Saturday, 26th October 2024

ಆರ್‌ಬಿಐ ಮಾನದಂಡದ0ತೆ ಹೂಡಿಕೆದಾರರ ಹಿತರಕ್ಷಣೆ ಸಾಧ್ಯ : ಗೋಪಿನಾಥ್ ಅಭಿಮತ

ಚಿಕ್ಕಬಳ್ಳಾಪುರ : ಸಾರ್ವಜನಿಕರು ಬ್ಯಾಂಕಿAಗ್ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಕ್ಷರಾಗುವ ಮೂಲಕ ಕಷ್ಟ ಪಟ್ಟು ಉಳಿಸಿದ ಆದಾಯವನ್ನು ಆರ್‌ಬಿಐ ಮಾನ್ಯತೆ ಪಡೆದ ನಂಬಿಕಸ್ಥ ಸಂಸ್ಥೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಇದರಿಂದಾಗಿ ಹೆಚ್ಚಿನ ಲಾಭಗಳಿಸಬಹುದಲ್ಲದೆ ನೆಮ್ಮದಿಯಾಗಿ ಜೀವನ ಸಾಗಿಸಲು ಸಾಧ್ಯ ಎಂದು ಮ್ಯಾಕ್ಸ್ ವ್ಯಾಲ್ಯೂ ಕ್ರೆಡಿಟ್ಸ್ ಅಂಡ್ ಇನ್ವೆಸ್ಟ್ಮೆಂಟ್ಸ್ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಗೋಪಿನಾಥ್ ತಿಳಿಸಿದರು.

ನಗರದ ಜಿಲ್ಲಾ ಶಾಖೆಯಲ್ಲಿ ಏರ್ಪಡಿಸಿದ್ದ ೪ನೇ ವಾರ್ಷಿಕೋತ್ಸವ ಸಮಾ ರಂಭ ಹಾಗೂ ಉಳಿಕೆದಾರರ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಭಾರತವು ವಿಶ್ವದ ಮುಂದುವರೆದ ರಾಷ್ಟçಗಳ ಜತೆ ಆತ್ಮವಿಶ್ವಾಸದಿಂದ ವ್ಯವಹರಿಸಲು ಕಾರಣ ಅದರ ಆರ್ಥಿಕತೆಯ ಭದ್ರಬುನಾದಿಯೇ ಕಾರಣವಾಗಿದೆ.ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಅನೇಕ ಕ್ರಾಂತಿಕಾರಕ ಬದಲಾವಣೆಗಳು ಹೂಡಿಕೆದಾರರಿಗೆ ವರದಾನವಾಗಿವೆ.ಸರಕಾರಿ ಸ್ವಾಮ್ಯದ ಬ್ಯಾಂಕುಗಳ0ತೆ ಖಾಸಗಿ ರಂಗದ ಬ್ಯಾಂಕುಗಳು ಕೂಡ ಜಿಡಿಪಿ ವೃದ್ದಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿವೆ ಎಂದರು.

ಮ್ಯಾಕ್ಸ್ ವ್ಯಾಲ್ಯೂ ಕ್ರೆಡಿಟ್ಸ್ ಅಂಡ್ ಇನ್ವೆಸ್ಟ್ಮೆಂಟ್ಸ್ ಸಂಸ್ಥೆಯು ಕರ್ನಾಟಕ, ಆಂಧ್ರಪ್ರದೇಶ,ಕೇರಳದಲ್ಲಿ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿದ್ದು ಸಂತೃಪ್ತ ಗ್ರಾಹಕರ ಪಡೆಯನ್ನು ಹೊಂದಿದೆ.ಜಿಲ್ಲೆಯಲ್ಲಿ ೮ ಬ್ರಾಂಚ್ ಇದ್ದು ರಾಜ್ಯದಲ್ಲಿ ೬೨ ಇವೆ.

ಮೂರು ರಾಜ್ಯಗಳಲ್ಲಿ ೧೪೦ ಶಾಖೆಗಳಿದ್ದು ೧೦೦೦ಕ್ಕೂ ಮೀರಿ ಹೂಡಿಕೆದಾರರಿದ್ದಾರೆ.ಸರಕಾರಿ ಬ್ಯಾಂಕುಗಳಿಗಿ0ತ ಹೆಚ್ಚಿನ ಬಡ್ಡಿಯನ್ನು ನಾವು ನೀಡಲು ಪ್ರಮುಖ ಕಾರಣ ನಮ್ಮದು ಬಂಗಾರ ಮತ್ತು ವಾಹನದ ಮೇಲೆ ಹೂಡಿಕೆ ಮಾಡುವ ಕಾರಣ ನಷ್ಟವಾಗುವ ಸಂಭವ ಇಲ್ಲವೇ ಇಲ್ಲ.೭.ವರ್ಷ ೪ ತಿಂಗಳಿಗೆ ನಮ್ಮಲ್ಲಿ ಹಣ ದ್ವಿಗುಣವಾಗುತ್ತದೆ.ಇಲ್ಲಿ ಹೂಡಿಕೆ ಮಾಡುವವರಿಗೆ ಮಾಸಿಕ ಬಡ್ಡಿಯನ್ನು ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಜತೆಗೆ ಬಂಗಾರದ ಮೇಲೆ ನೀಡುವ ಸಾಲವನ್ನು ಕನಿಷ್ಟ ಸಮಯ ಅಂದರೆ ೧೦ನಿಮಿಷದಲ್ಲಿ ಕಡಿಮೆ ದಾಖಲಾತಿ ಪಡೆದು ಶೀಘ್ರವಾಗಿ ವಿತರಿಸುವ ವ್ಯವಸ್ಥೆ ಇದೆ ಎಂದರು.

ನಿವೃತ್ತ ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ ಎನ್‌ಸಿಡಿಸಿ ಸ್ಕೀಮ್‌ಗೆ ಹೆಚ್ಚಿನ ಒತ್ತು ನೀಡಿದರೆ ಹೂಡಿಕೆ ಅನಾಯಾಸವಾಗಿ ಬರಲಿದೆ.ಬದಲಿಗೆ ಸಬಾರ್ಡಿನೇಟ್ ಸ್ಕೀಮ್ ಕಡಿಮೆ ಮಾಡಿದರೆ ಭವಿಷ್ಯದಲ್ಲಿ ಎದುರಾಗುವ ಅಪಾಯ ಗಳಿಂದ ಗ್ರಾಹಕರ ಹಿತವನ್ನು ಕಾಪಾಡಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಆಂದ್ರ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕೆ.ಎನ್.ರಾಮಮೂರ್ತಿ,ಆರ್.ಒ, ಶ್ರೀನಿವಾಸಮೂರ್ತಿ, ಚಿಕ್ಕಬಳ್ಳಾಪುರ ವಿಭಾಗದ ವ್ಯವಸ್ಥಾಪಕ ವೆಂಕಟೇಶ್, ಶಿಡ್ಲಘಟ್ಟ ಬ್ರಾಂಚ್‌ನ ವಿಜಯ್‌ಕುಮಾರ್ ಮತ್ತಿತರರು ಇದ್ದರು.