Saturday, 26th October 2024

ಬಿಜೆಪಿ ಸರಕಾರದಿಂದ ಯಾವುದಕ್ಕೂ ಸ್ಪಂದನೆಯೇ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

೧.೬೨ ಲಕ್ಷ ಮಕ್ಕಳು ಸರಕಾರಿ ಶಾಲೆಬಿಟ್ಟು ಖಾಸಗಿ ಶಾಲೆಗೆ ಸೇರಿದ್ದಾರೆ
ಒಮ್ಮೆ ಪೂರ್ಣಾವಧಿ ಅಧಿಕಾರ ನೀಡಿದರೆ ಶಾಶ್ವತ ಪರಿಹಾರ ಒದಗಿಸುವೆ

ಪಂಚರತ್ನ ರಥ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹೇಳಿಕೆ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿರುವ ಬಿಜೆಪಿ ಸರಕಾರದಿಂದ ಯಾರಿಗೂ ಯಾವುದಕ್ಕೂ ಸ್ಪಂಧನೆಯೇ ಇಲ್ಲವಾಗಿದೆ. ಕನಿಷ್ಟ ಸರಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ೧.೬೨ ಲಕ್ಷ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರಿದ್ದಾರೆ.ಶಿಕ್ಷಣ ಸಚಿವರು ಸರಕಾರ ಯಾಕೆ ಇದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಆಶೀರ್ವಾದ ಮಾಡಿದ್ದೇ ಆದರೆ ಎಲ್ಲ ಸಮುದಾಯದ ಮಕ್ಕಳಿಗೂ ಒಂದೇ ಸೂರಿನಡಿ ಹೈಟೆಕ್ ಶಿಕ್ಷಣವನ್ನು ಗ್ರಾಮಪಂಚಾ ಯಿತಿ ವ್ಯಾಪ್ತಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಚಿಂತಾಮಣಿ ತಾಲೂಕಿನ ಜನತೆ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದ ಬುದ್ದಿವಂತ ಜನ.ಜೆ.ಕೆ.ಕೃಷ್ಣಾರೆಡ್ಡಿ ಎಂಬ ಸಂಭಾವಿತ ಜನಸೇವಕನನ್ನು ಸತತ ಎರಡು ಬಾರಿ ಆರಿಸಿ ಕಳಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಿದ್ದೀರಿ. ೨೦೨೩ರ ಚುನಾವಣೆಯಲ್ಲಿಯೂ ಮತ್ತೊಮ್ಮೆ ಅವರನ್ನು ಆರಿಸಿ ಕಳಿಸಿದರೆ ಖಂಡಿತ ಮಂತ್ರಿಯಾಗುವ ಮೂಲಕ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುವ ಶಕ್ತಿ ಬರಲಿದೆ ಎಂದರು.

ಕೈವಾರ ತಾತಯ್ಯ ಅವರ ತಪೋಭೂಮಿಯಾಗಿ ಸರ್ವಧರ್ಮ ಸಮನ್ವಯದ ಸುಂದರ ತಾಣವಾಗಿದೆ.ಕುವೆಂಪು ಬಯಸಿದ ಮನುಜಮತ ವಿಶ್ವಪಥಕ್ಕೆ ಈಗ್ರಾಮಕ್ಕೆ ಬಹುದೊಡ್ಡ ಮಾದರಿಯಾಗಿದೆ. ಹಿಂದೂ ಮುಸಲ್ಮಾನರು ಇಲ್ಲಿ ಸಹೋದರರ ರೀತಿ ಬಾಳಿ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಯೋಗಿ ಯತೀಂದ್ರ ನಾರೇಯಣ ತಾತಾ ಅವರ ಆಶೀರ್ವಾದ ಕಾರಣ ಎಂದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಕೊಳಚೆ ನೀರನ್ನು ನಿಲ್ಲಿಸಿ ಶುದ್ದವಾದ ನದಿ ನೀರನ್ನು ಕೊಡುತ್ತೇನೆ. ೨೪ ಗಂಟೆಯೊಳಗೆ ಎಲ್ಲಾ ಸ್ತಿçà ಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುವೆ.ವಿಧವಾ, ವಿಕಲಾಂಗರಿಗೆ ೨೫೦೦, ಹಿರಿಯ ನಾಗರೀಕರಿಗೆ ೫ಸಾವಿರ ಪ್ರತಿತಿಂಗಳು ಅವರ ಖಾತೆಗೆ ಸೇರುವ ವ್ಯವಸ್ಥೆ ಮಾಡುವೆ. ಪಂಚರತ್ನದ ಉದೇಶವೇ ೬ ಕೋಟಿ ಜನತೆಗೆ ಉತ್ತಮವಾದ ಬದುಕು ನೀಡುವುದಾಗಿದೆ. ಇಲ್ಲವಾದರೆ ಪಕ್ಷವನ್ನೇ ವಿಸರ್ಜನೆ ಮಾಡುವೆ ಎಂದರು.

ರೈತರಿ೦ದ ೨೫ ಸಾವಿರ ದೇಣಿಗೆ
ನೀವು ಮುಖ್ಯಮಂತ್ರಿ ಆಗಿದ್ದಾಗ ೨ ಲಕ್ಷ ಸಾಲ ಮನ್ನಾ ಮಾಡಿ ನಮ್ಮನ್ನು ಸಂಕಷ್ಟದಿ೦ದ ಪಾರು ಮಾಡಿದ್ದೀರಿ. ಹೀಗಾಗಿ ಪಂಚರತ್ನ ಯಾತ್ರೆಗೆ ನೆರವಾಗಲೆಂದು ೨೫ ಸಾವಿರ ಹಣ ನೀಡುತ್ತಿದ್ದೇನೆ ಎಂದು ದೊಡ್ಡಗಂಜೂರು ಗ್ರಾಮದ ಚಂದ್ರಶೇಖರ್ ಚೆಕ್ ನೀಡಿದ್ದು ವಿಶೇಷವಾಗಿತ್ತು.

ಬಿಜೆಪಿ ಸರಕಾರದಲ್ಲಿ ಕೋವಿಡ್‌ನಿಂದಾಗಿ ಆಸ್ಪತ್ರೆ ಸೇರಿದವರಿಗೆ ಸರಿಯಾದ ಆರೈಕೆಯಿರಲಿಲ್ಲ. ಸಾವಿರಾರು ಜನ ಸಾವನ್ನಪ್ಪಿ ದರು. ಒಂದುಲಕ್ಷ ಪರಿಹಾರ ನೀಡುವುದಾಗಿ ಪ್ರಚಾರ ತೆಗೆದುಕೊಂಡಿದ್ದೇ ಬಂತು ಈವರೆಗೆ ರಾಜ್ಯದ ಪಾಲು ಸಂತ್ರಸ್ಥರಿಗೆ ಬಿಡು ಗಡೆಯೇ ಆಗಿಲ್ಲ. ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವಾಗ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನರಳಾಡಿ ಸತ್ತ ನತದೃಷ್ಟ ಹೆಣ್ಣು ಮಗಳ ಕಷ್ಟ ಯಾರಿಗೂ ಬರಬಾರದು.ನಮ್ಮ ಅಧಿಕಾರ ನೀಡಿದರೆ ಪಂಚಾಯ್ತಿಗೊAದು ಹೈಟೆಕ್ ಆಸ್ಪತೆ ನಿರ್ಮಿಸಿ ೨೪ ಗಂಟೆಯೂ ವೈದ್ಯರ ಲಭ್ಯತೆ ಇರುವಂತೆ ಮಾಡುವೆ ಎಂದು ಭರವಸೆ ನೀಡಿದರು.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ ಕುಮಾರಸ್ವಾಮಿ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ಬಯಕೆಯಾಗಿದೆ. ಇದಕ್ಕೆ ಪೂರಕವಾಗಿ ರಾಷ್ಟಿçÃಯ ಪಕ್ಷಗಳ ರಾಜ್ಯವಿರೋಧಿ ನಿಲುವು ,ಭ್ರಷ್ಟಾಚಾರ,ಜನವಿರೋಧಿ ಧೋರಣೆಗಳು ನಮಗೆ ವರವಾಗುತ್ತವೆ.ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಿದರೆ ಪಂಚರತ್ನ ಯೋಜನೆಗಳು ಜಾರಿಯಾಗಲಿವೆ ಎಂದರು.

ಕೈವಾರ ಗ್ರಾಮಕ್ಕೆ ಪ್ರವೇಶ ಮಾಡಿದ ಕುಮಾರಸ್ವಾಮಿ ಮೊದಲು ಇಬ್ರಾಹಿಂ ಷಾವಲಿ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ರೋಡ್ ಶೋ ಮೂಲಕ ಕೈವಾರ ತಾತಯ್ಯ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇದೇ ವೇಳೆ ಜೆಡಿಎಸ್ ಕಾರ್ಯಕರ್ತರ ಭಾರೀ ಹೂವಿನ ಹಾರವನ್ನು ಕ್ರೇನ್ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜೆ.ಕೆ.ಕೃಷ್ಣಾರೆಡ್ಡಿ ಅವರಿಗೆ ಹಾಕಿ ಸಂತೋಷಪಟ್ಟರು.