ಗುಬ್ಬಿ : ತಾಲೂಕಿನ ಹಾಗಲವಾಡಿ ಹೋಬಳಿ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಕ್ಕಲಕಟ್ಟೆಯಲ್ಲಿ ಜೆಡಿಎಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಣ್ಣ ಅಭಿಮಾನಿ ಬಳಗದ ಮುಖಂಡ ಕೆ ಆರ್ ವೆಂಕಟೇಶ್ ತಾಲೂಕಿನಲ್ಲಿ ಪ್ರಬುದ್ಧ ಮತದಾರರಿದ್ದು ವಾಸಣ್ಣನವರ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟು ಗುಬ್ಬಿಯ ಹೆಮ್ಮೆ ವಾಸಣ್ಣ ಮತ್ತೊಮ್ಮೆ ಎಂಬ ಘೋಷಣೆಯೊಂದಿಗೆ ಯುವಕರು ಹೆಚ್ಚು ಉತ್ಸಾಹಕರಾಗಿ ವಾಸಣ್ಣ ಅಭಿಮಾನಿ ಬಳಗ ವನ್ನು ಬೆಂಬಲಿಸುತ್ತಿದ್ದು ಹಾಗೂ ಮಹಿಳೆಯರು ಸಹ ವಾಸಣ್ಣನವರ ಬೆಂಬಲಕ್ಕೆ ನಿಂತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಮುಖಂಡ ಉಮೇಶ್ ಮಾತನಾಡಿ ನಾವು ಬಿಜೆಪಿಯಲ್ಲಿದ್ದಾಗ ಮನೆಯ ಗೇಟಿನಲ್ಲಿ ಕಾದು ನಿಂತು ಸಮಸ್ಯೆಗಳನ್ನು ಹೇಳಿದರು ಸಹ ಸ್ಪಂದಿಸುತ್ತಿರಲಿಲ್ಲ. ವಾಸಣ್ಣನವರ ಮನೆಯ ಹತ್ತಿರ ಸಾಮಾನ್ಯ ಕಾರ್ಯಕರ್ತರು ಹೋದರು ಸಹ ಸ್ಪಂದಿಸುವುದನ್ನು ಕಾಣು ತ್ತೇವೆ. ವಾಸಣ್ಣನವರಿಗೆ ದೈವಬಲ ಜನಬಲ ಎರಡು ಇದೆ ಅವರನ್ನು ಮಂತ್ರಿಯಾಗಿ ನೋಡಲು ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕದರಯ್ಯ , ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ರಾಘವೇಂದ್ರ , ಮುಖಂಡರಾದ ಗುರುರೇಣುಕರಾಧ್ಯ ಕೆ.ಆರ್ .ವೆಂಕಟೇಶ್ , ಬಸವರಾಜು , ಪ್ರಸನ್ನ ಕುಮಾರ್, , ಕೊಟ್ಟಪ್ಪ , ಸೋಮಶೇಖರ್ , ಉಮೇಶ್ , ನಜೀರ್ ಸಾಬ್, ರತ್ನಮ್ಮ, ಭೂಮಿಕಾ ಮುಂತಾದವರು ಹಾಜರಿದ್ದರು.