ಚಿಕ್ಕನಾಯಕನಹಳ್ಳಿ : ಹಸಿರು ಸಮೃದ್ದಿ ಸೌಹಾರ್ದ ಸಹಕಾರಿ ಸಂಘದ ೨೦೨೨-೨೩ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ಜರುಗಿತು.
ಸಭೆಯಲ್ಲಿ ತಿಪಟೂರಿನ ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತ್ರಿಯಂಬಕ ಶಂಕರ ವೀರಭದ್ರೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ದಕ್ಷಿಣಾ ಮೂರ್ತಿ, ಮಲ್ಲಸಂದ್ರ ಹಾಲು ಒಕ್ಕೂಟದ ನಿವೃತ್ತ ಉಪ ವ್ಯವಸ್ಥಾಪಕ ಸಿದ್ದರಾಮಯ್ಯ ಈ ಮೂವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉಮೇಶ್, ನಿರ್ದೇಶಕರಾದ ಪಾಲಾಕ್ಷಮೂರ್ತಿ, ಉಮೇಶ ಗೌಡ, ಶಂಕರಪ್ಪ, ಚಿಕ್ಕಣ್ಣ, ಬಸವರಾಜು, ಶಿವಣ್ಣ, ಆನಂದ, ಶಿವಕುಮಾರ್, ರಾಮಯ್ಯ, ಸದಾಶಿವಯ್ಯ, ಗಂಗಾಧರಸ್ವಾಮಿ, ಗೌರೀಶ್, ವೃತ್ತಿಪರ ನಿರ್ದೇಶಕ ಶಿವಶಂಕರಪ್ಪ, ಪ್ರಕಾಶ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.