ತುಮಕೂರು: ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಪೊರಕೆ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ 21 ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪೊರಕೆ ಹಿಡಿದು ಸರಕಾರಿ ಕಚೇರಿಯ ಕಸ ಗುಡಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್, ಮಾತನಾಡಿ 21.ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಬೀದಿಬದಿ ಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸದೆ, ವಿದ್ಯಾರ್ಥಿಗಳಿಗೂ ಅನ್ಯಾಯ ಮಾಡುತ್ತಾ, ನಮ್ಮ ನ್ಯಾಯಯುತ ಧ್ವನಿಗೂ ಅನ್ಯಾಯ ವೆಸಗುತಿದೆ. ಸರ್ಕಾರ ಕಚೇರಿಯ ಸ್ವಚ್ಛ ಮಾಡುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಿಹಿಸುತ್ತಿದ್ದೇವೆ ಎಂದರು.
ಅತಿಥಿ ಉಪನ್ಯಾಸಕಿ ಡಾ.ಜಾಲಜಾಕ್ಷಿ ಮಾತನಾಡಿ ಪಂಜಾಬ್, ತೆಲಂಗಾಣ, ತಮಿಳುನಾಡು, ದೆಹಲಿ, ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿದ್ದು. ರಾಜ್ಯ ಸರ್ಕಾರ ನಮ್ಮನ್ನು ಕಾಯಾಮಾತಿಮಾಡಿ ಆದೇಶ ಹೊರಡಿಸಿದರೆ ನಮಗೆ ಕೊಡಬೇಕಾದ ವೇತನವನ್ನು ಯುಜಿಸಿಯೇ ಬರಿಸುತ್ತದೆ. ರಾಜ್ಯ ಸರ್ಕಾರ ಕೇವಲ 25% ವೇತನವನ್ನು ಮಾತ್ರ ಕೊಡಬೇಕಾಗುತ್ತದೆ ಆದ್ದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಒರೆ ಯಾಗುವುದಿಲ್ಲ. ಸಿದ್ದರಾಮಯ್ಯನವರು ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭಾಗ್ಯ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಅಂಬಿಕಾ.ಕೆ.ಆರ್,ಸವಿತ,ವಿನುತಾ, ಡಾ.ಶಿವಣ್ಣ ತಿಮ್ಮಲಾಪುರ, ಡಾ.ಮಲ್ಲಿಕಾರ್ಜನಯ್ಯ,ಎಂ.ಟಿ, ಶಂಕರ ಹಾರೋಗೆರೆ, ಗಿರೀಶ್,ನಟರಾಜು, ಶಶಿಧರ್, ಮಾದೇವಯ್ಯ, ವೇದಮೂರ್ತಿ, ಕಿರಣ ಕುಮಾರ್, ಜಯರಾಮು, ನಟರಾಜು,ಶಿಲ್ಪ,ಶ್ವೇತ,ನಾಗೇಂದ್ರ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.