Wednesday, 11th December 2024

ಗೃಹರಕ್ಷಕ ದಳ ಜಿಲ್ಲಾಮಟ್ಟದ ಕ್ರೀಡಾಕೂಟ

ತುಮಕೂರು: ಜಿಲ್ಲಾ ಗೃಹರಕ್ಷಕ ದಳ ತುಮಕೂರು ಜಿಲ್ಲಾ ಮಟ್ಟದ ಗೃಹ ರಕ್ಷಕರ ವೃತ್ತಿಪರ ಮತ್ತು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಕ್ರೀಡೆ ಉದ್ಘಾಟಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಕೆಂಪರಾಜಯ್ಯ ಮಾತನಾಡುತ್ತಾ, ಯಾವುದೇ ಕ್ರೀಡಾಕೂಟದಲ್ಲೂ ಪೊಲೀಸರದ್ದು ಒಂದು ಭಾಗವಿರುತ್ತದೆ ಮತ್ತು ಆರೋಗ್ಯಕ್ಕೂ ಕ್ರೀಡೆಗಳು ಉತ್ತಮ  ಎಂದು ಸಲಹೆ ನೀಡಿದರು.
 ಡಿವೈಎಸ್ಪಿ ಡಿಎಆರ್ ಪರಮೇಶ್ವರ್  ಮಾತನಾಡುತ್ತಾ, ಯಾವ ಒಳ್ಳೆಯ ದೇಹದಲ್ಲಿ ಒಳ್ಳೆಯ ಮನಸ್ಸಿರುತ್ತದೆ ಹಾಗಾಗಿ ಈಗಿನ ದಿನಗಳಲ್ಲಿ ನಮ್ಮ ಎಲ್ಲಾ ಗೃಹರಕ್ಷಕರೂ ಸಹ ಪೊಲೀಸ್ ಇಲಾಖೆಗೆ ಸರಿಸಮನಾಗಿ ಕೆಲಸ  ನಿರ್ವಹಿಸುತ್ತಿದ್ದಾರೆ ಮತ್ತು ಮಹಿಳಾ ಗೃಹರಕ್ಷಕ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸು ತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಗೃಹರಕ್ಷಕ ಸಮಾಧೇಷ್ಟರಾದ ಪಾತಣ್ಣ ಮಾತನಾಡುತ್ತಾ ,ಎಲ್ಲಾದರೂ ವಲಯದಲ್ಲಿ ಮತ್ತು ರಾಜ್ಯಮಟ್ಟಕ್ಕೆ ಹೋಗಬೇಕಾದಾಗ ನಮ್ಮ ತುಮ ಕೂರು ಜಿಲ್ಲೆಯಿಂದ ಗೃಹರಕ್ಷಕ ಭರತ್ ಕುಮಾರ್  ಹೈಜಂಪ್ ನಲ್ಲಿ ಲೀಡ್ ಬಂದಿದ್ದರು ಮತ್ತು 100 ಮೀಟರ್ ನಲ್ಲಿ ಪ್ರಸನ್ನ ಕುಮಾರ್ ಉತ್ತಮ ರಾಗಿದ್ದರು.
ಜಿಲ್ಲಾಮಟ್ಟದ 10 ತಾಲೂಕುಗಳಿಂದ 55 ಜನ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಮತ್ತು ತೃತೀಯ ಇದರ ಜತೆಗೆ 50 ಜನ ವಲಯ ಮಟ್ಟಕ್ಕೆ ಆಯ್ಕೆಯಾಗಿ ಹೋಗಬೇಕಾಗಿದೆ ನಿಮ್ಮ ಕ್ರೀಡೆ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಸಂಬಂಧಪಟ್ಟಂತೆ ಹೊರತು ವೈಯಕ್ತಿಕ ಮತ್ತೆ ದ್ವೇಷಕ್ಕೆ ಕಾರಣವಾಗ ಬಾರದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಶಿಧರ್, ಶಿವಪ್ರಸಾದ್, ಲೋಕೇಶ್,  ಹನುಮಂತಯ್ಯ ,ಶ್ರೀನಿವಾಸ್, ಪ್ರಕಾಶ್, ಸಿದ್ದಗಂಗಮ್ಮ, ಯತಿರಾಜ್, ಪ್ರಕಾಶ್, ಜಿಲ್ಲಾ ಗೃಹರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.