Saturday, 14th December 2024

ಸಾರ್ವಜನಿಕ ಸಮಸ್ಯೆಗಳು, ಕುಂದುಕೊರತೆಗಳ ಆಲಿಕೆ

ಕೋಲಾರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರತಿ ತಿಂಗಳ ಮಂಗಳವಾರದಂದು ಜಿಲ್ಲಾಧಿಕಾರಿಗಳು ಆಯಾ ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಸಾರ್ವಜನಿಕ ಕುಂದುಕೊರತೆ ಆಲಿಸುವ ನಿಯಮದಂತೆ ಕೋಲಾರ ತಾಲ್ಲೂಕ ತಹಶಿಲ್ದಾರ ಕಚೇರಿಗೆ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಹಾಗೂ ಕುಂದುಕೊರತೆಗಳನ್ನು ಆಲಿಸಿದರು.

ಸಾರ್ವಜನಿಕರು, ರೈತ ಸಂಘದ ಪದಾಧಿಕಾರಿಗಳು, ದಲಿತ ಮುಖಂಡರು, ವಿಕಲಚೇತನ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ತಮ್ಮ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೊಲ್ಹಾರ ತಾಲ್ಲೂಕ ಹೋರಾಟ ಸಮೀತಿ ಅಧ್ಯಕ್ಷ ಈರಣ್ಣಗೌಡ ಕೋಮಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಕೊಲ್ಹಾರ ಪಟ್ಟಣ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕ ಕೇಂದ್ರವಾಗಿ ಪರಿವರ್ತನೆ ಹೊಂದಿದ್ದರು ಕೂಡ ತಾಲ್ಲೂಕ ಆಡಳಿತಕ್ಕೆ ಸಂಬಂಧಿಸಿದ ಕಾರ್ಯಾಲಯಗಳು ಕಾರ್ಯಾರಂಭವಾಗಿಲ್ಲ ಕೂಡಲೇ ಪೂರ್ಣಪ್ರಮಾಣದಲ್ಲಿ ತಾಲ್ಲೂಕ ಕಚೇರಿಗಳನ್ನು ಪ್ರಾರಂಭಿಸಬೇಕು ಜೊತೆಗೆ ಪುನರ್ವ ಸತಿ ಕೇಂದ್ರದ ಭೂ ಭಾಗದ ಗಡಿ ಗುರುತಿಸಬೇಕು ಎಂದು ಮನವಿ ಮಾಡಿ ಕೊಂಡರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ನಂತರ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಜಾದಿಕಾ ಅಮೃತ ಮಹೋತ್ಸವ ಅಂಗ ವಾಗಿ ಸ್ಥಾಪಿಸಿದ್ದ ರಾಷ್ಟ್ರಧ್ವಜ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು, ಪ.ಪಂ ಕಾರ್ಯಾಲಯದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಪ.ಪಂ ಸದಸ್ಯ ತೌಸೀಪ್ ಗಿರಗಾಂವಿ ಆಶ್ರಯ ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಅರ್ಹ ಕಡುಬಡವರನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಬೇಕು ಕೊಲ್ಹಾರ ಪುನರ್ವಸತಿ ಕೇಂದ್ರವಾಗಿರುವುದರಿಂದ ಒಳಚರಂಡಿ ಜೋಡಣೆ ಉಚಿತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎಂ.ಆರ್ ಕಲಾದಗಿ ಪ.ಪಂ ಸದಸ್ಯರ ಪರವಾಗಿ ಪ್ರಮುಖ ೧೦ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಅವಹಾಗನೆಗೆ ತಂದರು
*ಪ.ಪಂಗೆ ವಿಶೇಷ ಅನುದಾನ
*ಪ.ಪಂ ಸಿಬ್ಬಂದಿಗಳ ಕೊರತೆ.
*ಪ.ಪಂ ಗೆ ಹೊಸ ಕಟ್ಟಡ
*ಪುನರ್ವಸತಿಯ ಸರ್ಕಾರಿ ಜಾಗೆಗಳನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರ
*ನೀರು ಸರಬರಾಜು ಬಿಲ್ಲು ರದ್ದು
*ಪ.ಪಂ ವ್ಯಾಪ್ತಿಯ ವಾರ್ಡುಗಳಿಗೆ ೨೪ ಗಂಟೆಗಳ ಶುದ್ಧ ಕುಡಿಯುವ ನೀರಿನ ಸರಬುರಾಜು
*ಕಾರ್ಮಿಕ ಇಲಾಖೆಗೆ ಭರಸಿಬೇಕಾದ ಮೊತ್ತಕ್ಕೆ ವಿನಾಯಿತಿ
*ಬಿಎಸ್ಎನ್ಎಲ್ ಜಾಗೆಯನ್ನು ಸ್ಥಳಾಂತರಿಸಿ ಮಿನಿವಿಧಾನಸೌಧ ಕಟ್ಟಡಕ್ಕೆ ಮೀಸಲಿಡುವುದು
*ಕೆ.ಇ.ಬಿ ಇಲಾಖೆಯ ಸಿಬ್ಬಂದಿಗಳ ಕೊರತೆ
*ತಾಲ್ಲೂಕ ವ್ಯಾಪ್ತಿಯ ಎಲ್ಲಾ ಸರಕಾರಿ ಕಚೇರಿಗಳ ಪ್ರಾರಂಭ ಮಾಡಬೇಕು ಜೊತೆಗೆ ಈ ಹಿಂದೆ ಇದ್ದ ಪ.ಪಂ ಸಿಬ್ಬಂದಿಗಳು ಅಕ್ರಮವೆಸಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು ಈ ಎಲ್ಲಾ ಬೇಡಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ನಿವೇಶನಗಳ ಗೊಂದಲದ ಬಗ್ಗೆ ಕೆಡಿಬಿ ಸಭೆಯಲ್ಲಿ ಚರ್ಚೆಯಾಗಿದೆ ಜೊತೆಗೆ ಶಾಸಕರು ಕೂಡ ಈ ಬಗ್ಗೆ ಮುತುವರ್ಜಿ ವಹಿಸಿದ್ದಾರೆ ಎಂದು ಹೇಳಿದರು.

ನಿವೇಶನಗಳ ಅಕ್ರಮ ಕಂಡುಬಂದವರಿಗೆ ಹಂತಹಂತವಾಗಿ ಪರಿಶೀಲನೆ ನಡೆಸಲಾಗುವುದು ಹಾಗೂ ಕೂಡಲೇ ಇತರೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಶಿಲ್ದಾರ ಪಿ.ಜಿ ಪವಾರ್, ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್ ಪಠಾಣ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಇದ್ದರು.