Sunday, 15th December 2024

ಗೀತೆ ಹೆಸರಿನಲ್ಲಿ ಮತಾಂತರ: ದೂರು ದಾಖಲು

ತುಮಕೂರು: ಗೀತೆ ಹೆಸರಿನಲ್ಲಿ ಹಿಂದೂ ಧರ್ಮದಿಂದ ಅನ್ಯಧರ್ಮಗಳಿಗೆ ಮತಾಂತರ ಮಾಡುವ ಜಾಲ ಜಿಲ್ಲೆಯಲ್ಲಿ ಬೇರೂ ರಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ತುಮಕೂರು ನಗರ ಹಾಗೂ ಕೋರಾ ಪೊಲೀಸ್ ಠಾಣೆಗಳಲ್ಲಿ ಹಿಂದೂ ಸಂಘಟನೆಗಳಿಂದ ದೂರು ನೀಡಲಾಗಿದೆ.

ಮುಖಪುಟದಲ್ಲಿ ಭಗವದ್ಗೀತೆ ಚಿತ್ರವನ್ನು ಮುದ್ರಿಸಿ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಹೆಸರಿನ 100ರು ಮೌಲ್ಯದ ಪುಸ್ತಕ ದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿ ಅನ್ಯ ಧರ್ಮಗಳನ್ನು ಹೊಗಳಿರುವುದು ಖಂಡನೀಯ. ಇದರಿಂದಾಗಿ ಹಿಂದೂ ಧರ್ಮಕ್ಕೆ ಅಪಮಾನವಾಗಿದೆ.

ಆನ್ ಲೈನ್ ಮೂಲಕವೂ ಸದರಿ ಪುಸ್ತಕ ಲಭ್ಯವಿದ್ದು, ಇದನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಿಂದೂ ಮುಖಂಡರು ದೂರು ನೀಡಿದ್ದಾರೆ.