Thursday, 12th December 2024

ಕಾಂಗ್ರೆಸ್ ಹಿಂದು ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ: ಜಗದ್ಗುರುಗಳು

ರಾಯಚೂರು: ಸಾರ್ವತ್ರಿಕ ರಜೆ ನೀಡದಿದ್ದರೆ ಹಿಂದೂ ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ ಅದಕ್ಕೆ ಮುಖ್ಯಮಂತ್ರಿಗಳು ಆಸ್ಪದ ನೀಡಬಾರದು ಎಂದು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಕಾರ್ಯಕ್ರಮ ಒಂದಕ್ಕೆ ಭಾಗಿಯಾಗಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ರಜೆ ಘೋಷಿಸಿದರೇ ಪಕ್ಷಕ್ಕೆ, ನಾಯಕರ ಮೇಲೆ ಹೆಚ್ಚಿನ ಭಾವನೆ, ಒಳ್ಳೆಯ ರೀತಿ ತಿಳಿದುಕೊಳ್ಳುತ್ತಾರೆ. ಇಲ್ಲದಿದ್ದರೆ ಹಿಂದುಗಳ ವಿರೋಧಿ ಕಾಂಗ್ರೆಸ್ ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ. ಅದಕ್ಕೆ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಆಸ್ಪದ ಕೊಡಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳು ಎಂದರು.

ನಾಳೆ ರಾಜ್ಯದಲ್ಲಿ ಸಾರ್ವಜನಿಕ ರಜೆ ನೀಡಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ. ಆದರೆ ಕೆಲವು ಪಕ್ಷದ ಧ್ಯೇಯ ಧೋರಣೆಗಳು ಆಯಾ ಪಕ್ಷದ ನಾಯಕರ ಗುರಿಗಳು ಭಿನ್ನವಾಗಿರುವ ಕಾರಣ ರಜೆ ಕೊಟ್ಟಿರಲಿಕ್ಕಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು ಸಮಯ ಇದೆ ಸಂಜೆ ವೇಳೆಗೆ ತಮ್ಮ ತೀರ್ಮಾನ ಪ್ರಕಟಿಸಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.