Thursday, 21st November 2024

MLA YashwantrayaGowda Patil: ಸತ್ಯ, ಶಾಂತಿ ಯಿಂದ ಮಹಾತ್ಮಾ ಗಾಂಧೀಜಿ ದೇಶವನ್ನು ಸ್ವಾತಂತ್ರ್ಯಗೊಳಿಸಿದ್ದಾರೆ-ಯಶವಂತರಾಯಗೌಡ ಪಾಟೀಲ

ಇಂಡಿ: ಭಾರತ ದೇಶ ಸ್ವಾತಂತ್ರ್ಯಗೊಳಿಸಲು ಮಹಾತ್ಮಾ ಗಾಂಧೀಜಿಯವರು ಬಳಸಿದ ಅಸ್ತ್ರ ಎಂದರೆ ಸತ್ಯ. ಶಾಂತಿ, ಅಂಹಿಸೆ ತ್ರೀವಿಧಗಳಿಂದ ಭಾರತ ಬ್ರೀಟಿಷರ ಸಂಕೋಲೆಯಲ್ಲಿದ್ದ ದೇಶ ಬಿಡುಗಡ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರನ್ನು ಇಡೀ ವಿಶ್ವಗೌರವಿಸುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಬಜಾರದಲ್ಲಿರುವ ಮಹಾತ್ಮಾಗಾಂಧೀಜಿಯವರ ವೃತ್ತ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು ಸತ್ಯ ಇದ್ದಲ್ಲಿ ಶಾಂತಿ, ಪ್ರೀತಿ ತನ್ನಿಂದಲೇ ಬರುತ್ತದೆ, ವಿಶ್ವದಲ್ಲಿಯೇ ಭಾರತ ಶಾಂತಿ, ಸಾಮರಸ್ಯಕ್ಕೆ ಹೆಸರು ವಾಸಿಯಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧೀಜಿಯವರ ವೃತ್ತ ನಿರ್ಮಾಣವಾಗದೆ ಉಳಿದಿತ್ತು. ಇಂದು ಹೊಸ ಸ್ಪರ್ಶ ಪಡೆದಿರುವುದು ಸಂತಸ ತಂದಿದೆ.

ಈ ಹಿಂದೆ ಅಭಿವೃದ್ದಿಯಿಂದ ವಂಚಿತವಾಗಿದ್ದ ಇಡೀ ಮತಕ್ಷೇತ್ರ ಸರ್ವವಿಧದಲ್ಲಿ ಸುಧಾರಣೆ ಮಾಡಿದ್ದೇನೆ. ಪಟ್ಟಣದ ರಸ್ತೆಗಳ ಅಗಲೀಕರಣ ಸಂಧರ್ಬದಲ್ಲಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಲೆಕ್ಕಿಸದೆ ನಗರದ ಸುಧಾರಣೆಗೆ ಜನತೆ ಸಹಕಾರ ಮಾಡಿದ್ದಾರೆ. ಸ್ಥಳೀಯ ಆಡಳಿತ ವ್ಯವಸ್ಥೆಗೆ ತನ್ನದೆಯಾದ ಬಂಡವಾಳ ಇರಲಿ ಎಂಬ ಸದಾಶಯ ದಿಂದ ಮೇಗಾ ಮಾರುಕಟ್ಟೆ ಕಟ್ಟಿಸಿ ಪುರಸಭೆಗೆ ಆದಾಯ ಬರುವಂತೆ ಮಾಡಲಾಗಿದೆ.

೫೫ ಸಾವಿರ ಜನಸಂಖ್ಯೆ ಹೊಂದಿರುವ ನಗರಕ್ಕೆ ಕುಡಿಯುವ ನೀರಿ ಸಮಸ್ಯೆ ಇತ್ತು. ಮಹಿಳೆಯರು, ಮಕ್ಕಳು ಪ್ಲಾಸ್ಟಿಕ್ ಕೊಡ ಹಿಡಿದುಕೊಂಡು ಅಲೇದಾಡುವ ಪರಸ್ಥಿತಿ ಇತ್ತು, ಇಂದು ೨೪+೭ ಕುಡಿಯುವ ನೀರಿನ ಯೋಜನೆಯಿಂದ ಸಮಸ್ಯ ನಿವಾರಣೆಯಾಗಿದೆ. ಸ್ಟೇಶನ್ ರಸ್ತೆ ಸುಮಾರು ೧೭ ಕೋಟಿ ರೂ ಅನುಧಾನದಲ್ಲಿ ಸಿ.ಸಿ ರಸ್ತೆ ನಿರ್ಮಾಣ ವಾಗಿದ್ದು ಇದರ ಸೌಂದರ್ಯ ಬೆಂಗಳೂರು ನಗರ ರಸ್ತೆಗಳಿಂಗಿಂತ ಅಕರ್ಷಕವಾಗಿರುವದರ ಜೊತೆ ಗುಣಮಟ್ಟ ದಾಗಿದೆ. ಮುಂದಿನ ದಿನಗಳಲ್ಲಿ ಅಗರಖೇಡ ರಸ್ತೆ, ಸಿಂದಗಿ ರಸ್ತೆ, ವಿಜಯಪೂರ ರಸ್ತೆ ನಾಲ್ಕು ಪ್ರಮುಖ ರಸ್ತೆಗಳು ಹಾಗೂ ಪಟ್ಟಣದ ಒಳರಸ್ತೆಗಳು ಅಭಿವೃದ್ದಿಪಡಿಸುತ್ತೇನೆ.

ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕಾದರೆ ಹಳ್ಳಿಗಳ ಅಭಿವೃದ್ದಿ ಹೊಂದಬೇಕು ಎಂದಿದ್ದಾರೆ. ನನ್ನ ಅವಧಿಯಲ್ಲಿ ಗ್ರಾಮೀಣ ಭಾಗದ ರಸ್ತೆ, ನೀರು, ವಿದ್ಯುತ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಭವಿಷ್ಯದಲ್ಲಿ ಮುಂಬರುವ ದಿನಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಒದಗಿಸಲಾಗುವುದು.

ಮಹಾತ್ಮಾ ಗಾಂಧೀಜಿ , ಡಾ.ಬಿ.ಆರ್ ಅಂಬೇಡ್ಕರವರನ್ನು ಇಡೀ ವಿಶ್ವ ಗೌರವಿಸುತ್ತದೆ. ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಇಂತಹ ಮಹಾನ್ ದಾರ್ಶನಿಕ ಯುಗಪುರುಷರ ಜೀವನ ಚರಿತ್ರೆ ದಿನ ನಿತ್ಯ ಓದಬೇಕು. ಇಂಡಿ ನಗರದಲ್ಲಿ ಸ್ಲಂ ಏರೀಯಾ ಎಲ್ಲಿಯೂ ಇಲ್ಲದಂತೆ ಮಾಡಿದಾಗ ಮಾತ್ರ ಗಾಂಧೀಜಿಯವರ ಆದರ್ಶ ಪಾಲಿಸಿದಂತಾಗುತ್ತದೆ. ಮುಂಬರುವ ದಿನಗಳಲ್ಲಿ ಪುರಸಭೆ ಅಧ್ಯಕ್ಷರು, ಸದಸ್ಯರಾದಿಯಾಗಿ ಪಟ್ಟಣದ ಹೃದಯವಂತ ಜನರ ಸಹಕಾರದಿಂದ ಸ್ಲಂ ಏರಿಯಾ ಮುಕ್ತಿಗೆ ಶ್ರಮಿಸೋಣ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ

ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿದರು. ಪುರಸಭೆ ಅಧ್ಯಕ್ಷ ಲಿಂಬಾಜೀ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಮುಸ್ತಾಕ ಇಂಡಿಕರ್ , ಉಮೇಶ ದೇಗಿನಾಳ, ಸತೀಶ ಕುಂಬಾರ, ಅಯೋಬ ಬಾಗವಾನ, ಇಸ್ಮಾಯಿಲ್ ಅರಬ, ತಿಪ್ಪಣ್ಣಾ ಉಟಗಿ, ಭೀಮಾಶಂಕರ ಮೂರಮನ್, ಯಲ್ಲಪ್ಪ ಹದರಿ,ಅಸ್ಲಂ ಕಡಣಿ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಮುಖಂಡರಾದ ಜಾವೀದ ಮೋಮಿನ್, ಎಂ.ಆರ್ ಪಾಟೀಲ, ಜೆಟ್ಟೆಪ್ಪ ರವಳಿ,ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಶೇಖರ ನಾಯಕ, ಗುರಣ್ಣಾಗೌಡ ಪಾಟೀಲ, ಮಲ್ಲುಗೌಡ ಪಾಟೀಲ, ಶಿವಯೋಗೇಪ್ಪ ಚನಗೊಂಡ, ಭೀಮಣ್ಣಾ ಕೌಲಗಿ, ಹರೀಶ್ಚಂದ್ರ ಪವಾರ, ಬಾಬುಸಾಹುಕಾರ ಮೇತ್ರಿ, ಜೀತಪ್ಪ ಕಲ್ಯಾಣಿ, ಸೋಮಶೇಖರ ಮ್ಯಾಕೇರಿ ,ಸತಾರ ಭಾಗವಾನ, ಮಹೇಶ ಹೊನ್ನಬಿಂದಗಿ, ಕಲ್ಲನಗೌಡ ಬಿರಾದಾರ, ಸುಭಾಸ ಹಿಟ್ನಳ್ಳಿ, ಜೈನೂದಿನ ಬಾಗವಾನ, ಹಣಮಂತ ಕೊಡತೆ, ಮಲ್ಲು ಮಡ್ಡಿಮನಿ, ಪೌರ ಕಾರ್ಮಿಕರಾದ ಪ್ರವೀಣ ಸೋನಾರ, ಚಂದು ಕಾಲೇಬಾಗ, ಹುಚ್ಚಪ್ಪ ಶಿವಶರಣ, ಲಕ್ಷ್ಮೀಪುತ್ರ ಸೋಮುನಾಯಕ, ಸದಾಶಿವ ನಿಂಬಾಳಕರ್ ಸೇರಿದಂತೆ ಅನೇಕ ಮುಖಂಡರು ಪುರಸಭೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Air India : ಏರ್ ಇಂಡಿಯಾ ಊಟದಲ್ಲಿ ಜಿರಳೆ ಪತ್ತೆ; ಪ್ರಯಾಣಿಕನ ಪ್ರಶ್ನೆಗೆ ಸಂಸ್ಥೆ ಕೊಟ್ಟ ಉತ್ತರವೇನು?