Thursday, 12th December 2024

ಜಿಎಸ್‌ಟಿ ಖುಷಿ ಜೇಬು ಬಿಸಿ : ಶ್ರೀಹರ್ಷ ವ್ಯಂಗ್ಯ

ಚಿಕ್ಕನಾಯಕನಹಳ್ಳಿ : ಬಿಜೆಪಿ ಸರಕಾರ ಎಲ್ಲದಕ್ಕೂ ಜಿಎಸ್‌ಟಿ ಹಾಕುವ ಮೂಲಕ ಬಡವರ ಜೇಬಿಗೆ ಬಿಸಿ ಹಾಕುತ್ತಿದೆ ಎಂದು ಜೆಡಿಎಸ್ ಮುಖಂಡ ಶ್ರೀ ಹರ್ಷ ವ್ಯಂಗ್ಯವಾಡಿ ದ್ದಾರೆ.

ಬಿಜೆಪಿ ತಮ್ಮ ಶ್ರೀಮಂತ ಗೆಳೆಯರ ಕಿಸೆ ಗಟ್ಟಿ ಮಾಡಲು ಬಡವರ ಕಿಸೆಗೆ ಕತ್ತರಿ ಹಾಕುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿರುವ ಶ್ರೀ ಸಾಮಾನ್ಯನಿಗೆ ಆಹಾರ ಪದಾರ್ಥಗಳ ಮೇಲೂ ಜಿಎಸ್‌ಟಿ ಹಾಕುವ ಮೂಲಕ ಬಡವರ ಹೊಟ್ಟೆ ಹೊಡೆ ಯಲು ಸರಕಾರ ಪ್ರಾರಂಭಿಸಿದೆ.

ಪೆಟ್ರೋಲ್, ಡೀಸೆಲ್ ಹಾಗು ಗ್ಯಾಸ್ ಮೇಲೆ ಅಗತ್ಯಕ್ಕಿಂತ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಸರಕಾರಕ್ಕೆ ಬಡವರು ಉಪಯೋ ಗಿಸುವ ದೈನಂದಿನ ವಸ್ತುಗಳ ಮೇಲೂ ಕಣ್ಣು ಬಿದ್ದಿದೆ. ಜಿಎಸ್‌ಟಿ ವಿಧಿಸಿ ಬಡವರ ಅನ್ನವನ್ನು ಕಸಿದುಕೊಳ್ಳಲಾಗುತ್ತಿದೆ.

ಇದೇನಾ ಅಚ್ಚೆದಿನ್? ಬಡವರ ಹೊಟ್ಟೆಯ ಮೇಲೆ ಹೊಡೆದು ಸೌಧ ನಿರ್ಮಿಸುವುದು ಯಾರಿಗಾಗಿ ತೆರಿಗೆ ಹೆಸರಲ್ಲಿ ಲೂಟಿ ಮಾಡುವುದಕ್ಕೂ ಮಿತಿ ಬೇಡವೇ? ಇದು ಜನ ವಿರೋಧಿ ನಿರ್ಧಾರ ಎಂದು ಸರಕಾರಗಳ ವಿರುದ್ದ ಹರಿಹಾಯ್ದರು.