Wednesday, 9th October 2024

ಮಕ್ಕಳಿಗೆ ಹಿಂದಿನ ಗುರುಕುಲ ಪದ್ದತಿಯ ಆಚಾರ ವಿಚಾರಗಳನ್ನು ಕಲಿಸಬೇಕು

ಯೋಗದಲ್ಲಿ ಸಾಧನೆಗೈದರೆ ಮಾನವನ ಬದುಕು ಸಾರ್ಥಕ

ಗುರುಕುಲಾನಂದಾಶ್ರಮದ ಶತಮಾನೋತ್ಸವ ಹಾಗೂ ಪೀಠಾರೋಹಣದ ಬೆಳ್ಳಿ ಹಬ್ಬ ಕಾರ್ಯಕ್ರಮ

ತಿಪಟೂರು : ಇಂದಿನ ಜಗತ್ತು ವಿಜ್ಞಾನ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿ ಅಭಿವೃದ್ದಿ ಹೊಂದಿದರು ಸಹ ಇಂದಿನ ಮಕ್ಕಳಿಗೆ ಆಚಾರ-ವಿಚಾರ, ಸಂಸ್ಕಾರ-ಸAಸ್ಕೃತಿ, ಶಿಸ್ತು-ಸಂಯಮವನ್ನು ಕಲಿಸಬೇಕು ಎಂದು ಭದ್ರಾವತಿ ಶಿವಯೋಗಾ ಶ್ರಮ ಶೀಲ ಸಂಪಾ ದನಾ ಮಠದ ಸಿದ್ದಲಿಂಗಸ್ವಾಮಿ ಮಹಾಸ್ವಾಮಿಜಿ ತಿಳಿಸಿದರು.

ನಗರದ ಕೆ.ಆರ್.ಬಡಾವಣೆಯ ಗುರುಕುಲಾನಂದಾಶ್ರಮದಲ್ಲಿ ಭಾನುವಾರ ಲಿಂ.ಜಗದ್ಗುರು ಗಳ ೧೧೨ನೇ ಸಂಸ್ಮರಣೆ, ಗುರು ಕುಲಾನಂದಾಶ್ರಮದ ಶತಮಾನೋತ್ಸವ ಸಮಾರಂಭ, ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿಯವರ ಪೀಠಾರೋಹಣದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂದೆತಾಯಿಗಳು ತಮ್ಮ ಮಕ್ಕಳನ್ನು ಸಮಾಜಕ್ಕೆ ಮಾರಕ ಮಾಡದೆ ಸ್ಮಾರಕವನ್ನಾಗಿ ಮಾಡಬೇಕು. ಅವರಿಗೆ ನೈತಿಕ ಶಿಕ್ಷಣ, ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಸಮಾಜದ ಸುಸ್ಥಿತಿಗಾಗಿ ಹೋರಾಡಿದ ಮಹಾನೀಯರ ಉತ್ಸವ, ಮೆರವಣಿಗೆ ನಡೆಯುತ್ತಿದೆಯೋ ಹೊರತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಕೆಲಸ ಯಾರೂ ಮಾಡುತ್ತಿಲ್ಲ. ಯುವಪೀಳಿಗೆಯಲ್ಲಿ ಧಾರ್ಮಿಕ ಪ್ರಜ್ಞೆ, ಚಿಂತನೆ ಮೂಡಬೇಕಾಗಿದೆ ಅದ್ದರಿಂದ ಇಂದಿನ ಮಕ್ಕಳಿಗೆ ಪುರಾತನ ಕಾಲದ ಗುರುಕುಲ ಪದ್ದತಿಯ ಶಿಕ್ಷಣ ಅವಶ್ಯಕತೆ ಬೇಕಾಗಿದೆ ಎಂದರು.

ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿಯವರು ಮಾನವೀಯ ಮೌಲ್ಯ ಹಾಗೂ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧಾರ್ಮಿಕ ಪ್ರಜ್ಞೆ ಬೆಳೆಸಿಕೊಳ್ಳವ ಜೊತೆಗೆ ಮಾನವ ತನ್ನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಸಾಧನೆಗೈದರೆ ಬದುಕು ಸಾರ್ಥಕವಾಗುತ್ತದೆ.

ಜೀವನದ ಸಾರ್ಥಕತೆಗೆ ಸತ್ಯ, ಅಹಿಂಸೆಯ ಜೊತೆ ಶರಣರ ತತ್ವಾದರ್ಶಗಳು ಅವಶ್ಯಕವಾಗಿದ್ದು, ಇದರಿಂದ ಮಾನವ ಪರಿಪೂರ್ಣ ಜೀವನಕ್ಕೆ ಸಹಕಾರಿಯಾಗಲಿದೆ. ಜ್ಞಾನ ಸುಖ ಶಾಂತಿ, ನೆಮ್ಮದಿಗಳು ನಮ್ಮೊಳಗೆ ಇದ್ದು ಅದನ್ನು ಅಂತರ್ಮುಖಿಗೊಳಿಸುವ ಮೂಲಕ ನಿಮ್ಮನ್ನು ನೀವು ಕಂಡುಕೊಳ್ಳುವದರಿ0ದ ವ್ಯಕ್ತಿತ್ವ ಶ್ರೀಮಂತವಾಗುತ್ತದೆ. ಇಂದಿನ ಯುವ ಪೀಳಿಗೆ ಆಧ್ಯಾತ್ಮದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತುನೀಡುವುದರ ಜೊತೆಗೆ ಆಧ್ಯಾತ್ಮದ ಅರಿವನ್ನು ಪಡೆದುಕೊಂಡು ಉತ್ತಮ ಬದುಕನ್ನು ಸಾಕಾರ ಗೊಳಿಸಿಕೊಳ್ಳಬೇಕು. ಭಕ್ತರ ಸಹಕಾರದಿಂದಲೇ ಗುರುಕುಲಾನಂದಾಶ್ರಮ ಶತಮಾನೋತ್ಸವವನ್ನು ಪೂರ್ಣಗೊಳಿಸುತ್ತಿದ್ದು, ಮುಂದಿನ ದಿನಗಳಮಿದೇ ರೀತಿಯಲ್ಲಿ ಸಹಕಾರ ನೀಡಬೇಕು ತಿಳಿಸಿದರು.

ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಬೇಕಾದರೆ ಮನುಷ್ಯ ಮಾನವೀಯ ಮೌಲ್ಯ, ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಕೇವಲ ಕ್ಷಣಿಕ ಸುಖದ ವ್ಯಾಮೋಹಕ್ಕೆ ಒಳಗಾಗದೆ ದಾನ, ಧರ್ಮದಂತಹ ಸಾಮಾಜಿಕ ಕಳಕಳಿಯ ಕೆಲಸ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಸ್ವಾರ್ಥ ಪರ ಚಿಂತನೆಗಳು ಹೆಚ್ಚಾಗಿ ಕೇವಲ ನಾನು, ನನ್ನ ಕುಟುಂಬ ಎಂಬ ಭಾವನೆ ಎಲ್ಲರಲ್ಲಿಯೂ ಬೆಳೆಯುತ್ತಾ ಸಮಾಜಕ್ಕೆ ಪೆಟ್ಟು ಬೀಳುತ್ತಿದೆ. ಪ್ರತಿಯೊಬ್ಬರು ಸಂಸ್ಕಾರಯುತ ಬದುಕನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕಿದೆ. ಹಿರಿಯ ಗುರುಗಳು ಸಮಾಜದ ಏಳಿಗೆಗಾಗಿ ಮುಂದಾಲೋಚನೆಯಿAದ ಕ್ಷೇತ್ರವನ್ನು ಸ್ಥಾಪಿಸಿ ಬಡ, ಹಿಂದುಳಿದ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ದೊರಕಿಸಿ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ತರಲು ಪ್ರಯತ್ನಿಸಿದರು. ಅವರ ಆಶಯದಂತೆಯೇ ಇಗೀನ ಗುರುಗಳು ಕಾರ್ಯೋನ್ಮುಕರಾಗಿರುವುದು ಸಂತಸದ ಸಂಗತಿಯಾಗಿದೆ. ಸಂಸ್ಥೆಯ ಬೆಳವಣಿಗಾಗಿ ಶ್ರಮಿಸುತ್ತಿರುವ ಶ್ರೀಗಳಿಗೆ ಎಲ್ಲರ ಸಹಕಾರ ಅವಶ್ಯಕವಾಗಿದೆ. ಇಂದಿನ ಯುವಪೀಳಿಗೆ ಜಾಗೃತಗೊಳಿಸಲು ಧಾರ್ಮಿಕ ವಿಚಾರಗಳನ್ನು ಮನದಟ್ಟು ಮಾಡುವ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಶ್ರೀಮಠದ ಕಾರ್ಯ ಅತ್ಯವಶ್ಯಕವಾಗಿದೆ ಎಂದರು.

ಸ0ಸದ ಜಿ.ಎಸ್.ಬಸವರಾಜು ಗುರುಕುಲಶ್ರೀ ತ್ರೆöÊಮಾಸಿಕ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜ್ಞಾನದರ್ಶನ ಎಂಬ ಕೃತಿಯ ಲೋಕಾರ್ಪಣೆಯನ್ನು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ ಮಹದೇವ ಬಿದರಿ ನೆರವೇರಿಸಿದರು. ಕಾಂಗ್ರೆಸ್ ಮುಖಂಡ ಲೋಕೇಶ್ವರ ಮಾತನಾಡಿದರು.

ಗುರುಕುಲಶ್ರೀ ಗೌರವ : ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿರುವ ಸಾಧಕ ಮಹನೀಯರಿಗೆ ಶ್ರೀಸಂಸ್ಥಾನದ ವತಿಯಿಂದ ಪ್ರತಿವರ್ಷ ಕೊಡಮಾಡುವ ‘ಗುರುಕುಲಶ್ರೀ’ ಗೌರವವನ್ನು ಬೆಂಗಳೂರಿನ ಜಾಗತಿಕ ನೊಳಂಬ ಒಕ್ಕೂಟದ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಕೆಂಪಗೌಡರ್‌ಗೆ ಅವರಿಗೆ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್, ರಾಜ್ಯ ಸರ್ಕಾರದ ಕಾರ್ಯದರ್ಶಿ ಬಿ.ಗುರುಪ್ರಸಾದ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಸ್ಪರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಎಸ್.ಚ0ದ್ರಮೌಳಿ, ಆಗ್ರೋಪ್ಲಾಸ್ಟ್ನ ಮಾಲೀಕ ಆರ್.ವಿವೇಕಾನಂದ, ನೊಳಂಬ ಸ್ವಯಂ ಸೇವಾ ಸಂಘದ ಸಂಸ್ಥಾಪಕ ಡಾ.ಎಂ.ವಿ.ಧನ0ಜಯ, ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೋಹನ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಶಶಿಕಿರಣ್, ಸದಸ್ಯ ಯೋಗೀಶ್, ಮಠದ ಸಿಇಓ ಹರಿಪ್ರಸಾಸ್ ಸೇರಿದಂತೆ ಹಲವರು ಇದ್ದರು.