Thursday, 12th December 2024

ಹನುಮೇನಹಳ್ಳಿ ಸೋಂಪುರಕ್ಕೆ ಕಲ್ಪಿಸುವ ಮುಖ್ಯ ರಸ್ತೆ ಕೊಚ್ಚಿಕೊಂಡು ಹೋಗಿ ಗ್ರಾಮಕ್ಕೆ ದಿಗ್ಬಂಧನ

ಕೊರಟಗೆರೆ: ತಾಲೂಕಿನಾದ್ಯಾಂತ ಸುರಿಯುತ್ತಿರುವ ರಣ ಬೀಕರ ಮಳೆ ಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಅಪಾಯ ಮಟ್ಟಕ್ಕೆ ಹರಿಯುತ್ತಿವೆ. ಕೆಲವು ಕಡೆ ಜನರ ಜೀವನ ಅಸ್ಥವ್ಯಸ್ಥಗೊಂಡಿದೆ.

ಹನುಮೇನಹಳ್ಳಿ ಸೋಂಪುರಕ್ಕೆ ಕಲ್ಪಿಸುವ ಮುಖ್ಯ ರಸ್ತೆ ಕೊಚ್ಚಿಕೊಂಡು ಹೋಗಿ ಗ್ರಾಮಕ್ಕೆ ದಿಗ್ಬಂಧನ ಹಾಕುಂತೆ ಆಗಿದೆ. ಸಾಮಾನ್ಯ ಜನರ ಗೋಳು ಕೇಳೋರು ಯಾರು ಎನ್ನುತ್ತಿದ್ದಾರೆ ಜನರು.

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಪಂಯ ಹನುಮೇನಹಳ್ಳಿ ಸೋಂಪುರ ಕಲ್ಪಿಸುವ ರಸ್ತೆ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ರಣ ಬೀಕರ ಮಳೆಯಿಂದಾಗಿ ರಸ್ತೆ ಕೊಚ್ಚಿಕೊಂಡು ಹೋಗಿದೆ. ಸುಮಾರು ಐದು ಗ್ರಾಮಗಳಿಗೆ ಸಂಪರ್ಕಸುವ ರಸ್ತೆ ಇದಾಗಿದ್ದು ೫ ಗ್ರಾಮದ ಜನರ ಜೀವನ ಅಸ್ಥವ್ಯಸ್ಥವಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕು ತ್ತಿದ್ದಾರೆ.

ಹನುಮೇನಹಳ್ಳಿ-ಸೋಂಪುರ ಗ್ರಾಮದ ನಡುವೆ ಹಾದುಹೋಗುವ ಜಯ ಮಂಗಲಿ ನದಿಗೆ ಅಡ್ಡಲಾಗಿ ಕಳೆದ ೪ವರ್ಷದ ಹಿಂದೇ ನಿರ್ಮಾಣ ಮಾಡಿರುವ ಸೇತುವೆ ಕಂ ಬ್ರೀಡ್ಜ್ ಮಳೆರಾಯನ ಆರ್ಭಟಕ್ಕೆ ಕುಸಿದು ೫ಗ್ರಾಮದ ೪೫೦ಕ್ಕೂ ಅಧಿಕ ಕುಟುಂಬಗಳ ಸಂಪರ್ಕವೇ ಸ್ಥಗೀತವಾಗಿದೆ. ಶಾಲಾ ವಿದ್ಯಾರ್ಥಿಗಳ ಪರಿಸ್ಥಿತಿ ಕೇಳೋರು ಯಾರು..?

ಈ ಗ್ರಾಮಗಳಿಂದ ಪ್ರತಿನಿತ್ಯ ಶಾಲಾ ಕಾಲೇಜು ಹೋಗುವುದಕ್ಕೆ ತೊಂದರೆ ಉಂಟಾಗಿದೆ. ಇನ್ನೂ ಕೂಲಿಗೆ, ವ್ಯಾಪಾರಕ್ಕೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರ ಕಷ್ಟ ಹೇಳತ್ತೀರದು, ಅರ್ಥ ಕಿಲೋ ಹೋಗಬೇಕಾದರೆ ೨೦ ಕಿಲೋ.ಸುತ್ತಿಕೊಂಡು ಬರಬೇಕಾದ ಪರಿಸ್ಥತಿ ನಿರ್ಮಾಣವಾಗದ್ದರೂ ಅಧಿಕಾರಿಗಳಾಲಿ ಯಾವೊಬ್ಬ ಜನಪ್ರತಿನಿಧಿಯಾಗಲಿ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ದೂರಿದರು.

ಪಡಿತರ ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ..: ಹನುಮೇನಹಳ್ಳಿ, ಗೋಡ್ರಹಳ್ಳಿ, ತೊಗರಿಘಟ್ಟ, ಪಣ್ಣೇನಹಳ್ಳಿ ಗ್ರಾಮದ ೪೫೦ಕ್ಕೂ ಅಧಿಕ ಕುಟುಂಬಗಳಿಗೆ ಸಮಸ್ಯೆ ಆಗಿದೆ.. ಅಕ್ಕಿರಾಂಪುರ ಸಂತೆಯ ವಹಿವಾಟು ಮತ್ತು ಪಡಿತರ ಆಹಾರ ಪಡೆಯಲು ಸಮಸ್ಯೆ ಆಗಿದೆ.. ಸೇತುವೆ ದುರಸ್ಥಿ ಆಗದಿದ್ದರೇ ರೈತರ ಮತ್ತಷ್ಟು ಜಮೀನು ನದಿಯ ನೀರಿನಲ್ಲಿ ಕೊಚ್ಚಿ ಹೋಗಲಿದೆ. ಸೇತುವೆ ದಾಟಲಾಗದೇ ಪಡಿತರ ಆಹಾರ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಜಯಮಂಗಲಿ ಸೇತುವೆಗೆ ಭದ್ರತೆ ಅಗತ್ಯ..: ಹನುಮೇನಹಳ್ಳಿ ಗ್ರಾಮಸ್ಥರ ಸಂಚಾರಕ್ಕಾಗಿ ಕಳೆದ ೪ವರ್ಷದ ಹಿಂದೇ ಸೇತುವೆ ನಿರ್ಮಾಣ ಆಗಿದೆ. ಮಳೆರಾಯನ ಆರ್ಭಟದಿಂದ ಸೇತುವೆಯ ಬಲಭಾಗವು ಕುಸಿದಿದೆ. ಸೇತುವೆ ಕುಸಿದಿರುವ ಮಾಹಿತಿ ಇಲ್ಲದೇ ವಾಹನಗಳು ಸಂಚರಿಸಿದರೇ ಬಹುದೊಡ್ಡ ಅನಾಹುತಗಳೇ ಎದುರಾಗಲಿದೆ. ಕೊರಟಗೆರೆ ಆಡಳಿತ ಮತ್ತು ಗ್ರಾಪಂಯಿ0ದ ಎಚ್ಚರಿಕೆಯ ನಾಮಫಲಕ ಅಳವಡಿಸಿ ಸ್ಥಳೀಯರಿಗೆ ಭದ್ರತೆ ನೀಡಬೇಕಿದೆ.

೨೦ಕೀಮೀ ದೂರದ ವಾಹನ ಸಂಚಾರ..
ಹನುಮೇನಹಳ್ಳಿ ಗ್ರಾಮದಿಂದ ಗೌರಿಬಿದನೂರು-ಕೊರಟಗೆರೆ ಮುಖ್ಯರಸ್ತೆಗೆ ಕೇವಲ ಅರ್ಧ ಕೀಮೀನಲ್ಲಿ ಸಂಪರ್ಕ ಪಡೆಯುತ್ತೀದ್ದ ಜನರಿಗೆ ನಗರ ಪ್ರದೇಶಕ್ಕೆ ಸಂಚರಿಸಲು ೨೦ಕೀಮೀ ಸುತ್ತು ಬಳಸಿ ಹೋಗಬೇಕಿದೆ. ಸೇತುವೆ ಕುಸಿದು ವಾರ ಕಳೆದ್ರು ಸಮಸ್ಯೆಯು ಸರಿಹೋಗಿಲ್ಲ. ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜಿಗೆ ತೆರಳಲು ವಾಹನದ ವ್ಯವಸ್ಥೆ ಇಲ್ಲದೇ ಮನೆಯಲ್ಲಿಯೇ ಉಳಿಯುವ ದುಸ್ಥಿತಿ ಎದುರಾಗಿದೆ.

***

ನಮ್ಮ ಗ್ರಾಮಕ್ಕೆ ಸಂಪರ್ಕ ಇರುವ ಸೋಂಪುರ ಹನುಮೇನಹಳ್ಳಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ನಾವು ಊರಿನಿಂದ ಹೊರ ಗಡೆ ಬರಲು ಆಗುತ್ತಿಲ್ಲ. ನಾನು ಈಗಾಗಲೇ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ತಕ್ಷಣ ನಮ್ಮ ಗ್ರಾಮಕ್ಕೆ ರಸ್ತೆ ಕಲ್ಪಸಿ ಎಂದು ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ. ಇದೆ ರೀತಿ ಮುಂದುವರೆದರೆ ತಾಲೂಕು ಕಚೇರಿ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ ಮಾಡಲಾಗುವುದು.

ಹನುಮೇಶ್ ಗ್ರಾಪಂ ಸದಸ್ಯ ಹನುಮೇನಹಳ್ಳಿ

ಮಾವತ್ತೂರು, ತೀತಾ ಜಲಾಶಯ ಡ್ಯಾಂಗಳು ತುಂಬಿ ನೀರಿನ ಹರಿವು ಹೆಚ್ಚಾಗಿ ಜಯಮಂಗಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹನುಮೇನಹಳ್ಳಿಯ ಚೆಕ್‌ಡ್ಯಾಂ ಕಂ ಬ್ರೀಡ್ಜ್ ಸೇತುವೆ ಮತ್ತು ತಡೆಗೋಡೆಗೆ ಸಮಸ್ಯೆಯಾಗಿದೆ. ಸೇತುವೆಯ ರಕ್ಷಣಾ ಕಾಮಗಾರಿಯ ಜೊತೆಯಲ್ಲಿ ರಸ್ತೆಯ ಅಭಿವೃದ್ದಿ ಕಾಮಗಾರಿ ತಕ್ಷಣ ಪ್ರಾರಂಭ ಮಾಡುತ್ತೇವೆ.
ರಮೇಶ್. ಎಇಇ. ಸಣ್ಣ ನೀರಾವರಿ ಇಲಾಖೆ. ಕೊರಟಗೆರೆ.