Sunday, 12th May 2024

ಏ.29ರಂದು ಹಾಸನ ಜಿಲ್ಲಾ ಜನಪರ ಚಳವಳಿ ಒಕ್ಕೂಟ ಪ್ರತಿಭಟನೆ

ಹಾಸನ: ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಶೇರ್ ಮಾಡಿದ ವ್ಯಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿ ಏ.29ರಂದು ಹಾಸನ ಜಿಲ್ಲಾ ಜನಪರ ಚಳವಳಿ ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿದೆ.

ಪೆನ್ ಡ್ರೈವ್ ಮೂಲಕ ಮಹಿಳೆಯರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ಬಿಡುಗಡೆಯಾಗಿ ಹಾಸನದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಪ್ರಭಾವಿಯೊಬ್ಬರು ನೂರಾರು ಮಹಿಳೆಯರನ್ನು ಅಕ್ರಮವಾಗಿ ಲೈಂಗಿಕವಾಗಿ ಬಳಸಿಕೊಂಡು ಅವರ ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಈ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಆ ದೃಶ್ಯಗಳಲ್ಲಿ ಇರುವ ಮಹಿಳೆಯರ ಬದುಕು ಛಿದ್ರವಾಗಿದೆ. ಆದರೆ, ಪ್ರಭಾವಿ ವ್ಯಕ್ತಿ ಮತ್ತು ಇವುಗಳನ್ನು ಸಾರ್ವಜನಿಕವಾಗಿ ಹರಡುತ್ತಿರುವ ವ್ಯಕ್ತಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ.

ಇಂತಹ ವಿಕೃತದಿಂದಾಗಿ ಜಿಲ್ಲೆಯ ಜನ ತಲೆತಗ್ಗಿಸುವಂತಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಸಾರ್ವ ಜನಿಕವಾಗಿ ದೃಶ್ಯಗಳನ್ನು ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!