Saturday, 14th December 2024

ಸರಕಾರಿ ಶಾಲೆ ಮೇಲ್ದರ್ಜೆಗೇರಿಸಲು ಜಿಲ್ಲಾಧಿಕಾರಿಗೆ ಜಗ್ಗೇಶ್ ಮನವಿ

ತುಮಕೂರು: ತುರುವೇಕೆರೆ ತಾಲ್ಲೂಕು ಮಾಯಸಂದ್ರದಲ್ಲಿ ಮಾದರಿ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿ ಸುವ ಸಂಬಂಧ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಜಿಲ್ಲಾಧಿಕಾರಿಗಳೊಂದಿಗೆ ರ‍್ಚೆ ನಡೆಸಿದರು.

ತುಮಕೂರು ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿಸಿಕೊಂಡಿರುವ ಜಗ್ಗೇಶ್ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರೊಂದಿಗೆ ತುರುವೇಕೆರೆ ತಾಲ್ಲೂಕಿನಲ್ಲಿ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾ ಗಿಸುವ ಸಂಬಂಧ ರ‍್ಚೆ ನಡೆಸಿದರು.

ಸರಕಾರಿ ಶಾಲೆಗಳನ್ನು ಮಾದರಿ ಶಾಲೆಯಗಳ್ನಾಗಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲ ವಾಗಲಿದೆ. ಹಾಗಾಗಿ ಮಾಯಸಂದ್ರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಕುರಿತು ರ‍್ಚೆ ನಡೆಸಲಾಗಿದೆ. ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಹ ರ‍್ಚಿಸಲಾಗಿದೆ.

ಆಸ್ಪತ್ರೆಯಲ್ಲಿ ಡಯಾ ಲಿಸಿಸ್ ಸೆಂಟರ್ ಸಹ ಸರಿಯಾಗಿ ಕರ‍್ಯನರ‍್ವಹಿಸದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹಾಗಾಗಿ ಡಯಾಲಿಸಿಸ್ ಕೇಂದ್ರವನ್ನು ಸಹ ಮೇಲ್ರ‍್ಜೆಗೇರಿಸ ಲಾಗುವುದು ಎಂದರು.

ನಾನು ರಾಜ್ಯಸಭಾ ಸದಸ್ಯನಾದ ಬಳಿಕ ಯಾವುದಾದರು ಒಂದು ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ತೆಗೆದುಕೊಳ್ಳಬೇಕಾ ಗಿತ್ತು. ಹಾಗಾಗಿ ನನ್ನ ತವರು ಜಿಲ್ಲೆಯನ್ನೆ ನೋಡಲ್ ಜಿಲ್ಲೆಯನ್ನಾಗಿ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕರ‍್ಯರ‍್ತ
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಪಕ್ಷದ ಕರ‍್ಯರ‍್ತನೆ ಎಂಬ ಮಾಹಿತಿ ಇದೆ. ಮೊಟ್ಟೆ ಎಸೆದಿರುವ ಕರ‍್ಯರ‍್ತನೆ ಹೇಳಿರುವಂತೆ ಆತ ಜೆಡಿಎಸ್ ಪಕ್ಷದಲ್ಲಿದ್ದು, ನಂತರ ಕಾಂಗ್ರೆಸ್ ಬಂದು, ಕೆಲ ವಿಚಾರಧಾರೆಗಳಿಂದ ಬೇಸತ್ತು ಹೀಗೆ ಮಾಡಿದ್ದಾನೆ ಎಂಬ ಮಾಹಿತಿ ಇದೆ ಎಂದರು.

ಕಾಂಗ್ರೆಸ್ ಪಕ್ಷದವರಿಗೆ ಪ್ರತಿಭಟನೆ ಅವಕಾಶ ನೀಡದೆ ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಭಟನೆಗೆ ಅವಕಾಶ ನೀಡಿದರೆ ಅದು ಮತ್ತೊಂದು ಗಲಾಟೆಗೆ ಕಾರಣವಾಗಿ ಹೆಣ ಬಿದ್ದು ಇನ್ನೊಂದು ರೀತಿಯಲ್ಲಿ ಶಾಂತಿಗೆ ಭಂಗವಾಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂದರು. ಇದಕ್ಕೂ ಮುನ್ನ ಜಿಲ್ಲಾಧಿ ಕಾರಿಗಳ ಕಚೇರಿಗೆ ಆಗಮಿಸಿದ ಸಂಸದ ಹಾಗೂ ನಟ ಜಗ್ಗೇಶ್ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.

ಈ ಸಂರ‍್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಹನುಮಂತರಾಜು, ರುದ್ರೇಶ್, ಮಲ್ಲಸಂದ್ರ ಶಿವಣ್ಣ, ಕೊಪ್ಪಲ್ ನಾಗರಾಜು, ಪ್ರತಾಪ್ ಹಾಗೂ ಕರ‍್ಯರ‍್ತರು ಉಪಸ್ಥಿತರಿದ್ದರು.