Wednesday, 18th September 2024

mla Yeshwanthrayagowda patil: ಗ್ಯಾರಂಟಿಗಳ ಆರ್ಥಿಕ ಹೊರೆಯಾದರೂ ಜನಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿ

indi

ಇಂಡಿ: ತಾಲೂಕಿನಾದ್ಯಂತ ಮೇಘರಾಜನ ಕೃಪೆಯಾಗಿದೆ. ಸರ್ಕಾರಗಳು ಏನೆಲ್ಲಾ ಮಾಡಿದರೂ ಅಸಾಧ್ಯ.ಭಗವಂತನ ಕೃಪೆ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಒದಿಗಸುವುದು ಸರ್ಕಾರಗಳ ಆದ್ಯ ರ‍್ತವ್ಯ. ಈ ಒಂದು ನಿಟ್ಟಿನಲ್ಲಿ ಇಂದು ರಾಜ್ಯ ಸರ್ಕಾರ ಗ್ಯಾರಂಟಿಗಳ ಆರ್ಥಿಕ ಹೊರೆಯಾದರೂ ಜನಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಸಾಲೋಟಗಿ ಗ್ರಾಮದ ಶ್ರೀ ಶೀವಯೋಗೇಶ್ವರ ಪ್ರಾಥಮಿಕ ಶಾಲೆಯಲ್ಲಿ ಲೋಕೊಪಯೋಗಿ ಇಲಾಖೆಯ ವತಿಯಿಂದ ಹಮ್ಮಿಕೊಂಡ ಔರಾದ ಸದಾಶಿವಗಡ ರಸ್ತೆ ಸುಧಾರಣೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಒಂದು ದೇಶದ ಅಭಿವೃದ್ದಿಗೆ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವುದೇ ರ‍್ಕಾರಗಳು ಯೋಜನೆ ರೂಪಿಸುವಾಗ ರಸ್ತೆಗಳಿಗಾಗಿ ನರ‍್ವಹಣೆಗೆ ಅನುಧಾನ ಇಡಬೇಕು.ಇಲ್ಲಿಯವರೆಗೆ ಹಾಗಾಗದೇ ಇರುವುದರಿಂದ ಇಂದು ವಿಜಯಪುರ ಇಂಡಿ, ಚಿಕ್ಕಮಣೂರ ರಸ್ತೆಗಳು ಹಾಳಾಗಿವೆ. ತಾಲೂಕಿನಾಧ್ಯಂತ ಈ ಹಿಂದೆ, ವಿದ್ಯುತ್ ಪರಿಸ್ಥಿತಿ, ಹೇಳತಿರದು.ಓಬಿರಾಯನ ಕಾಲದ ವಿದ್ಯುತ್ ತಂತಿಗಳು ಅಳವಡಿಸಿರುವುದರಿಂದ ವಿದ್ಯುತ್ ಸರ‍್ಪಕವಾಗಿ ರೈತರಿಗೆ,ಗ್ರಾಮಗಳಿಗೆ ಪೊರೈಕೆಯಾಗುತ್ತಿರಲಿಲ್ಲ. ನಾನು ಶಾಸಕನಾದ ಮೇಲೆ ಇಡೀ ತಾಲೂಕಿನ ಎಲ್ಲಾ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ಸರ‍್ಪಕ ವಿದ್ಯುತ್ ಪೊರೈಕೆಗೆ ಕ್ರಮ ಕೈಗೊಂಡಿದ್ದೇನೆ.

ಜಲಧಾರೆ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪರ‍್ಣ ನಿವಾರಣೆಯಾಗಲಿದೆ. ರಾಜ್ಯದ ಕಾಂಗ್ರೆಸ್ ರ‍್ಕಾರ ಚುನಾವಣೆ ಪರ‍್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಈ ಗ್ಯಾರಂಟಿ ಯೋಜನೆ ಬಡವರಿಗೆ ನರ‍್ಗತಿಕರಿಗೆ ರ‍್ಥಿಕ ಅನುಕೂಲವಾಗಿದೆ. ತಿಂಗಳಿಗೆ ೩೮ ಕೋಟಿ ಗ್ಯಾರಂಟಿಯಿಂದ ರ‍್ಕಾರಕ್ಕೆ ಹೊರೆಯಾಗುತ್ತಿದೆ.ಕಾಂಗ್ರೆಸ್ ರ‍್ಕಾರ ಅಶಕ್ತರಿಗೆ ಶಶಕ್ತರನ್ನಾಗಿ ಮಾಡಿದೆ.ಸಿಎಂ ಸಿದ್ದರಾಮಯ್ಯ ಈ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ.ನನ್ನ ಮತಕ್ಷೇತ್ರಕ್ಕೆ ಈ ಹಿಂದೆ ೪ ಸಾವಿರ ಕೋಟಿ ಅನುಧಾನ ನೀಡಿದ್ದಾರೆ.ಹೀಗಾಗಿ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುವೆನು ಎಂದು ಹೇಳಿದರು.

ತಾಲೂಕಿನ ಮಹತ್ವಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾದ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ಸುಮಾರು ೨೧ ಸಾವಿರ ಹೆಕ್ಟರ್ ಅಂದರೆ ೭೦ ಸಾವಿರ ಎಕರೆ ಭೂಮಿಗೆ ನೀರಾವರಿಯಾಗ ಲಿದೆ ಎಂದು ಹೇಳಿದರು.

ನನ್ನ ಅಧಿಕಾರವಧಿಯಲ್ಲಿ ಸ್ಥಳೀಯ ಸಂಸ್ಥೆಗಳಾದ ತಾಪಂ,ಜಿಪಂ ಹಾಗೂ ಪುರಸಭೆ,ಕೆಎಂಎಫ್ ಹಾಗೂ ನಾಮನರ‍್ದೇಶಕ ಸ್ಥಾನಗಳಿಗೆ ಸಾಮಾಜಿಕ ನ್ಯಾಯ ನೀಡಿದ್ದೇನೆ.೧೨ ನೇ ಶತಮಾನದ ಅಣ್ಣಬಸವಣ್ಣನವರ ಹಾಗೂ ಬುದ್ದ,ಬಸವ,ಅಂಬೇಡ್ಕರ ಅವರ ತತ್ವ,ಸಿದ್ದಾಂತದಂತೆ ಆಡಳಿತದಲ್ಲಿ ಸಮಾನತೆ ನೀಡಿದ್ದೇನೆ ಎಂದು ಹೇಳಿದ ಅವರು, ೪೦ ರ‍್ಷ ನನ್ನ ರಾಜಕೀಯ ಈ ತಾಲೂಕಿಗೆ ಧಾರೆ ಎರೆದಿರುವೆ.ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕರ‍್ಖಾನೆಯನ್ನು ರೈತರ ಆಸ್ತಿಯನ್ನಾಗಿ ಮಾಡಿರುವೆ ಎಂದು ಹೇಳಿದರು.ಸೋಮಯ್ಯ ಚಿಕ್ಕಪಟ್ಟ,ಸೋಮಯ್ಯ ಹಿರೇಪಟ್ಟ ಸಾನಿಧ್ಯ ವಹಿಸಿದ್ದರು.

ಲೋಕೊಪಯೋಗಿ ಇಲಾಖೆಯ ಎಇಇ ದಯಾನಂದ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ,ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಜೋತಗೊಂಡ,ಶಿವಯೋಗೆಪ್ಪ ಚನಗೊಂಡ, ಮಲ್ಲನಗೌಡ ಪಾಟೀಲ,ಇಲಿಯಾಸ ಬೊರಾಮಣಿ, ಜಾವೇದ ಮೋಮಿನ, ವಿಜುಗೌಡ ಪಾಟೀಲ, ಬಸುಸಾಹುಕಾರ ಇಂಡಿ, ಬಾಬುಸಾಹುಕಾರ , ಎಸ್.ಜೆ.ಮಾಢ್ಯಾಳ, ಸುಭಾಷ ಹಿಟ್ನಳ್ಳಿ, ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *