Thursday, 12th December 2024

ಇಗ್ನೋ ಕೇಂದ್ರದಲ್ಲಿ ಹೊಸ ಕೊರ್ಸ್  ಪ್ರವೇಶಾತಿ ಆರಂಭ

ತುಮಕೂರು: ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಇಗ್ನೋ ಕೇಂದ್ರದಲ್ಲಿ ಶೈಕ್ಷಣಿಕ ಸಾಲಿನಲ್ಲಿ ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭವಾಗಿದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ  ವಿಶ್ವವಿದ್ಯಾಲಯ ಬೆಂಗಳೂರು ಕೇಂದ್ರದ ಹಿರಿಯ ನಿರ್ದೇಶಕರಾದ ಡಾ.ಎಸ್ ರಾಧಾ  ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಸಾಲಿನ ಕೋರ್ಸ್ಗಳ ಪ್ರವೇಶಾತಿ ಆರಂಭವಾಗಿದ್ದು, ಇದರೊಂದಿಗೆ ಹೊಸ ಕೋರ್ಸ್ ಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದರು. 2022-23 ಸಾಲಿನ ಪ್ರವೇಶಾತಿಗೆ ಹೊಸದಾಗಿ ಆರಂಭಗೊಂಡಿರುವ ಕೋರ್ಸ್ ಗಳಲ್ಲಿ ಎಂಬಿಎ ವಿಭಾಗದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಕಾರ್ಯಚರಣೆ ನಿರ್ವಹಣೆ, ಮಾರ್ಕೆಟಿಂಗ್, ಎಂಎಸ್‌ಸಿ ವಿಭಾಗದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿರ್ವಹಣೆ, ಎಂಎ ವಿಭಾಗದಲ್ಲಿ ಹಿಂದಿ, ಅರೇಬಿಕ್, ಪಿಜಿ ಡಿಪ್ಲಮೋ ವಿಭಾಗದಲ್ಲಿ ಅಮೆರಿಕಾ ಸಾಹಿತ್ಯ ಮತ್ತು ಕಾದಂಬರಿ, ಬ್ರಿಟಿಷ್ ಸಾಹಿತ್ಯ, ಇಂಗ್ಲಿಷ್‌ನಲ್ಲಿ ನವ ಸಾಹಿತ್ಯ, ಎಲೆಕ್ಟ್ರಾನಿಕ್, ವೇದಿಕ್ ಗಣಿತ ಸೇರಿದಂತೆ 8 ಪದವಿ, 8 ಸ್ನಾತಕೋತ್ತರ ಪದವಿ, 8 ಡಿಪ್ಲಮೋ ಪದವಿ, ಮತ್ತು 3 ಸರ್ಟಿಫಿಕೆಟ್ ಕೊರ್ಸ್ಗಳನ್ನು ಎಂದು ಡಾ.ಎಸ್ ರಾಧಾ ವಿವರಿಸಿದರು.
ಭಾರತಲ್ಲಿಯೇ ಪ್ರತಿಷ್ಠಿತ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವಾಗಿದ್ದು ಇಗ್ನೋ ಆಗಿದ್ದು, ನ್ಯಾಕ್‌ನಿಂದ ಎ++ ಮಾನ್ಯತೆ ಪಡೆದಿದೆ. ಈ ವಿಶ್ವವಿದ್ಯಾಲಯದಲ್ಲಿ ಆಗಸ್ಟ್15ರಿಂದ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಾರಂಭಿಸಿದೆ ಎಂದ ಅವರು, ಪ.ಜಾತಿ ಮತ್ತು ಪ.ಪಂಗಡ ಹಾಗೂ ವಿಶೇಷ ಚೇತನರಿಗೆ 50ಕ್ಕೂ ಅಧಿಕ ಕೋರ್ಸ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇಲ್ಲಿ ಯಾವುದೇ ಪ್ರವೇಶಾತಿ ಪರೀಕ್ಷೆ ಇಲ್ಲದೇ ನೇರ ಪ್ರವೇಶಾತಿ ಇದೆ. ಈ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪ್ರಮಾಣಪತ್ರ ಕೊರ್ಸ್, ಡಿಪ್ಲೋಮೊ ಸೇರಿದಂತೆ 258 ವಿವಿಧ ಬಗೆಯ ಕೋರ್ಸ್ಗಳು ಲಭ್ಯವಿದ್ದೂ ಪ್ರವೇಶಾತಿ ಪ್ರಾರಂಭಿಸಿದೆ ಎಂದರು.
ವಿದ್ಯಾರ್ಥಿಗಳಿಗೆ ವಾರಾಂತ್ಯದಲ್ಲಿ ತರಗತಿ ನಡೆಸಲಾಗುತ್ತಿದ್ದು, ಸ್ವಯಂಪ್ರಭ ದೂರದರ್ಶನ ವಾಹಿನಿ ಮತ್ತು ಜ್ಞಾನವಾಹಿನಿ, ಜ್ಞಾನಧಾರ ರೇಡಿಯೋ ಕಾರ್ಯಕ್ರಮಗಳ ಮೂಲಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ಒಂದೇ ಬಾರಿಗೆ ಎರಡು ಪದವಿ ಪಡೆಯಬಹುದಾಗಿದೆ. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಮಾತನಾಡಿ, ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ನಮ್ಮ ಕಾಲೇಜಿನಲ್ಲಿ 40ಕ್ಕೂ ಅಧಿಕ ಕೋರ್ಸ್ ಗಳಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಪದವಿಯೊಂದಿಗೆ ನಿಯೋಜನೆ ಚಟುವಟಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಬೇಕಿರುವಂತಹ ಅಗತ್ಯ ತರಗತಿಗಳನ್ನು ನಡೆಸಲಾಗುತ್ತದೆ ಎಂದರು.