Thursday, 12th December 2024

ವಿದೇಶಾಂಗ ಸಚಿವ ಜೈಶಂಕರ್ ಏ.19ರಂದು ಉಡುಪಿಗೆ ಆಗಮನ

ಡುಪಿ: ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರು ಉಡುಪಿಗೆ ಆಗಮಿಸುತ್ತಿದ್ದಾರೆ.

ಏ. 19ರಂದು ಉಡುಪಿ ನಗರದ ಹೋಟೆಲ್ ಕಿದಿಯೂರ್ ಮಾಧವ ಕೃಷ್ಣ ಸಭಾಂಗಣದಲ್ಲಿ ಕೂರ್ಮ ಫೌಂಡೇಶನ್ ವತಿಯಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.

 

ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಡೆದಿರುವ ವಿದೇಶಾಂಗ ನೀತಿಗಳ ಮತ್ತು ರಾಜತಾಂತ್ರಿಕ ಸುಧಾರಣೆಗಳ ಬಗ್ಗೆ ಈ ಸಂವಾದ ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

ಉಡುಪಿಯ ಅಧ್ಯಯನಶೀಲ ವಿದ್ಯಾರ್ಥಿಗಳು , ಸಂಪನ್ಮೂಲ ವ್ಯಕ್ತಿಗಳು, ಪ್ರಮುಖ ಉದ್ಯಮಿಗಳು ಚಿಂತಕರು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂವಾದದ ಕೊನೆಯಲ್ಲಿ ಸಾರ್ವಜನಿಕರಿಗೆ ಮಾನ್ಯ ಮಂತ್ರಿಗಳ ಜೊತೆ ಪ್ರಶ್ನೋತ್ತರಕ್ಕೆ ಅವಕಾಶವಿದೆ.