Sunday, 15th December 2024

ಡಿಸೆಂಬರ್ 2ರಂದು ಆಳಂದಕ್ಕೆ ಮಾಜಿ ಪ್ರಧಾನಿ ದೇವೆಗೌಡ, ಅನೀತಾ ಕುಮಾರಸ್ವಾಮಿ

ಜೆಡಿಎಸ್ ಬೃಹತ್ ಸಮಾವೇಶ, ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ

ಆಳಂದ: ಡಿಸೆಂಬರ್ 2ರಂದು ಆಳಂದ ಪಟ್ಟಣದಲ್ಲಿ ಶ್ರೀ ರಾಮ ಮಾರ್ಕೇಟದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶ ಹಾಗೂ ಉಡಿ ತುಂಬುವ ಕಾರ್ಯಕ್ರಮಕ್ಕೆ ಮಾಜಿ ಪ್ರದಾನಿ ಹೆಚ್.ಡಿ ದೇವಗೌಡ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾ ಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆಂದು ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ತಿಳಿಸಿದರು.

ಪಕ್ಷದ ಕಛೇರಿಯಲ್ಲಿ ಕರೆಯಲಾದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದ ಈಗಾಗಲೇ ತಾಲೂಕಿನಲ್ಲಿ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿ ದ್ದೇನೆ. ಜನರು ಬದಲಾವಣೆ ಪಟ್ಟಣದಲ್ಲಿ ನಡೆಯುವ ಈ ಸಮಾವೇಶವು ಮುಂಜಾನೆ 10ಗಂಟಗೆ ಕೇಂದ್ರ ಬಸ್ ನಿಲ್ದಾಣದಿಂದ ಶ್ರೀ ರಾಮ ಮಾರ್ಕೇಟ ವರೆಗೆ ಬೃಹತ್  ಭವ್ಯ ಮೆರವಣಿಗೆ ನಡೆಯಲಿದ್ದು, ನಂತರ ಬಹಿರಂಗ ಸಮಾವೇಶ ನಡೆಯಲಿದೆ. ಜೆಡಿಎಸ್ ನಜ್ಮಾ ನಜೀರ ಪಕ್ಷದ ಹಿರಿಯ ಮುಖಂಡರು ಜಿಲ್ಲೆಯ ಹಿರಿಯ ಎಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸದರು.

ಈ ಸಂಧರ್ಭದಲ್ಲಿ ತಾಲೂಕಿನ ಸುಮಾರು 11 ಸಾವಿರ ಮಹಿಳೆಯಿರಗೆ ಉಡಿ ತುಂಬಲಾಗುತ್ತಿದೆ ಇಂದು ನಡೆಯುಲಿರುವ ಸಮಾವೇಶದಲ್ಲಿ ತಾಲೂಕಿನಲ್ಲಿ ಪ್ರತಿ ಹಳ್ಳಿಯ ಜನರು ಸೇರಿದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪಾಲ್ಗೋಳ್ಳುವ ನಿರೀಕ್ಷೆ ಇದೆ. ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಸಮೀರ ಭಾಗವಾನ, ಡಾ.ಅಶೋಕ ಗುತ್ತೇದಾರ, ಸುರೇಶ ಮಾಹಾಗಾಂಕರ್, ಶರಣು ಕುಲಕರ್ಣಿ, ಸೈಯದ್ ಜಾಫರ್, ಹಸನ್ ಕಾರಬಾರಿ ಇತರರು ಇದ್ದರು.