ಇಂಡಿ: ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ ಇದೊಂದು ಐತಿಹಾಸಿನ ಬಜೇಟ್ ಸತತ ೭ನೇ ಬಾರಿ ಬಜೆಟ್ ಮಂಡಿಸಿದ ವಿತ್ತ್ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಓ.ಬಿ.ಸಿ ರಾಜ್ಯ ಕಾರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಹೇಳಿದರು.
ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬವ ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲ ವಾಗಿದೆ. ಕೇಂದ್ರ ಬಜೇಟ ೯ ವಲಯಗಳಿಗೆ ಆದ್ಯತೆ ನೀಡಿದೆ ಶಿಕ್ಷಣ, ಉದ್ಯೋಗ , ಕೌಶಲ್ಯಕ್ಕೆ ರೂ ೧.೪೮ ಲಕ್ಷ ಕೋಟಿ ಅನುಧಾನ, ೪ ಕೋಟಿ ಉದ್ಯೋಗ ಸೃಷ್ಠಿಸುವ ಗುರಿ .ಮಾನಸಂಪನ್ಮೋಲ ಸದ್ಭಳಕೆ ಆದ್ಯತೆ ಕೊಡಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷದವರು ಮಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ .
ಶೀಲವಂತ ಉಮರಾಣಿ. ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ‍್ಯಕಾರಣಿ ಸದಸ್ಯ
ಇಂಡಿ- ಇದು ದೂರದೃಷ್ಠಿಯುಳ್ಳ ದೂರಗಾಮಿ ಬಜೆಟ್ ಕೃಷಿ ಕೈಗಾರಿಕೆ ಮೂಲಸೌಕರ್ಯ, ಉದ್ಯೋಗ, ಸೃಷ್ಠಿಗೆ ಕೇಂದ್ರ ಬಜೇಟ್ ಒತ್ತು ನೀಡಿದೆ. ಉತ್ಪಾದನೆಗೂ ಗಮನ ನೀಡಲಾಗಿದೆ. ಚೈನೈ ಹೆದರಾಬಾದ, ಬೆಂಗಳೂರು ಸೇರಿ ಒಟ್ಟು ೧೨ ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಣೆ ಮಾಡುವುದು ಉದ್ಯೋಗ, ಆರ್ಥಿಕ ಅಭಿವೃದ್ದಿ ಬೃಹತ್ ಕೊಡುಗೆ ನೀಡಲಿದೆ. ಕೃಷಿ ಬೆಳೆ ಸರ್ವೆ ಡಿಜಟಲೀಕರಣ ಸಮೀಕ್ಷೆ ಮಾಡುವುದು ೪೦೦ ಜಿಲ್ಲೆಗಳಿಗೆ ವಿಸ್ತರಣೆ ಮಾಡಿರುವುದು ಸ್ವಾಗತಾರ್ಹ.
ಕಾಸುಗೌಡ ಬಿರಾದಾರ ಬಿಜೆಪಿ ಮುಖಂಡ.
ಇಂಡಿ_ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ವಿಕಸಿತ ಭಾರತ ಯುವಕರ ಬಾಳಿನ ಆಶಾಕೀರಣ ರಾಜ್ಯಗಳಿಗೆ ೫೦ ವರ್ಷಗಳ ಬಡ್ಡಿರಹಿತ ಸಾಲ ನೀಡುವುದು ಸ್ವಾಗತಾರ್ಹ. ಸಂಶೋಧನೆ, ಅವಿಸ್ಕಾರಕ್ಕೆ ಅತಿ ಹೆಚ್ಚು ಆದ್ಯತೆ ಬಜೇಟ್ ಇದಾಗಿದೆ. ನರೇಂದ್ರ ಮೋದಿ ಸರಕಾರ ಆರ್ಥಿಕ ಸುಧಾರಣೆ ಧಿಟ್ಟ ಹೆಜ್ಜೆ ಇಟ್ಟಿದೆ ವಿಶ್ವದಲ್ಲಿಯೇ ಬೆಳೆಯುತ್ತಿರುವ ಭಾರತ ಎನ್ನುವುದಕ್ಕೆ ಬಜೆಟ್ ಮಾದರಿ.
ಶಂಕರಗೌಡ ಪಾಟೀಲ ಡೋಮನಾಳ ಬಿಜೆಪಿ ಧುರೀಣರು
ಇಂಡಿ- ದೇಶದ ಅಭಿವೃದ್ದಿಗೆ ಕೇಂದ್ರ ಬಜೆಟ್ ಪೂರಕವಾಗಿದೆ. ಕೃಷಿ,ಉದ್ಯೋಗ, ಕೌಶಲ್ಯ ಅಭಿವೃದ್ದಿಗೆ ಉತ್ತೇಜ ನೀಡಲಾ ಗಿದೆ. ಶಿಕ್ಷಣ ,ಹಿಂದುಳಿದ ವರ್ಗದ ಜನರಿಗೆ ಆದ್ಯತೆ .ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ರೈಲು ಮಾರ್ಗ ಅಭಿವೃದ್ದಿ ಕೈಗಾರಿಕೆ ಪುನಶ್ಚೇತನ ಒಟ್ಟಾರೆ ಸರ್ವಜನ ಸುಖೀನೋ ಭವಂತೂ ಎನ್ನುವ ಸಿದ್ದಾಂತದ ಮೇಲೆ ಬಜೇಟ ಆಗಿದೆ.
ಬಿಜೆಪಿ ಜಿಲ್ಲಾ ಮುಖಂಡ ಹಣಮಂತರಾಯಗೌಡ ಪಾಟೀಲ
ಇಂಡಿ – ಕೇಂದ್ರ ಬಜೆಟ್ ಸರ್ವವ್ಯಾಪಿಯಾಗಿದ್ದು ಇಡೀ ಬಡವರ ರೈತರ ಯುವಕರ ಆಶಾಕೀರಣವಾಗಿದ್ದು ,ಕೃಷಿ, ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಮಹಿಳೆಯರ ಸ್ವಾಭಿಮಾನ ಶಕ್ತಿ ವೃದ್ದಿಗೆ ಪೂರಕ ಬಜೆಟ್ ಕೃಷಿ,ಶಿಕ್ಷಣ, ಕೈಗಾರಿಕೆಗಳ ಉತ್ತೇಜನ ಕೊಡಲಾಗಿದೆ.ಕೇಂದ್ರ ವಿತ್ತ್ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶದ ಅಭಿವೃದ್ದಿಗೆ ಒಳ್ಳೇಯದಾಗಿದೆ ಯಾವುದೇ ತಾರತಮ್ಯ ಇಲ್ಲ.
ಬಿಜೆಪಿ ಯುವ ಮುಖಂಡ ರಾಮಸಿಂಗ ಕನ್ನೋಳ್ಳಿ