Saturday, 14th December 2024

ಬೆದರಿಸುವಂತೆ ಮಾತ್ರ ಹೇಳಿದ್ದೆ, ಕೊಲೆ ಮಾಡಲು ಹೇಳಿಲ್ಲ: ನಟ ದರ್ಶನ್ ಪ್ರತಿಕ್ರಿಯೆ

ಬೆಂಗಳೂರು: ಗೆಳತಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಸಂದೇಶ ಮಾಡಿದ್ದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ಪ್ರತಕ್ರಿಯಿಸಿದ ನಟ ದರ್ಶನ್, ನಾನು ರೇಣುಕಾಸ್ವಾಮಿ ಕೊಲೆ ಮಾಡಲು ಹೇಳಿಲ್ಲ. ಬೆದರಿಸುವಂತೆ ಮಾತ್ರ ಹೇಳಿದ್ದೆ ಎಂದು ಪೊಲೀಸರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಮೈಸೂರಿನಲ್ಲಿ ನಟ ದರ್ಶನ್‌ನನ್ನು ಬಂಧಿಸಿರುವ ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಇಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ದರ್ಶನ್ ನನ್ನು ವಿಚಾರಣೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣದ ವಿಚಾರವಾಗಿ, ನಟನ ಪ್ರೇಯಸಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಲ್ಲಿ ಇವರದ್ದೇನಾದರೂ ಪಾತ್ರವಿದೆಯೇ? ಇವರ ಕುಮ್ಮಕ್ಕಿನಿಂದಲೇ ಹತ್ಯೆ ನಡೆಯಿತೇ? ಎಂಬೆಲ್ಲ ಆಯಾಮದಲ್ಲಿ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಸದ್ಯ ವಿಚಾರಣೆ ಮುಂದುವರೆದಿದೆ.