Wednesday, 11th December 2024

ಅಭಿವೃದ್ದಿ ಅಧಿಕಾರಿಗಳ ೩ ಪ್ರಮುಖ ಬೇಡಿಕೆಗಾಗಿ ಅಸಹಕಾರ ಚಳುವಳಿ: ಸಿ.ಜಿ ಪಾರೆ

ಇಂಡಿ: ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರು ,ಜಿಲ್ಲಾ ಘಟಕ ವಿಜಯಪೂರ ರಾಜ್ಯದ ಎಲ್ಲಾ ಪಂಚಾಯತ ಅಭಿವೃದ್ದಿ ಅಧಿಕಾರಿಗಳಬೇಡಿಕೆ ಇಡೇರಿಸುವಂತೆ ಒತ್ತಾಯಿಸಲಾಗಿದೆ.

ಅದರಲ್ಲಿ ಪ್ರಮುಖ ಬೇಡಿಕೆಗಳಾದ ಪಿ.ಡಿ.ಓ ಅವರುಗಳ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿ ಪ್ರಕಟಿಸುವುದು , ರಾಜ್ಯದ ಎಲ್ಲಾ ಪಿ.ಡಿ.ಓ ಗಳ ಹುದ್ದೆಗಳನ್ನು ಏಕಕಾಲದಲ್ಲಿ ಬಿ.ವೃಂದಕ್ಕೆ ಮೇಲ್ದರ್ಜೆಗೆ ಏರಿಸದೆ ಇರುವುದು ಹಾಗೂ ಅರ್ಹ ಪಿ.ಡಿ.ಓಗಳಿಗೆ ಸಹಾಯ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡದೆ ಇರುವುದು ಈ ಮೂರು ಬೇಡಿಗಳಿಗೆ ಸರಕಾರಕ್ಕೆ ಮನವಿ ಸಲ್ಲಿಸಿದರೂ ಎರಡು ತಿಂಗಳು ಕಳೆದರೂ ಸ್ಪಂದನೆ ಸಿಕ್ಕಿಲ್ಲ.

ಹೀಗಾಗಿ ಪ್ರಥಮ ಹಂತವಾಗಿ ಅಸಹಕಾರ ಚಳುವಳಿ ಅಂಗವಾಗಿ ದಿನಾಂಕ ;೦೮ -೧೧-೨೦೨೩ ರಂದು ಬುಧುವಾರ ಬೆಳಿಗ್ಗೆ ರಾಜ್ಯದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕ ಅವಶ್ಯಕ ಸೇವೆಗಳ ಹೊರತುಪಡಿಸಿ ಉಳಿದ ಸೇವೆಗಳಿಗೆ ಅಸಹಕಾರ ನೀಡುವ ಮೂಲಕ ಅಸಹಕಾರ ಚಳುವಳಿ ಪ್ರಾರಂಭಿಸ ಲಾಗುವುದು. ಎರಡನೆ ಹಂತದಲ್ಲಿ ಎಲ್ಲಾ ಪಂಚಾಯತಿಗಳ ಕಚೇರಿ ಮುಂದೆ ಪ್ರತಿಭಟನೆ ,ಮೂರನೆ ಹಂತದಲ್ಲಿ ಬೆಂಗಳುರು ಪ್ರೀಡಂ ಪಾರ್ಕ ಚಲೋ ನಡೆಸಲಾಗುವುದು.

ಈ ಸಮಸ್ಯಗಳ ಕುರಿತು ರಾಜ್ಯ ಮಟ್ಟದ ಹೋರಾಟಕ್ಕೆ ತೀರ್ಮಾನ ಕೈಗೋಳ್ಳಲಾಗಿದೆ,ಸದರಿ ಅಸಹಕಾರ ಚಳುವಳಿ ಯಶಸ್ವೀಗೋಳಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ವಿಜಯಪೂರ ಜಿಲ್ಲಾ ಘಟಕ ಅಧ್ಯಕ್ಷ ಸಿ.ಜಿ ಪಾರೆ ಪ್ರಕಟಣೆಗೆ ತಿಳಿಸಿದ್ದಾರೆ.