Saturday, 5th October 2024

ಕಾಂಗ್ರೆಸ್ ಟಿಕೆಟ್ ಬಯಸಿ ಜಗದೀಶ್ ಅರ್ಜಿ ಸಲ್ಲಿಕೆ

ಚಿಕ್ಕನಾಯಕನಹಳ್ಳಿ : ಹಿಂದುಳಿದ ವರ್ಗಗಳ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಸದ್ಯ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಪ್ರತಿನಿಧಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಕಳೆದ ೨೦೧೮ ರ ಚುನಾವಣೆಯಲ್ಲಿ ಸಂತೋಷ್ ಜಯಚಂದ್ರ ಅವರು ಜೆಸಿಎಂ ವಿರುದ್ದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸುರೇಶ್‌ನಾಯ್ಕ, ಅಲ್ಪಸಂಖ್ಯಾತ ಮುಖಂಡ ಮುಜೀಬ್ ( ಅಜಾದ್), ಅಬ್ದುಲ್ ಸಲಾಂ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀಧರ್, ವಕ್ತಾರ ನರಸಿಂಹಮೂರ್ತಿ, ಹಾಗು ಅಪಾರ ಬೆಂಬಲಿಗರು ಸಾಥ್ ನೀಡಿದರು.