Monday, 18th November 2024

Ilayaraja: ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ

Ilayaraja

ಬೆಂಗಳೂರು: ಹಲವು ವರ್ಷಗಳಿಂದ ತಮ್ಮ ಅದ್ಭುತ ಸಂಗೀತ ನಿರ್ದೇಶನದ ಮೂಲಕ ಜಗತ್ಪ್ರಸಿದ್ಧರಾಗಿರುವ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಇತ್ತೀಚಿಗೆ ಮೈಸೂರಿನ ಯುವ ದಸರಾದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಪ್ರೇಕ್ಷಕರು ಇಳಯರಾಜ ಸಂಗೀತ ಸಂಯೋಜನೆಯ ಹಾಡುಗಳ ಮೋಡಿಗೆ ಮರುಳಾದರು. ಕಾರ್ಯಕ್ರಮಕ್ಕೂ ಮುನ್ನಾ ಇಳಯರಾಜ (Ilayaraja) ಅವರು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು.

ಇಳಯರಾಜ ಅವರ ಆಪ್ತರಾದ ಹೆಸರಾಂತ ನಿರ್ದೇಶಕ ಎಸ್. ನಾರಾಯಣ್ ಅವರು ಇಳಯರಾಜ ಅವರು ಮೈಸೂರಿಗೆ ಬಂದು ಹಿಂತಿರುಗುವವರೆಗೂ ಅವರೊಡನೆ ಇದ್ದು ಯಾವುದೇ ತೊಂದರೆ ಆಗದಂತೆ ಸುಲಲಿತವಾಗಿ ಸಮಾರಂಭ ನಡೆಯಲು ಸಹಕಾರಿಯಾದರು‌.

ಈ ಸುದ್ದಿಯನ್ನೂ ಓದಿ | Tumkur News: ಭಕ್ತರ ಸಮ್ಮುಖದಲ್ಲಿ ಭಕ್ತಿ ಪರಾಕಾಷ್ಠೆಯಿಂದ ನಡೆದ ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವ

ಯುವ ದಸರಾದಲ್ಲಿ ಇಳಿಯರಾಜ ಅವರ ಸಂಗೀತ ಸಂಜೆ ಆರಂಭವಾಗುತ್ತಿದ್ದಂತೆ ಜನ ಕುಳಿತಲ್ಲೇ ಸಂಗೀತದಲ್ಲಿ ತೇಲಿದರು. ಮೊದಲು ಕೊಲ್ಲೂರು ಮೂಕಾಂಬಿಕ ಕುರಿತು ಹಾಡು ಹೇಳಿ ನೆರೆದಿದ್ದವರನ್ನು ಭಕ್ತಿಯಲ್ಲಿ ತೇಲುವಂತೆ ಮಾಡಿದರು. ಬಳಿಕ ಡಾ. ರಾಜಕುಮಾರ್ ಅಭಿನಯದ ನನ್ನ ನೀನು ಗೆಲ್ಲಲಾರೆ, ಜೀವ ಹೂವಾಗಿದೆ ಹಾಡು ಸೇರಿ ಡಾ. ವಿಷ್ಣುವರ್ಧನ್ ಅಭಿನಯದ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ಅಲ್ಲದೇ ಶಂಕರ್ ನಾಗ್ ನಟನೆಯ ಗೀತಾ ಚಿತ್ರದ ಹಾಡಾದ ಸಂತೋಷಕ್ಕೆ ಹಾಡು ಹಾಡುವ ಮೂಲಕ ದಿವಂಗತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್‌.ಬಿ ಚರಣ್ ಅವರು ನೆರದಿದ್ದವರನ್ನ ಕುಣಿದು ಕುಪ್ಪಳಿಸುಂತೆ ಮಾಡಿದರು. ಅಲ್ಲದೇ ಅನೇಕ ಕನ್ನಡದ ಪ್ರಖ್ಯಾತ ರೆಟ್ರೋ, ಮತ್ತು ಮೆಲೋಡಿ ಹಾಡುಗಳನ್ನು ಹಾಡುವ ಮೂಲಕ ಜಿಟಿ ಜಿಟಿ ಮಳೆಯ ನಡುವೆಯೂ ಜನ ಸಂಗೀತಕ್ಕೆ ತಲೆದೂಗುವಂತೆ ಮಾಡಿದರು.