ಕಲಬುರಗಿ: ಸತಾನತ ಹಿಂದೂ ಧರ್ಮದ ಶೌರ್ಯದ ಪ್ರತೀಕವಾಗಿರುವಂತಹ ಸಂಗತಿಗಳು ನಮ್ಮ ಪಠ್ಯ ಪುಸ್ತಕ ಗಳಲ್ಲಿ ಇಲ್ಲದೇ ಇರುವುದು ನಮ್ಮ ನಿಮ್ಮೆಲ್ಲರ ದುರ್ದೈವದ ಸಂಗತಿಯಾಗಿದೆ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಹಾಗೂ ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದರು.
ನಗರದ ಕೋಟೆಯ ಮುಂಭಾಗದಲ್ಲಿನ ಹಿಂದು ಮಹಾಗಣಪತಿ ಸಮಿತಿ ಕಲಬುರಗಿ ವತಿಯಿಂದ ನಗರದಲ್ಲಿನ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿ ಸಿದ ಮಾತನಾಡಿದ ಅವರು, ವಿಶ್ವದ ಹಲವು ರಾಷ್ಟ್ರಗಳ ಸಂಸ್ಕೃತಿ, ಪರಂಪರೆ ನಶಿಸಿ ಹೋಗಿವೆ. ಆದರೆ, ಸತಾನತ ಧರ್ಮದ ಸಂಸ್ಕೃತಿ ಪರಂಪರೆಯನ್ನು ಯಾರಿಂದಲೂ ನಶಿಸಿ ಹಾಕಲು ಸಾಧ್ಯವಾಗಲಿಲ್ಲ. ಇತಿಹಾಸದ ಪುಟಗಳಿಂದ ನಾವು ನಮ್ಮ ಸತಾನತ ಧರ್ಮದ ಶೌರ್ಯದ ಪರಾಕ್ರಮದ ಕುರಿತು, ನಮ್ಮ ಸಂಸ್ಕೃತಿ ಕುರಿತ ಹಾಗೂ ನಮ್ಮ ಶ್ರೇಷ್ಠ ಪರಂಪರೆಯನ್ನು ತಿಳಿದುಕೊಳ್ಳುವುದು ಅನಿವಾರ್ಯವಿದೆ ಎಂದರು.
ಕಲಬುರಗಿ ನಗರದಲ್ಲಿನ ಬಹುಮನಿಯ ಕೋಟೆಯ ಕುರಿತು ನಮ್ಮ ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದೇ ಬಹುಮನಿ ಕೋಟೆಯ ಕ್ರೌರ್ಯದ ಪ್ರತೀಕವನ್ನು ಉಲ್ಲೇಖಿಸಿಲ್ಲ. ಈ ಕೋಟೆಯ ರೂವಾರಿಗಳಾದ ನವಾಬ್ ಗಳು ನಮ್ಮ ಹತ್ತು ಲಕ್ಷಕ್ಕೂ ಅಧಿಕ ಹಿಂದೂ ಸಹೋದರರ ಕಗ್ಗೋಲೆಯನು ಮಾಡಿದೆ. ಈ ಸತ್ಯವನ್ನು ನಾವು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಮಕ್ತಂಪುರ ಶ್ರೀಮನ್ ನಿರಂಜನ ಪ್ರಣವ್ ಸ್ವರೂಪಿ ಮಹಾಸ್ವಾಮಿ ಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್ ಟೆಂಗಳಿ, ಶ್ರೀಮತಿ ಶೈಲಜಾ, ರವೀಂದ್ರ ಸಿಗಿ, ಚಂದ್ರಶೇಖರ್ ದೇವಾ ನಂದ, ಡಾ.ಜಗದೀಶ್ ಕಟ್ಟಿಮನಿ, ಅಂಬಾಜಿ ಶಿವಾಜಿ, ರಮೇಶ್ ಚಿತಕೋಟೆ, ಪರಮೇಶ್ವರ್ ಆಲಗೂಡ್, ಉಮಾ ರಾಣಿ ಗಚ್ಚಿನಮನಿ, ಕಮಲಾ ಮುನ್ನೂರು, ಸಂತೋಷ ಪೂಜಾರಿ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: Kalaburagi News: ಪೂಜ್ಯ ದೊಡ್ಪಪ್ಪ ಅಪ್ಪನವರ ಪುಣ್ಯಸ್ಮರಣೋತ್ಸವ ಇಂದು