Friday, 13th December 2024

ಕುಮಾರಸ್ವಾಮಿಗೆ ಅಭಿವೃದ್ಧಿದಾಹ, ಕಾಂಗ್ರೆಸ್-ಬಿಜೆಪಿಗೆ ಅಧಿಕಾರದ ದಾಹ

ಆಳಂದದಲ್ಲಿ ಜೆಡಿಎಸ್ ಸಮಾವೇಶ ಹೆಚ್.ಡಿ.ಡಿ ಹೇಳಿಕೆ!

ಮಹಿಳೆಯರಿಗೆ ಉಡು ತುಂಬುವ ಕಾರ್ಯಕ್ರಮ

ಆಳಂದ: ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದು ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಲಿ ಎಂದು ಹೇಳಿ ಅಧಿಕಾರಿ ನೀಡಿ ನಂತರ ಒಳ ಸಂಚಿನಿಂದ ಅಧಿಕಾರದಿಂದ ಇಳಿಸಿದ್ದಾರೆ. ಕುಮಾರಸ್ವಾಮಿ ಅಭಿವೃದ್ಧಿದಾಹ ಹೊಂದಿದ್ದಾರೆ. ಕಾಂಗ್ರೆಸ್-ಬಿಜೆಪಿ ಅಧಿಕಾರಿ ಉರುಳಿಸುವ ದಾಹ ಹೊಂದಿದೆ ಎಂದು ಎರಡು ಪಕ್ಷಗಳ ವಿರುದ್ಧ ಕಟ್ಟುವಾಗಿ ದೂರಿದರು.

ಶುಕ್ರವಾರ ಪಟ್ಟಣದ ಶ್ರೀ ರಾಮ ಮಾರ್ಕೇಟ ಆವರಣದಲ್ಲಿ ಏರ್ಪಡಿಸಿದ ಜೆಡಿಎಸ್ ಸಮಾವೇಶ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬರುವ 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳ ಅಭಿವೃದ್ಧಿಗಾಗಿ ಅವರನ್ನು ಆಶೀರ್ವದಿಸಿ ಮುಖ್ಯಮಂತ್ರಿಮಾಡುವುದು ನಿಮ್ಮ ಎಲ್ಲರ ಕೈಯಲ್ಲಿ ಇದೆ ನಾನು ರಾಜ್ಯದಲ್ಲಿ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾನೆ. ಆದರೆ ಇಲ್ಲಿ ಮಾತ್ರ ಮಹಿಳೆ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದ್ದು ನನಗೆ ಬಹಳ ಸಂತಸ ತಂದಿದೆ, ನನ್ನ ಮತ್ತು ಜೆಡಿಎಸ್ ಪಕ್ಷದ ಮೇಲಿನ ಅಭಿಮಾನದಿಂದ ನಮ್ಮ ಪಕ್ಷದ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಮಹೇಶ್ವರಿ ವಾಲಿ ಅವರನ್ನು ಆರ್ಶೀವದಿಸಿ ಅಧಿಕಾರ ನೀಡಿ ಎಂದು ವಿನಂತಿಸಿ ಮತ್ತೆ ನಾನು ಆಳಂದಕ್ಕೆ ಬರುತ್ತೇನೆಂದು ಸಭೆಯಲ್ಲಿ ತಿಳಿಸಿದರು.

ಸಭೆಯ ಮುಖ್ಯ ಅತಿಗಳಾಗಿ ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ.ಇಬ್ರಾಹಿ ಮಾತನಾಡಿ, ಆಳಂದಲ್ಲಿ ಜೆಡಿಎಸ್ ಪಕ್ಷದಿಂದಲೇ ಅಧಿಕಾರಿಕ್ಕೆ ಈಗ ಇದ್ದ ಹಾಲಿ ಶಾಸಕ ಮತ್ತು ಮಾಜಿ ಶಾಸಕರು ಇಬ್ಬರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಇವರನ್ನು ಈ ಸಲ ದೂರವಿಟ್ಟು, ನಮ್ಮ ಪಕ್ಷದ ಅಭ್ಯರ್ಥಿ ಮಹೇಶ್ವರಿ ವಾಲಿ ಅವರಿಗೆ ಕೈ ಜೋಡಿಸಿ ಎಂದ ಅವರು ದೇವೆಗೌಡರು ಪ್ರಧಾನಿಯಾಗಿದ್ದಾಗ ಗ್ರಾಮ ಪಂಚಾ ಯತ ಮಟ್ಟದಿಂದ ಲೋಕ ಸಭೆವರೆಗೆ ಮಹಿಳೆಯ ರಿಗೆ ಮೀಸಲಾತಿ ಕೊಟ್ಟಿದ್ದ ಕೀರ್ತಿ ದೇವೆಗೌಡರಿಗೆ ಸಲ್ಲುತ್ತದೆ. ಕುಮಾರಸ್ವಾಮಿ ಅವರು ರಾಜ್ಯದಿಂದ ಮುಖ್ಯಮಂತ್ರಿಯಾದರೆ ಪಂಚರತ್ನ ಯೋಜನೆಯಲ್ಲಿನ ೬೫ ವರ್ಷ ಮೇಲ್ಪಟ್ಟ ರಿಗೆ ೫ ಸಾವಿರ ಮಾಸಾಶಾನ, ಬಂಡವರ ಬಂಧು ಯೋಜನೆ, ಜಲಧಾರೆ ಯೋಜನೆ ಅಂಶಗಳನ್ನು ಜಾರಿ ತರುತ್ತೇವೆಂದರು.

ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ಥವಿಕವಾಗಿ ತಾಲೂಕು ಜೆಡಿಎಸ್ ಪಕ್ಷದ ಅಭ್ಯರ್ಥಿ ಮಹೇಶ್ವರಿ ವಾಲಿ ಅವರು ಪ್ರಾಸ್ಥವಿಕವಾಗಿ ಮಾತನಾಡಿ ನಮ್ಮ ತಂದೆಯ ಸಮಾನ ಇರುವ ದೇವೆಗೌಡ ಪಾದಕ್ಕೆ ಮುಟ್ಟಿ ಹೇಳುತ್ತೇನೆ ಈ ಸಲ ನನ್ನನ್ನು ಆರ್ಶಿವರ್ದಿಸಿ ನಮ್ಮ ತಾಲೂಕಿನೆ ಮಹಿಳೆಯರ ಸಮಸ್ಯೆಯನ್ನು ಎಲ್ಲವನ್ನೂ ಬಗೆಹರಿಸುತ್ತೇನೆಂದು ಸಭೆಯಲ್ಲಿ ದೀರ್ಘ ದಂಡ ನಮಸ್ಕಾರ ಹಾಕಿದರು.

ರಾಜ್ಯ ಜೆಡಿಎಸ್ ವಕ್ತಾರರಾದ ನಜೀಮಾ ನಜೀರ ಹಾಗೂ ಸೈಯದ ನಾಸೀರ ಹುಸೇನ ಮಾತನಾಡಿದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ, ಜಿಲ್ಲಾ ಕಾರ್ಯಾಧ್ಯಕ್ಷ ಸೈಯದ ಜಾಫರ ಹುಸೇನಿ ಮುಖಂಡರಾದ ಡಾ. ಅಶೋಕ ಗುತ್ತೇದಾರ, ಬಾಲರಾಜ ಗುತ್ತೇದಾರ, ಸಂಜೀವನ ಯಕಾಪುರ, ಶಿವಕುಮಾರ ನಾಟೀಕರ, ಕೃಷ್ಣಾ ರೆಡ್ಡಿ, ಸಮೀರ ಭಾಗವಾನ, ಸುನೀಲ ಗಾಜರೆ, ಮುಸ್ತಾಕ ಅಲಿ, ಮನೋಹರ ಪೋದ್ದಾರ, ಯೇಸುನಾಥ ಸ್ಯಾಮಸನ, ಮಲ್ಲಿನಾಥ ಯಲ್ಲಶಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
*
ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಎರಡು ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ, ಬಡವರು, ಬಂದು, ಬಾಣಂತಿಯರಿಗೆ 6 ಸಾವಿರ, ಸೈಕಲ ಯೋಜನೆ, ರೈತರ ಸಾಲಮನ್ನಾ ಮಾಡಿದ್ದಾರೆ. 2023ರಲ್ಲಿ ಅಧಿಕಾರಿಕ್ಕೆ ಬಂದರೆ ಬಹು ನಿರೀಕ್ಷಿತ ಪಂತರತ್ನ ಯೋಜನೆಗಳನ್ನು ಜಾರಿ ಮಾಡುವ ಸಂಕಲ್ಪ ಇಟ್ಟಿಕೊಂಡಿದ್ದಾರೆ. ಈ ಎಲ್ಲಾ ಯೋಜನೆಗಳನ್ನು ಜಾರಿ ಗೊಳಿಸಲು ಆಳಂದ ಮಹೇಶ್ವರಿ ವಾಲಿಗೆ ಆಶೀವರ್ದಿಸಿ, ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲು ಬೆಂಬಲಿಸ.

ಅನೀತಾ ಕುಮಾರಸ್ವಾಮಿ, ಶಾಸಕಿ ರಾಮನಗರ