Sunday, 15th December 2024

Gubbi: ಈ ಕಾಲೇಜಿಗೆ B ಶ್ರೇಣಿ ಮಾನ್ಯತೆ

ಗುಬ್ಬಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಮೌಲ್ಯಮಾಪನ / ಮರು ಮೌಲ್ಯಮಾಪನ ಪ್ರಕ್ರಿಯೆ ಯ ನಡೆದಿದ್ದು, B ಶ್ರೇಣಿ ಮಾನ್ಯತೆಯನ್ನು ಈ ಕಾಲೇಜಿಗೆ ನೀಡಿದ್ದಾರೆ.

ಇದನ್ನು ಗುರುತಿಸಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಲಕ ಕಾಲೇಜಿನ ಪ್ರಾಂಶಪಾಲ ಡಾ.ಪ್ರಸನ್ನ, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಿಕಾರ್ಜುನ್ ಪ್ರಭು ಅಭಿನಂದನಾ ಪತ್ರ ಸ್ವಿಕರಿಸಿದರು.

ನ್ಯಾಕ್ ಮೌಲ್ಯಮಾಪನ / ಮರು ಮೌಲ್ಯಮಾಪನ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸಿದ ಕಾಲೇಜಿನ ಪ್ರಾಂಶು ಪಾಲರು, ಅಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರು. ಸಹ-ಸಂಚಾಲಕರು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.