Thursday, 12th December 2024

ಮಾಜಿ ಶಾಸಕ ಸುರೇಶ್ ಗೌಡ ಹುಟ್ಟುಹಬ್ಬ: ಹಾಡಿ ಹೊಗಳಿದ ಮುದ್ದಹನುಮೇಗೌಡ

ತುಮಕೂರು: ನಿಮ್ಮ ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ಇಡೀ ರಾಜ್ಯಕ್ಕೆ ಸ್ಫೂರ್ತಿಯಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಮುನ್ನಡೆ ಸುತ್ತಿರುವ ನಿಮಗೆ ದೇವರು ಉತ್ತಮ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ನೀಡಲಿ ಎಂದು ಮಾಜಿ ಶಾಸಕರಾದ ಬಿ.ಸುರೇಶಗೌಡರ ಜನ್ಮದಿನಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಶುಭ ಕೋರಿದರು.
ನಗರದ ಹೊರವಲಯದ ಗಂಗಾಧರಯ್ಯ ಮೆಮೋರಿಯಲ್‌ ಹಾಲ್‌ ನಲ್ಲಿ ಮಾಜಿ ಶಾಸಕ ಸುರೇಶಗೌಡರ 57 ನೇ ಜನ್ಮದಿನದ ನಿಮಿತ್ತ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದರು.
ನುಡಿದಂತೆ ನಡೆಯುವ, ಹಿಡಿದ ಕೆಲಸವನ್ನು ಹಠ ಹಿಡಿದು ಮಾಡಿಕೊಂಡು ಬರುವ ಚಾಕಚಕ್ಯತೆ ಉಳ್ಳ ಸುರೇಶಗೌಡ ಗ್ರಾಮಾಂತರ ಕ್ಷೇತ್ರವನ್ನು ಅಭಿವೃದ್ದಿಯಡೆಗೆ ಕೊಂಡೊಂಯ್ದಿದ್ದು ಮಾತ್ರ ಇತಿಹಾಸ ಇಂತಹ ವ್ಯಕ್ತಿಯನ್ನು ಸೋಲಿಸಿದ್ದು ಸರಿಯಲ್ಲ ಈ ಬಾರಿ ನಾನೂ ಕೂಡ ಸುರೇಶಗೌಡರ ಗೆಲುವಿಗೆ ಶ್ರಮಿಶುತ್ತೇನೆ. ನೀವೆಲ್ಲರೂ ಕೂಡ ಕೈ ಜೋಡಿಸಬೇಕು ಎಂದು ಸಭಿಕರಲ್ಲಿ  ಮನವಿ ಮಾಡಿದರು.
ರಾಜ್ಯದಲ್ಲಿ ಕೆಜೆಪಿ ಬಿಜೆಪಿ ಆದಾಗ ಇಡಿ ರಾಜ್ಯದಲ್ಲಿ ಮತಗಳು ಇಬ್ಬಾಗ ಆದಾಗಲು ಕೂಡಾ ಗ್ರಾಮಾಂತರ ಕ್ಷೇತ್ರದಲ್ಲಿ ಮತಗಳ ವಿಭಜನೆ ಆಗಲಿಲ್ಲ ದುರಾದೃಷ್ಟವಶಾತ್‌ 2018 ರಲ್ಲಿ ಅವರಿಗೆ ಸೋಲಾಗಿದೆ ಅದು ಅವರ ಸೋಲಲ್ಲ ನಿಮ್ಮೆಲ್ಲರ ಸೋಲು 2023 ರಲ್ಲಿ ರಾಜ್ಯದಲ್ಲಿ ಮೊದಲ ಗೆಲವು ಸುರೇಶಗೌಡರದ್ದಾಗಬೇಕು ಇದಕ್ಕೆ ನಿಮ್ಮೆಲ್ಲರ ಶ್ರಮ ಬಹಳ ಮುಖ್ಯವಾಗುತ್ತದೆ ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ತಿಳಿಸಿದರು.
ಸೋಲಿಲ್ಲದ ಸರದಾರ ಆಗಬೇಕಿತ್ತು: ಅಭಿವೃದ್ದಿಯಲ್ಲಿ ಸುರೇಶಗೌಡರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಗ್ರಾಮಾಂತರ ಕ್ಷೇತ್ರ ವಾಸಿಗಳಲ್ಲಿ ನವಚೈತನ್ಯ ಮೂಡಿಸಿ ದೇಶ ನಿರ್ಮಾಣದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿರುವ ಸುರೇಶ ಗೌಡರಿಗೆ ಗೂಳೂರು ಗಣೇಶನ ಆಶಿರ್ವಾದ ಸಿಗಲಿ ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ರಾಜ್ಯದ ಸೇವೆಯಲ್ಲಿ ತೊಡಗಲು ಮತ್ತಷ್ಟು ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿರಾ ಶಾಸಕ ಡಾ. ರಾಜೇಶ್‌ ಗೌಡ ತಿಳಿಸಿದರು.
ಜನಕೇಂದ್ರಿತ ಆಡಳಿತದಿಂದಾಗಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿರುವ ಸುರೇಶಗೌಡರು ಒಂದು ಹೊಸ ಚಿಲುಮೆ ಅವರಿಗೆ ಇರುವ ದೃಢ ವಿಶ್ವಾಸವು ಗ್ರಾಮಾಂತರ ಕ್ಷೇತ್ರವು ಮತ್ತಷ್ಟು ಎತ್ತರಕ್ಕೆ ಏರಲು ಸಹಾಯ ಮಾಡುತ್ತದೆ. ಸದಾ ಬಡವರು ಮತ್ತು ರೈತರ ಬಗ್ಗೆ ಯೋಚಿಸುವ ಸುರೇಶ ಗೌಡರಿಗೆ ಚೈತನ್ಯ ಮತ್ತು ದೀರ್ಘಾಯುಷ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಚಿದಾನಂದಗೌಡ ತಿಳಿಸಿದರು.
ನನ್ನ ಕೊನೆ ಉಸಿರು ಇರುವವರೆಗೂ ಜನರ ಸೇವೆ ಮಾಡುವೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸ್ತೋಮವನ್ನು ಕಂಡು ಗದ್ಗದಿತರಾಗಿ ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ನನ್ನ ಕುಟುಂಬ ಜೀವನ ಪೂರ್ತಿ ಗ್ರಾಮಾಂತರ ಕ್ಷೇತ್ರದ ಜನರಿಗೆ ಆಭಾರಿಯಾಗಿರುತ್ತೇವೆ ಮತ್ತು ನನ್ನ ಕೊನೆ ಉಸಿರು ಇರುವವರೆಗೂ ಗ್ರಾಮಾಂತರ ಕ್ಷೇತ್ರದ ಜನರ ಸೇವೆ ಮಾಡುವೆ ಎಂದು ಸುರೇಶಗೌಡ ತಿಳಿಸಿದರು. ಅಭಿವೃದ್ದಿ ವಿಚಾರದಲ್ಲಿ ಎಂದಿಗೂ ರಾಜೀ ಆದವನಲ್ಲ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದನೆ ಮಾಡಿ ದೀನ ದಲಿತರ ಮತ್ತು ಬಡವರ ಕಣ್ಣೀರು ಒರೆಸುವಂತ ಕೆಲಸ ಮಾಡಿದ್ದೇನೆ ಎಂದು ಸುರೇಶಗೌಡ ತಿಳಿಸಿದರು. ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನನ್ನ ಜನ್ಮದಿನಕ್ಕೆ ಹರಸಿ ಹಾರೈಸಲು ಬಂದಿರುವ ಎಲ್ಲರಿಗೂ ದೀರ್ಘ ದಂಡ ಪ್ರಣಾಮಗಳನ್ನು ಸಲ್ಲಿಸಿದರು.
ಸುರೇಶ ಗೌಡ ಸಜ್ಜನ ಸ್ವಲ್ಪ ಕೋಪ ಜಾಸ್ತಿ ಆದರೆ ಮೋಸ ಇಲ್ಲ ವಂಚನೆ ಇಲ್ಲ ನನ್ನ ಬಳಿ ಯಾವುದೇ ಅಧಿಕಾರಿಗೆ ಫೋನ್ ಮಾಡಿಸಿದರು ಕೂಡ ಅದೆಲ್ಲವೂ ಕೂಡ ಬಡವರ ಪರವಾದಂತ ಕೆಲಸಗಳೇ ಆಗಿರುತ್ತವೆ ಇದನ್ನು ನೋಡಿ ನನಗೆ ಬಹಳ ಖುಷಿಯಾಗಿದೆ ಇಂತಹ ವ್ಯಕ್ತಿ 2023ರಲ್ಲಿ ಗೆಲ್ಲಬೇಕು ಇದ್ದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಅಬಕಾರಿ ಸಚಿವ ಗೋಪಾಲಯ್ಯ ಆಶಿಸಿದರು.
ಕಾರ್ಯಕ್ರಮದಲ್ಲಿ ವೈ,ಎಚ್‌ ಹುಚ್ಚಯ್ಯ, ಗೂಳೂರು ಶಿವಕುಮಾರ್ ಶಾರದಾನರಸಿಂಹಮೂರ್ತಿ, ಬಿಕೆ ಮಂಜುನ್ನಾಥ್‌, ಉಮೇಶಗೌಡ, ಮಾಸ್ತಿಗೌಡ ವೈ,ಟಿ ನಾಗರಾಜ್‌, ಡಿ ಶಂಕರ್‌, ಶಿವರಾಜು ಸುಮಿತ್ರದೇವಿ, ಸಿದ್ದೇಗೌಡ ಅರಕೆರೆ ರವೀಶ, ರಘುನಾಥಪ್ಪ, ಮಧು, ಕಣಕುಪ್ಪೆ ಶಿವಕುಮಾರ್‌, ನೇರಳಾಪುರ ಕುಮಾರ್‌ ಮತ್ತಿತರರು ಇದ್ದರು. ಹುಟ್ಟುಹಬ್ಬದ ಅಂಗವಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕಾರ್ಯಕರ್ತರು, ಅಭಿಮಾನಿಗಳು ಕೈಗೊಂಡಿದ್ದರು.