ಬೆಂಗಳೂರು: ಭಾರತದ ಪ್ರಮುಖ ಫಾಸ್ಟ್-ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಕಂಪನಿಗಳಲ್ಲಿ ಒಂದಾಗಿರುವ ಹಿಂದೂಸ್ತಾನ್ ಕೋಕಾ-ಕೋಲಾ ಬಿವರೇಜಸ್ (ಹೆಚ್‌ಸಿಸಿಬಿ) ಕಂಪನಿಯು ಕೋಕಾ-ಕೋಲಾ ಇಂಡಿಯಾ ಫೌಂಡೇಶನ್ ಆನಂದನ ಸಂಸ್ಥೆ ಹಾಗೂ ಮೈಸೂರು ನಗರಪಾಲಿಕೆಯ ಜೊತೆಗೂಡಿ ಮೈಸೂರು ದಸರಾ ಸಂದರ್ಭದಲ್ಲಿ ಬಿದ್ದಿದ್ದ ಖಾಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸುವ ಮಹತ್ತರ ಕೆಲಸ ಮಾಡಿದೆ. ವೈ4ಡಿ ಫೌಂಡೇಶನ್ ಈ ಕಾರ್ಯಕದಲ್ಲಿ ಅನುಷ್ಠಾನ ಪಾಲುದಾರರಾಗಿ ಕಾರ್ಯ ನಿರ್ವಹಿಸಿದೆ.
ಈ “ಬಳಸಿದ ಪಿಇಟಿ ಬಾಟಲ್ ಮುಕ್ತ ದಸರಾ ಸಂಭ್ರಮ” ಎಂಬ ಯೋಜನೆಯು ನಾಡ ಹಬ್ಬವನ್ನು ಪ್ಯಾಕೇಜ್ ಮುಕ್ತ ಹಬ್ಬವನ್ನಾಗಿಸುವ ಸ್ಫೂರ್ತಿಯನ್ನು ನೀಡಿದೆ.
ಅಕ್ಟೋಬರ್ 3 ರಿಂದ ಅಕ್ಟೋಬರ್ 12ರವರೆಗೆ ನಡೆದ 10 ದಿನಗಳ ಮೈಸೂರು ದಸರಾ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗದ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಭಾಗವಹಿಸಿದ್ದರು. ಈ ಹಬ್ಬದ ಸಮಯದಲ್ಲಿಯೇ ಹೆಚ್‌ಸಿಸಿಬಿ ಖಾಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸುವ ಯೋಜನೆ ಪ್ರಾರಂಭಿಸಿತು. ಈ ತ್ಯಾಜ್ಯ ನಿರ್ವಹಣಾ ಅಭಿಯಾನದಲ್ಲಿ 30ಕ್ಕೂ ಹೆಚ್ಚು ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡರು.
ಈ ಯೋಜನೆಯ ಭಾಗವಾಗಿ ಹಬ್ಬ ನಡೆಯುವ ಪ್ರಮುಖ ಸ್ಥಳಗಳಾದ ಚಾಮುಂಡಿ ಬೆಟ್ಟ, ಆಹಾರ ಮೇಳ ಮತ್ತು ಇತರ ಪ್ರಧಾನ ಸ್ಥಳಗಳಲ್ಲಿ ಕಸ ಸಂಗ್ರಹಣಾ ತೊಟ್ಟಿಗಳನ್ನು ಇಡಲಾಗಿತ್ತು ಮತ್ತು ರೀಸೈಕ್ಲಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಮೂಲಕ ಖಾಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಪ್ರತ್ಯೇಕಿಸಲು ಗೋದಾಮುಗಳಿಗೆ ಸಾಗಿಸಲಾಯಿತು. ಪ್ರತ್ಯೇಕಿಸಿದ ಬಳಿಕ ಅದನ್ನು ಪಿಇಟಿ ಬಾಟಲ್ ರೀಸೈಕ್ಲಿಂಗ್ ಪಾಲುದಾರ ಸಂಸ್ಥೆಗೆ ಸಾಗಿಸಲಾ ಯಿತು.
ಈ ಕುರಿತು ಮಾತನಾಡಿದ ಹೆಚ್‌ಸಿಸಿಬಿಯ ಚೀಫ್ ಪಬ್ಲಿಕ್ ಅಫೇರ್ಸ್ ಕಮ್ಯುನಿಕೇಷನ್ಸ್ ಆಂಡ್ ಸಸ್ಟೇನೇಬಿಲಿಟಿ ಆಫೀಸರ್ ಶ್ರೀ ಹಿಮಾಂಶು ಪ್ರಿಯದರ್ಶಿ ಅವರು, “ಮೈಸೂರು ದಸರಾ ಕೇವಲ ಹಬ್ಬ ಮಾತ್ರವೇ ಅಲ್ಲ, ಅದು ನಮ್ಮ ಸಾಂಸ್ಕೃತಿಕ ಪರಂಪರೆಯ ಸಂಭ್ರಮಾಚರಣೆ. ಭಕ್ತಿ, ಆಚರಣೆ ಮತ್ತು ಪರಿಸರ ಜವಾಬ್ದಾರಿ ಸಾರುವ ಮೂಲಕ ಸಮುದಾಯಗಳನ್ನು ಒಂದುಗೂಡಿಸುತ್ತದೆ. ಈ ಹಬ್ಬದಲ್ಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸುವ ಮತ್ತು ಅದನ್ನು ಮರುಬಳಕೆ ಮಾಡುವ ಮೂಲಕ ಆವರ್ಥ ಆರ್ಥಿಕತೆಗೆ ಕೊಡುಗೆ ನೀಡಿದ್ದೇವೆ. ‘ಬಳಸಿದ ಪಿಇಟಿ ಬಾಟಲ್ ಮುಕ್ತ ದಸರಾ’ ಯೋಜನೆಯು ತ್ಯಾಜ್ಯ ರಹಿತ ಜಗತ್ತನ್ನು ನಿರ್ಮಿಸುವ ಮತ್ತು ಪರಿಸರಕ್ಕೆ ಒಳಿತು ಮಾಡುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ” ಎಂದು ಹೇಳಿದರು.
ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಸಸ್ಟೇನೇಬಿಲಿಟಿ ಆಂಡ್ ಸಿಎಸ್‌ಆರ್ ವಿಭಾಗದ ಹಿರಿಯ ನಿರ್ದೇಶಕ ರಾಜೇಶ್ ಆಯಪಿಳ್ಳ ಅವರು, “ತ್ಯಾಜ್ಯ ರಹಿಕ ಜಗತ್ತು ಎಂಬ ಕಾರ್ಯತಂತ್ರವು ಕೋಕಾ-ಕೋಲಾದ ಪ್ರಮುಖ ಉದ್ದೇಶವಾಗಿದ್ದು, ಈ ಮೂಲಕ ನಾವು ಪ್ಯಾಕೇಜಿಂಗ್ ಗೆ ಬಾಟಲ್ ಗಳು ಮತ್ತು ಕ್ಯಾನ್ ಗಳನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತದೆ ಎಂಬುದರಿಂದ ಹಿಡಿದು ಅವು ಹೇಗೆ ರೀಸೈಕಲ್ ಆಗುತ್ತವೆ ಮತ್ತು ಹೇಗೆ ಮರುಬಳಕೆಗೆ ಒದಗುತ್ತವೆ ಎಂಬುದರ ಕಡೆಗೆ ಗಮನ ಹರಿಸಿದ್ದು, ಆವರ್ತ ಆರ್ಥಿಕತೆಯನ್ನು ಸಾಧಿಸಲು ಯತ್ನಿಸುತ್ತಿದ್ದೇವೆ.
ನಮ್ಮ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ಪರಿಸರ ಮತ್ತು ಜನರಿಗೆ ಒಳಿತಾಗುವ ನಿಟ್ಟಿನಲ್ಲಿ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಸ್ಥಳೀಯ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡು ತ್ಯಾಜ್ಯ ವಿಂಗಡಣೆ ಮತ್ತು ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿ ಕುರಿತು ಭಾಗವಹಿಸಿದವರಿಗೆ ಅರಿವು ಮೂಡಿಸುತ್ತಾ, ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆ ರೂಪಿಸಲು ನಾವು ಸಹಾಯ ಮಾಡಬಹುದಾಗಿದೆ” ಎಂದು ಹೇಳಿದರು.