Wednesday, 11th December 2024

ಅ.೬ರಂದು ಪುರಸಭೆಯಿಂದ ನಡೆಯಲಿರುವ ಹರಾಜು ನಿಲ್ಲಿಸುವಂತೆ ಉಪವಾಸ ಸತ್ಯಾಗ್ರಹ

ಮಾನ್ವಿ: ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಪಟ್ಟಣದಲ್ಲಿನ ಬಸ್ ನಿಲ್ದಾಣ ಸೇರಿದಂತೆ ಮುಖ್ಯರಸ್ತೆಯಲ್ಲಿರುವ ಪುರಸಭೆ ವ್ಯಾಪ್ತಿಯ ೫೧ ಮಳಿಗೆೆಗಳಲ್ಲಿ ಹಾಲಿ ಬಾಡಿಗೆದಾರರಿಂದ ಅ.೬ರಂದು ಪುರಸಭೆಯ ಆವರಣದಲ್ಲಿ ನಡೆಯಲ್ಲಿರುವ ಪುರಸಭೆ ವ್ಯಾಪ್ತಿಯ ೫೧ ಮಳಿಗೆÉಗಳ ಹರಾಜು ಪ್ರಕ್ರಿಯೆಯನ್ನು ರದ್ದು ಪಡಿಸುವಂತೆ ಅನಿರ್ಧಿಷ್ಟ ವಾಧಿ ಧರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.

ಬಾಡಿಗೆದಾರ ಸಾಧಿಕ್ ಮಾತನಾಡಿ ಕಳೆದ ೨೦ ವರ್ಷಗಳಿಂದ ಪುರಸಭೆಯ ಮಳಿಗೆಗಳಲ್ಲಿ ತರಕಾರಿ ಸೇರಿದಂತೆ ಇತರೆ ವ್ಯಾಪಾರ ಗಳನ್ನು. ಪ.ಜಾತಿ,ಪ.ಪಂಗಡ.ಸೇರಿದAತೆ ಆರ್ಥಿಕ ವಾಗಿ ತೀರ ಹಿಂದುಳಿದಿರುವ ೫೦ಕ್ಕೂ ಹೆಚ್ಚು ಬಡ ಕುಟುಂಬಗಳು ನಡೆಸುತ್ತಿದ್ದು. ಬಡಜನರ ಜೀವನಾಧಾರವಾಗಿರುವ ಮಳಿಗೆಗಳ ಅವಧಿ ಪೂರ್ಣವಾಗುವ ಮುಂಚೆಯೇ ಪುರಸಭೆ ಅಧಿಕಾರಿಗಳು ಬಾಡಿಗೆದಾರರಿಗೆ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೆ ಹಾಲಿ ಇರುವ ಬಾಡಿಗೆಯ ಮೊತ್ತಕಿಂತಲೂ ಹೆಚ್ಚಿನ ಬಾಡಿಗೆ ಹಾಗೂ ಠೇವಣಿಯನ್ನು ನಿಗದಿಮಾಡುವ ಮೂಲಕ ಈ ಮಳಿಗೆಗಳು ಬಡಜನರಿಗೆ ದೊರೆಯದಂತೆ ಮಾಡಿರುವುದು ಸರಿಯಲ್ಲ. ದುಬಾರಿ ಬಾಡಿಗೆಯನ್ನು ಬಡ ವ್ಯಾಪಾರಿಗಳು ನೀಡಲು ಸಾಧ್ಯವಾಗುವುದಿಲ್ಲ ಬಸ್ ನಿಲ್ದಾಣದ ಹತ್ತಿರ ಇರುವ ತರಕಾರಿ ಅಂಗಡಿ ಗಳಿoದಲೇ ಜೀವನ ಸಾಗಿಸುತ್ತಿರುವ ೫೦ಕ್ಕೂ ಹೆಚ್ಚು ಕುಟುಂಬಗಳು ಹಾಗೂ ಅಂಗಡಿಗಳಲ್ಲಿ ಕೆಲಸಮಾಡುವ ನೂರಾರು ಕೆಲಸಗಾರರು ಅಧಿಕಾರಿಗಳ ನಡೆಯಿಂದ ಬೀದಿಪಾಲಗುವ ಸಂಭವ ಇರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಹಾಲಿ ಇರುವ ಬಾಡಿಗೆಯ ಮೊತ್ತಕ್ಕೆ ಶೇ೫ರಷ್ಟು ಹೆಚ್ಚಳಮಾಡಿ ಇಲ್ಲವೇ ನಿಗದಿ ಪಡಿಸಿರುವ ಬಾಡಿಗೆ ಮೊತ್ತ ಹಾಗೂ ಠೇವಣಿ ಮೊತ್ತವನ್ನು ಕಡಿಮೆ ಗೊಳಿಸಬೇಕು. ಅಲ್ಲಿಯವಾರೆಗೂ ಹರಾಜು ನಡೆಸದಂತೆ ತಡೆಯ ಬೇಕು ಇಲ್ಲದಿದ್ದಲ್ಲಿ ಅನಿರ್ದಿಷ್ಟವಾದಿ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಕಳೆದ ಬಾರಿ ಪುರಸಭೆ ವ್ಯಾಪ್ತಿಯ ೫೧ ಮಳಿಗೆÉಗಳ ಹರಾಜು ಪ್ರಕ್ರಿಯೆಯನ್ನು ರದ್ದು ಪಡಿಸುವಂತೆ ಹಾಲಿ ಬಾಡಿಗೆದಾರರು ನಡೆಸಿದ ಪ್ರತಿಭಟನೆ ಹಾಗೂ ಒತ್ತಾಡಕ್ಕೆ ಮಣಿದ ಪುರಸಭೆ ಆಡಳಿತ ಮಂಡಳಿ ಮಳಿಗೆ ಹರಾಜು ಪ್ರಕ್ರಿಯೇ ನಡೆಸದೆ ಮುಂದು ಡಿತ್ತು, ನಂತರ ದಲಿತ ಪರ ಸಂಘಟನೆಗಳು ಹರಾಜು ನಡೆಸುವಂತೆ ಹೋರಾಟ ನಡೆಸಿದ್ದಾರಿಂದ ಅ.೬ರಂದು ಬಹಿರಂಗ ಹರಾಜು ಮಾಡುವುದಾಗಿ ಪ್ರಕಟಣೆ ನೀಡಿತ್ತು ಪುರಸಭೆಗೆ ಹೆಚ್ಚಿನ ಅದಾಯ ತಂದು ಕೊಡುವ ಮಳಿಗೆ ಬಾಡಿಗೆಯನ್ನು ಅಧಿಕಾರಿಗಳು ನಡೆಸುತ್ತಾರೋ ಅಥವಾ ಒತ್ತಾಡಕ್ಕೆ ಮಣಿದು ಮುಂದುಡುತ್ತಾರೋ ಎನ್ನುವುದು ಸಾರ್ವಜನಿಕರಲ್ಲಿ ತೀವ್ರವಾದ ಕುತೂಹಲ ಮೂಡಿಸಿದೆ.

ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಹಾಲಿ ಬಾಡಿಗೆದಾರರಾದ ಶೇಕ್ ಇಸ್ಮಾಯಿಲ್, ಸಾಬೀರ್‌ಪಾಷ, ಹುಸೇನ್ ಬಾಷ, ಚಂದ್ರು, ವೆಂಕಟಗಿರಿ, ತನುಜಾ, ಹನುಮಂತ, ಮಂಜುನಾಥ, ಬಸವರಾಜು, ಚನ್ನಪ್ಪ ನಾಯಕ, ಟಿ,ಮಹೇಶನಾಯಕ, ಶಶಿಕಾಂತ್, ತಿಮ್ಮಪ್ಪ, ಹನುಮೇಶ ಸೇರಿದಂತೆ ಇನ್ನಿತರರು ಇದ್ದರು.