ತುಮಕೂರು: ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಶ್ರೀರಂಗಪಟ್ಟಣ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ದೊಡ್ಡ ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಚಿಕ್ಕಪೇಟೆ ಶ್ರೀರಂಗಪಟ್ಟಣ ರಸ್ತೆಯ ನೊಂದ ರೈತ-ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ನೀಡಲಾದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೂಗಳತೆ ದೂರದಲ್ಲಿರುವ ಚಿಕ್ಕಪೇಟೆಯ ಗಾರ್ಡನ್‌ರಸ್ತೆಯ ಸ್ಮಶಾನದ ಮುಂಭಾಗ ಶ್ರೀರಂಗಪಟ್ಟಣ, ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ನಿವಾಸಿಗಳು ಮಳೆ ಬಂದಾಗ ಕಲುಷಿತ ನೀರು ಸಂಗ್ರಹವಾಗಿ ನರಕಯಾತನೆಯನ್ನು ಪಡುವ ಸ್ಥಿತಿ ಇದ್ದು ಹಾಗೂ ಇದೇ ಭಾಗದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ಪರದಾಡುವ ಸ್ಥಿತಿ ಇದೆ. ಸಮಸ್ಯೆ ಇತ್ಯರ್ಥಪಡಿಸುವಂತೆ ತುಮಕೂರು ಮಹಾನಗರಪಾಲಿಕೆಗೆ ಮತ್ತು ತುಮಕೂರು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನಿವಿ ಸಲ್ಲಿಸಿದರು ಸಹ ಕೇವಲ ಭರವಸೆಗಳನ್ನು ಮಾತ್ರ ನೀಡಿ ಸಮಸ್ಯೆಯನ್ನು ಇದುವರೆಗೂ ಬಗೆಹರಿಸಿಲ್ಲ. ಶ್ರೀರಂಗಪಟ್ಟಣ ನೊಂದ ರೈತ-ನಾಗರಿಕರ ಹೋರಾಟ ಸಮಿತಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೆಶಿಸಿ ಸಮಸ್ಯೆಯನ್ನು ನಿವಾರಿಸಬೇಕೆಂದು ಮನವಿಮಾಡಿದರು.
ತುಮಕೂರು ಮಹಾನಗರಪಾಲಿಕೆಗೆ ಹಲವು ಬಾರಿ ಮನವಿಯನ್ನು ಅರ್ಪಿಸಲಾಗಿದ್ದು ಅಮೃತ್ ಯೋಜನೆಯಡಿಯಲ್ಲಿ ಕೆಲಸ ಆರಂಭಿಸುವುದಾಗಿ ಹೇಳಿದ್ದರೂ ಇದುವರೆಗೂ ಆರಂಬಿಸಿಲ್ಲ. ಇಲ್ಲಿನ ನಿವಾಸಿಗಳಿಗೆ ಬರಿ ಆಶ್ವಾಸನೆಗಳನ್ನೇ ನೀಡಲಾಗಿದ್ದು, ಸಮಸ್ಯೆ ಬಗೆಹರಿದಿಲ್ಲ ಜಿಲ್ಲಾಧಿಕಾರಿಗಳು ಕನಿಷ್ಠ ಮೂರು ಮೀಟರ್ ಅಗಲ, ಮೂರು ಮೀಟರ್ ಆಳದ ಚರಂಡಿ ನಿರ್ಮಾಣಕ್ಕೆ ಆದೇಶಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಟಿ.ಹೆಚ್.ರಾಮು, ಯಜಮಾನ್ ಶಿವಕುಮಾರ್, ಟಿ.ಜಿ.ವಸಂತ್‌ಕುಮಾರ್, ಎಸ್.ರಾಘವೇಂದ್ರ, ಹೆಚ್.ಎಸ್.ಶಿವಕುಮಾರ್, ಹೊನ್ನಗಂಗಯ್ಯ, ಶಿವಣ್ಣ, ಗೋವಿಂದರಾಜು, ರಂಗಣ್ಣ, ಶಿವಗಂಗಯ್ಯ, ಗಂಗಣ್ಣ, ಮುರುಳಿ ಸೇರಿದಂತೆ ಒತ್ತಾಯಿಸಿದ್ದಾರೆ.