Sunday, 15th December 2024

ಅನುಮಾನ ಬಗೆಹರಿಸಿದರೆ ಅಗ್ನಿಪಥ್ ಸುಗಮ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ತುಮಕೂರು: ಅಗ್ನಿಪಥ್ ಯೋಜನೆಯಲ್ಲಿ ಪರ ವಿರೋಧ ಎರಡು ಕೇಳಿ ಬರುತ್ತಿದ್ದು ಹೊಸ ಪ್ರಯೋಗದಲ್ಲಿ ಇರುವ ಸಂಶಯ ಗಳನ್ನ ಸರಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಅನುಮಾನಗಳನ್ನ ಸರಿಪಡಿಸಿ ಕೊಂಡರೆ ಸುಗಮವಾಗಿ ಸರಿಯಾಗುತ್ತೆ ಅನ್ನೋದು ನನ್ನ ಅಭಿಪ್ರಾಯ. ಸಂಶಯಗಳನ್ನು ಸರಿಪಡಿಸೋದು ಕೇಂದ್ರ ಸರಕಾರದ ಹೊಣೆ ಎಂದರು.
ಜೆಡಿಎಸ್ ನಿಂದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉಚ್ಚಾಟನೆ ವಿಚಾರ ಮುಗಿದು ಹೋದ ಕಥೆ, ಅದರ ಬಗ್ಗೆ ನಾನು ಮಾತ ನಾಡಲ್ಲ. ಅವರ ಬೆನ್ನಿಗೆ ಚೂರಿ ಹಾಕಿದ್ದು ನಾನೇ, ಏನ್ ಮಾಡೋಕೆ ಆಗುತ್ತೆ. ಎಲ್ಲರಿಗೂ ನಾವೇ ಚೂರಿ ಹಾಕ್ತೀವಿ. ಅದು ಮುಗಿದು ಹೋದ ಅಧ್ಯಾಯ. ಮತ್ತೆ ಚರ್ಚೆ ಮಾಡೋಕೆ ಹೋಗಲ್ಲಾ. ಯಾರು ಯಾರು ಏನು ಮಾಡಿದ್ದಾರೆ ಅಂತಾ ಜನ ತೀರ್ಮಾನ ಮಾಡ್ತಾರೆ ಎಂದರು.
ಪಠ್ಯಪುಸ್ತಕ ವಾಪಸ್ ಪಡೆಯುವಂತೆ ದೇವೇಗೌಡರ ಪತ್ರ ವಿಚಾರ ಸಂಬಂಧ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ವಿಭಿನ್ನವಾದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ನಾನು ಹಳೆಯ ಮತ್ತು ಹೊಸದು ಪಠ್ಯಪುಸ್ತಕಗಳನ್ನ ಓದುತ್ತೇನೆ ಅದರ ಅಧ್ಯಯನದ ಬಳಿಕ ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದರು.