರ ಮನೆಯಿಂದ ಮೆರವಣಿಗೆ ಮೂಲಕ ದರ್ಗಾಗೆ ಗಂಧೋತ್ಸವವನ್ನು ಸಮರ್ಪಿಸಲಾಯಿತು.
ಈ ವೇಳೆ ಸೈಯದ್ ಶಫಿವುಲ್ಲಾ, ಸೈಯದ್ ಅಜ್ಮತುಲ್ಲಾ,ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದ್ದರು.
ಇನ್ನೂ ನಾಳೆಯಿಂದ ಆರಂಭಗೊಳ್ಳಲಿರುವ ಉರುಸ್‌ಗೆ ಸಿದ್ಧತೆ ಭರದಿಂದ ಸಾಗುತ್ತಿವೆ. ವಸತಿ ವ್ಯವಸ್ಥೆ, ಕುಡಿಯುವ ನೀರು,ಆರೋಗ್ಯ ಶಿಬಿರ, ಅಂಬುಲೆನ್ಸ್, ಅಗ್ನಿಶಾಮಕದಳದ ವಾಹನ ಸ್ಥಳದಲ್ಲಿರುತ್ತವೆ. ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Eid Fashion 2024: ಈದ್ ಮಿಲಾದ್ ಸಂಭ್ರಮಕ್ಕೆ ಬಂದ ಡಿಸೈನರ್ ಗ್ರ್ಯಾಂಡ್ ಎಥ್ನಿಕ್‌ವೇರ್ಸ್!