Sunday, 15th December 2024

ಐಪಿಎಲ್ ಬೆಟ್ಟಿಂಗ್‌ : ಯುವಕ ಸಾವು

ಸಿಂಧನೂರು: ತಾಲ್ಲೂಕಿನ ಉದ್ಬಾಳ ಗ್ರಾಮದ ಮುದಿಬಸವ (೨೯) ವರ್ಷದ ಯವಕ ಶ್ರೀ ಸಾಯಿ ರೆಸ್ಸಿಡೇನ್ಸ್ ಲಾಡ್ಜ್ ನಲ್ಲಿ ಪ್ಯಾನಿಗೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತಿಚಿನ ದಿನಗಳ ಯುವಕರು ಐಪಿಎಲ್ ನಿಂದ ಅತಿ ಹೆಚ್ಚಾಗಿ ದಾಸರಾಗುತ್ತಿದ್ದು ಅದರಿಂದ ಹಳ್ಳಿಗಳಲ್ಲಿ ಅತಿಯಾಗಿ ಬೆಟ್ಟಿಂಗ್ ನಡೆಯುತ್ತಿದೆ.

ಅದೇ ರೀತಿಯಗಿ ಸಿಂಧನೂರು ತಾಲ್ಲೂಕಿನ ಉದ್ಬಾಳ ಗ್ರಾಮದ ಮುದಿಬಸವ ಊರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟೀಗ್ ಆಡಿ ಸಾಲ ಮಾಡಿಕೊಂಡಿದ್ದರಿಂದ ಮರ್ಯಾದೆಗೆ ಹಂಚಿಕೊಂಡು ನೇಣು ಹಾಕಿಕೊಂಡು ಸಾವನ್ನಪ್ಪಿದಾನೆ ಎಂದು ಸ್ನೇಹಿತರು ಮಾತಾಡಿಕೊಳ್ಳುತ್ತಿದ್ದು ಈ ಒಂದು ಪ್ರಕರಣವು ಸಿಂಧನೂರು ನಗರ ಠಾಣೆಯಲ್ಲಿ ದಾಖಲಾಗಿದೆ.