Sunday, 15th December 2024

ತಾಲೂಕಿನ ಮತದಾರರು ಪ್ರತಿ ಉತ್ತರ ನೀಡಿದ್ದಾರೆ

ಗುಬ್ಬಿ: ಈ ಬಾರಿಯ ಗೆಲುವು ತಾಲೂಕಿನ ಮತದಾರರ ಗೆಲುವು ಜನರ ಮುಂದೆ ಯಾರು ದೊಡ್ಡವರಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಎಸ್ ಆರ್ ಶ್ರೀನಿವಾಸ್ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ನನ್ನ ಜೊತೆಗಿದ್ದ ಹಲವು ಮುಖಂಡರು ಸಹಾಯ ಪಡೆದು ಚುನಾವಣೆಯ ಸಂದರ್ಭದಲ್ಲಿ ನನ್ನ ವಿರುದ್ಧವಾಗಿ ಕುತಂತ್ರ ನಡೆಸಿ ದರು. ಆದರೆ ತಾಲೂಕಿನ ಮತದಾರರು ಅದಕ್ಕೆ ಪ್ರತಿ ಉತ್ತರ ನೀಡಿದ್ದಾರೆ.
ಎಸ್ಸಿ ಎಸ್ಟಿ ಅಲ್ಪಸಂಖ್ಯಾತ ಎಲ್ಲಾ ಶೋಷಿತ ಸಮುದಾಯ ನನ್ನ ಗೆಲುವಿಗೆ ಶ್ರಮಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ತರುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ ಯಾವುದೇ ಗೊಂದಲಗಳಿಗೆ ಕಿವಿಗೊ ಡದೆ ಗುಬ್ಬಿ ತಾಲೂಕಿನಲ್ಲಿ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಆರ್ ಶ್ರೀನಿವಾಸ್ ಪರ ಬೆಂಬಲ ವ್ಯಕ್ತಪಡಿಸುವ ಮೂಲಕ ಗೆಲುವಿಗೆ ಕಾರಣವಾಗಿದೆ. ಸಂವಿಧಾನದ ಬದಲಾವಣೆಗೆ ಅವಕಾಶ ಕೊಡದೆ ಸಂವಿಧಾನದ ರಕ್ಷಣೆಗೆ ನಿಲ್ಲಬೇಕೆಂಬ ರಾಜ್ಯ ಸಮಿತಿಯ ನಿರ್ಣಯದಂತೆ ಎಲ್ಲಾ ದಲಿತ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ, ಗ್ರಾ ಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾದೇವಯ್ಯ, ಬಿಕ್ಕೆಗುಡ್ಡ ಕೃಷ್ಣಪ್ಪ, ಮಾರ ಶೆಟ್ಟಿಹಳ್ಳಿ ಬಸವರಾಜು, ಮಂಜೇಶ್, ಲಕ್ಕೇನಹಳ್ಳಿ ನರಸೀಯಪ್ಪ, ಪುಟ್ಟರಾಜು, ಎಂ ಡಿ ಶಿವಣ್ಣ,ಲೋಕೇಶ್, ಬಸವರಾಜು, ಮಲ್ಲೇಶ್, ಪಣೀಂದ್ರ , ದೊಡ್ಡಯ್ಯ, ರವಿಕುಮಾರ್, ಮುಂತಾದವರಿದ್ದರು.