ಚಿಕ್ಕಬಳ್ಳಾಪುರ: ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ನಗರದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ಸೋಮವಾರ ಕೇಕ್ ಕತ್ತರಿಸಿ, ಪಟಾಕಿಸಿಡಿಸುವ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿರವರ ೬೫ನೇ ಜನ್ಮದಿನಾಚರಣೆಯನ್ನು ಸಂಭ್ರದಿಂದ ಆಚರಿಸಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ನಮ್ಮ ನಾಯಕರಾದ ಹೆಚ್.ಡಿಕುಮಾರಸ್ವಾಮಿ ಕರುನಾಡು ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದರು. ಜನಪರ ಚಿಂತನೆ, ಕಾಳಜಿ, ದೂರದೃಷ್ಟಿತ್ವ ಹೊಂದಿರುವ ಅಪರೂಪದ ಜನನಾಯಕರಾಗಿದ್ದಾರೆ.
ಪ್ರಜೆಗಳ ನೋವು ಆಲಿಸಲು ಪ್ರಜೆಗಳ ಬಳಿಯೇ ತೆರಳಿ ಅವರ ನೋವು ನಿವಾರಿಸಿದ ಹೃದಯವಂತ ರಾಜಕಾರಣಿ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯವನ್ನು ಮುನ್ನಡೆಸಿದ ಧೀಮಂತ ನಾಯಕ. ಜನತಾ ದರ್ಶನದ ಹರಿಕಾರ, ಗ್ರಾಮವಾಸ್ತವ್ಯದ ಗುರಿಕಾರ. ರೈತ ಪರ ಕಾಳಜಿ ಯಿಂದ ರೈತರಿಗೆ ನಾನಾ ಯೋಜನೆಗಳ ಜೊತೆಗೆ ರೈತನನ್ನು ಸಾಲ ಮುಕ್ತಗೊಳಿಸಿದ ಮಣ್ಣಿನ ಮಗ. ಜನತೆಯ ಹಿತಕ್ಕಾಗಿ ನಿಸ್ವಾರ್ಥ ಜನಸೇವೆ ಮುಂದುವರೆಯಲು ಜನರ ಆಶೀರ್ವಾದ ಸದಾ ಅವರ ಮೇಲಿರಲಿ ಎಂದರು.
ಜನರು ನೀಡುವ ಎಲ್ಲಾ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ಸಮಾಜಕ್ಕೆ ಅಂಕಿತರಾಗಿ,ಜನತೆಯ ಆಶೋತ್ತರಳಿಗೆ ಸ್ಪಂದಿಸಿ ದುಡಿಮೆ ಮಾಡುತ್ತಿರುವ ಕುಮಾರಸ್ವಾಮಿಯವರಿಗೆ ಭಗವಂತನು ಆಯಸ್ಸು ಆರೋಗ್ಯವನ್ನು ನೀಡಲಿ ಎನ್ನುವುದು ಲಕ್ಷಾಂತರ ಜನರ ಆಶಯವಾಗಿದೆ.
ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ,ಬಹುದಿನಗಳ ಬೇಡಿಕೆಯಾದ ಚಿಕ್ಕಬಳ್ಳಾಪುರವನ್ನು ನೂತನ ಜಿಲ್ಲೆ ಮಾಡುವ ಪ್ರಸ್ತಾಪವಿಟ್ಟಾಗ ಹಿಂದೆಮುAದೆ ನೋಡದೆ ಮುಖ್ಯಮಂತ್ರಿ ಆಗಿದ್ದಾಗ ೨೦೦೭ರ ಆಗಸ್ಟ್ ೨೩ರಂದು ಚಿಕ್ಕಬಳ್ಳಾಪುರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರು.ವಿವಾದಿತ ಜಕ್ಕಲ ಮೊಡಗು ಕುಡಿಯುವ ನೀರಿನ ಬಿಕ್ಕಟ್ಟು ಪರಿಹಾರ ಮಾಡಿದ್ದಲ್ಲದೇ, ನಗರಕ್ಕೆ ಯೂಜಿಡಿ ವ್ಯೆವಸ್ಥೆಯನ್ನು ಸಹಾ ಮಾಡಿ, ಸಾಕಷ್ಟು ರೈತರ ಸಾಲ ಮನ್ನಾ, ಲಾಟರಿ ನಿಷೇಧ ದಂತಹ ಕಾರ್ಯಕ್ರಮ ಮಾಡಿದ್ದಾರೆ. ಅವರಿಗೆ ಸದಾ ಅಧಿಕಾರ ಮತ್ತು ಆರೋಗ್ಯವನ್ನು ಆ ಭಗವಂತ ಕರುಣಿಸಿ ಮತ್ತಷ್ಟು ಜನಪರ, ರೈತಪರ ಕಾರ್ಯಕ್ರಮ ಮಾಡಲಿ ಎಂದರು.
ಇದೇ ವೇಳೆ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿಯವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ ಮಾಡಿ ದಾಗ ಮಾದ್ಯಮಗಳು ಕುಮಾರಸ್ವಾಮಿಯವರಿಗೆ ಜಿಲ್ಲೆಗೆ ಕೃಷ್ಣಾ ನದಿ ನೀರು ಮತ್ತು ಕೈಗಾರಿಕೆಗಳ ಬಗ್ಗೆ ಪ್ರಶ್ನಿಸಿದಾಗ ಹೆಚ್.ಡಿ.ಕುಮಾರಸ್ವಾಮಿ ಉತ್ತರಿಸಿ, ರಾಮನಗರ ಜಿಲ್ಲೆಯನ್ನು ಮಾಡುವಾಗ ಚಿಕ್ಕಬಳ್ಳಾಪುರವನ್ನು ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದೆ ಅದರಂತೆ ನಡೆದು ಕೊಂಡಿದ್ದೇನೆ. ಈಗ ಕೇಂದ್ರ ಸಚಿವನಾಗಿದ್ದೇನೆ. ಜಿಲ್ಲೆಗೆ ಬೇಕಾದ ಕೈಗಾರಿಕೆ ಮತ್ತು ಜಿಲ್ಲೆಯ ಗಡಿಯವರೆಗೂ ಬಂದಿರುವ ಕೃಷ್ಣಾನದಿ ನೀರನ್ನು ಜಿಲ್ಲೆಗೆ ಹರಿಸಲು ಆಂದ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬುನಾಯ್ಡು ರವರಲ್ಲಿ ಮನವಿ ಮಾಡಲಿದ್ದೇನೆ. ಈಬಗ್ಗೆ ಶೀಘ್ರದಲ್ಲೆ ಗಮನ ಹರಿಸುವುದಾಗಿ ಆಶ್ವಾಸನೆ ನೀಡಿದರು.
ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನದ ಪ್ರಯುಕ್ತ ಜೆಡಿಎಸ್ ವತಿಯಿಂದ ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ, ಮಾನಸ ವೃದ್ದಾಶ್ರಮದಲ್ಲಿ ವೃದ್ದರಿಗೆ ಭೋಜನ ವ್ಯೆವಸ್ಥೆ ಯನ್ನು ಮಾಡಲಾಗಿತ್ತು.
ಈ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಮುಖಂಡರಾದ ಪ್ರಭಾ ನಾರಾಯಣಗೌಡ, ಹೆಚ್.ನಾರಾಯಣಗೌಡ,ಶಾಂತಮೂರ್ತಿ,ವೆAಕಟೇಶ್,ಅಮರ್,ಸೊಣ್ಣೇಗೌಡ,ಬಂಡ್ಲು ಶ್ರೀನಿವಾಸ್, ಸ್ಟುಡಿಯೋ ಮಂಜು,ಮೌಲಾ, ಹೆಚ್.ಡಿ.ಕೆ. ಅಭಿಮಾನಿಗಳು,ಜೆಡಿಎಸ್ ಕಾರ್ಯಕರ್ತರು, ಮತ್ತಿತರರು ಇದ್ದರು.
ಇದನ್ನೂ ಓದಿ: #HDKumaraswamy