Sunday, 15th December 2024

ಮೃತ ಆಟೋ ಚಾಲಕನ ಕುಟುಂಬಕ್ಕೆ ಆಟಿಕಾ ಬಾಬು ಸಹಾಯ

ತುಮಕೂರು: ಕಳೆದ ಶನಿವಾರ ತುಮಕೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಆಟೋ ಚಾಲಕ ಅಮ್ಜದ್ ರವರ ಕುಟುಂಬಕ್ಕೆ ತುಮಕೂರು ಜೆಡಿಎಸ್ ಮುಖಂಡ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಆಕಾಂಕ್ಷಿ ಬೊಮ್ಮನಹಳ್ಳಿ ಬಾಬುರವರ ವತಿಯಿಂದ ಮೃತಪಟ್ಟ ಅಮ್ಜದ್ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಂಗಳವಾರ ಮೃತರ ಮನೆಗೆ ಭೇಟಿ ನೀಡಿದ ಅಟಿಕ್ ಗೋಲ್ಡ್ ಕಂಪನಿಯ ವಾಸಿಂಪಾಷ ಅವರು, ಅಟಿಕ ಬಾಬು ಪರವಾಗಿ ಅಮ್ಜಾದ್ ಅವರ ಪತ್ನಿಗೆ 2 ಲಕ್ಷ ರೂಗಳ ನಗದು ನೀಡಿ ದರಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ನೆರವು ನೀಡಲು ಕಂಪನಿ ಸಿದ್ದ ವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ನಾಸಿರ್ ರವರು,ಇನ್ನು ರಾಜ ಕಾಲುವೆ ಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಕುಟುಂಬಕ್ಕೆ ಅಟಿಕ ಗೋಲ್ಡ್ ಕಂಪನಿಯ ಮಾಲೀಕರು ಹಾಗೂ ಜೆಡಿಎಸ್ ಮುಖಂಡರಾದ ಬೊಮ್ನಳ್ಳಿ ಬಾಬುರವರು ಆರ್ಥಿಕವಾಗಿ ಸಹಾಯ ಮಾಡಿದ್ದು,ಮುಂದಿನ ದಿನದಲ್ಲಿ ಮೃತಪಟ್ಟ ಅಮ್ಜದ್ ರವರ ಮಗಳ ವಿದ್ಯಾ ಭ್ಯಾಸಕ್ಕೂ ನೆರವಾಗಲಿದ್ದಾರೆ ಎಂದರು.
ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮಂಜುನಾಥ್ ಮಾತನಾಡಿ, ಆಟೋ ಚಾಲಕ ಅಮ್ಜದ್‌ರವರ ಸಾವು ನಿಜಕ್ಕೂ ಆಘಾತ ತಂದಿದೆ. ಮೃತರನ್ನು ಕುಟುಂಬಕ್ಕೆ ಜೆಡಿಎಸ್ ಮುಖಂಡರಾದ ಅಟಿಕ ಬಾಬು ಅವರು ಅರ್ಥಿಕ ನೆರವು ನೀಡಿ ದ್ದಾರೆ.
ಈಗಾಗಲೇ ನಗರಪಾಲಿಕೆವತಿಯಿಂದ ಮೃತರ ಕುಟುಂಬಕ್ಕೆ ಒಂದು ಮನೆ, ಮಗನಿಗೆ ಪಾಲಿಕೆಯಲ್ಲಿ ದಿನಗೂಲಿ ನೌಕರಿ ಹಾಗು ಒಂದು ಲಕ್ಷ ರು. ಪರಿಹಾರದ ಧನ ನೀಡಲು ಮುಂದಾಗಿದೆ. ಪರಿಹಾರದ ಧನ ಹೆಚ್ಚಿಸಲು ಮುಂದಿನ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಇಮ್ರಾನ್ ನಾಸೀರ್, ವಾಸಿಂ ಪಾಷ, ಮುಜಾಹಿದ್, ಬಶೀರ್ ಪಾಷಾ, ಮೊಹಮದ್ ಗೌಸ್, ಮೊಹಮದ್ ಪೀರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.