ಮಾತೃಪ್ರಧಾನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಪ್ರತಿಪಾಧನೆ
ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ತಲೆತಲಾಂತರದಿ0ದ ಒಕ್ಕಲಿಗರು ಮತ್ತು ಕೆಲವೆಡೆ ಹೊಲೆಯರು ನಡೆಸಿಕೊಂಡು ಬಂದಿರುರುವ ಜಾನಪದದ ಸತ್ಸಂಪ್ರದಾಯ ಹೊಸದ್ಯಾವರ ಆಗಿದೆ.
ದೊಂದು ಮಾತೃಪ್ರಧಾನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ಸಾರುವ ವಿಶಿಷ್ಟ ಆಚರಣೆಯಾಗಿದೆ.
ತಾಲೂಕಿನ ನಾಯನಹಳ್ಳಿ ಗ್ರಾಮದ ಬಿ.ಎನ್.ಮುನಿಕೃಷ್ಣಪ್ಪ ಅವರ ಮನೆಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ೮ ಗ್ರಾಮಗಳಿಂದ ಬಂದಿದ್ದ ಹೆಣ್ಣುಮಕ್ಕಳು ಭಾನುವಾರ ಶ್ರದ್ಧಾಭಕ್ತಿಯಿಂದ ಹೊಸದ್ಯಾವರ ಆಚರಿಸಿದರು.
ದೀಪಾವಳಿ ಹಬ್ಬ ಕಳೆದ ನಂತರದಲ್ಲಿ ಪ್ರತಿವರ್ಷವೂ ತಪ್ಪದೆ ಈ ಪ್ರದೇಶ ದಲ್ಲಿ ಹೊಸದ್ಯಾವರ ಆಚರಣೆ ಮಾಡಲಾಗುತ್ತದೆ.ಈ ಆಚರಣೆ ವಿಶೇಷ ಮಹಿಳೆಯರೇ ಕೂಡಿ ಮಾಡುವುದಾಗಿದೆ.
ಹೊಸದ್ಯಾವರ ಇರುವ ಮನೆಯಲ್ಲಿನ ಹಿರಿಯ ಹೆಣ್ಣುಮಕ್ಕಳು ಇದನ್ನು ನಡೆಸಿಕೊಡುತ್ತಾರೆ.ಈ ಸಮಯದಲ್ಲಿ ಉಪವಾಸದಲ್ಲಿ ಇದ್ದು ಕಂಚಿನ ತಟ್ಟೆಯಲ್ಲಿ ದೀಪವನ್ನು ಇಟ್ಟುಕೊಂಡು ಅದನ್ನು ತಲೆಯ ಮೇಲೆ ಹೊತ್ತು ಅದು ಆರದಂತೆ ಪೂಜೆ ಮುಗಿಸಿ ಜೋಪಾನವಾಗಿ ಕಿರಿಯರ ತಲೆಗೆ ವರ್ಗಾಯಿಸುತ್ತಾರೆ.
ಅಂದರೆ ಅತ್ತೆ ಸೊಸೆಗೆ ದ್ಯಾವರ ನೀಡುತ್ತಾರೆ.ತಲೆಯ ಮೇಲೆ ದೀಪ ಹೊತ್ತವರು ನಾಲ್ಕು ದಿಕ್ಕುಗಳಿಗೂ ನೀರನ್ನು ಚೆಲ್ಲುವ ಮೂಲಕ ಪಂಚಭೂತ ಗಳ ಸಹಿತ ಸೂರ್ಯದೇವರಿಗೆ ನಮಸ್ಕಾರ ಮಾಡುತ್ತಾರೆ. ಪೂಜೆ ಮುಗಿದ ನಂತರ ನೈವೇಧ್ಯಕ್ಕೆ ಸಿದ್ದಪಡಿಸಿರುವ ಆಹಾರವನ್ನು ಎಲ್ಲರೂ ಕೂತು ಉಣ್ಣುವ ಪದ್ಧತಿ ಇದೆ.ಇದರ ಮೂಲಕ ಸಂಬ0ಧಗಳ ಮಹತ್ವನ್ನು ಕಿರಿಯ ತಲೆಮಾರಿಗೆ ತಿಳಿಸಿಕೊಡುವ ಮೂಲಕ ಹಿರಿಯನ್ನು ಆಧರಿಸಬೇಕು ಎಂಬ ಸಂದೇಶವನ್ನು ನೀಡುತ್ತಾರೆ.
ಬಹಳ ವಿಶೇಷವಾಗಿ ಇಂತಹ ಆಚರಣೆಗಳು ಆಧುನಿಕತೆಯ ಮೋಹಕ್ಕೆ ಸಿಕ್ಕಿ ಮರೆಯಾಗುತ್ತಿರುವ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಅವಕಾಶ ನೀಡುವ ಜತೆಗೆ ಹೆಣ್ಣಿಗೆ ತೌರುಮನೆ ಮತ್ತು ಅತ್ತೆಮನೆ ಎರಡೂ ಕೂಡ ಮುಖ್ಯ, ಅಲ್ಲಿನ ಸಂಬ0ಧಗಳು ಹದವಾಗಿದ್ದರೆ ಮಾತ್ರ ಸಮಾಜದಲ್ಲಿ ಒಂದು ಗೌರವ ಬೆಲೆ ಪ್ರಾಪ್ತಿಯಾಗಲಿದೆ ಎಂಬುದನ್ನು ಹೊಸದ್ಯಾವರದ ಮೂಲಕ ಸಾರಿದೆ ಎನ್ನುವುದು ಕೆಪಿಆರ್‌ಎಸ್ ರೈತ ಮುಖಂಡ ಮುನಿಕೃಷ್ಣಪ್ಪ ಅವರ ಮಾತಾಗಿದೆದೀ ಆಚರಣೆಯಲ್ಲಿ ನಾಯನಹಳ್ಳಿ ಗ್ರಾಮದಲ್ಲಿ ನಡೆದ ಹೊಸದ್ಯಾವರ ಆಚರಣೆಯಲ್ಲಿ ಶತಾಯುಷಿ ೧೦೧ ವರ್ಷದ ನಾರಾಯ ಣಮ್ಮ, ಉಷಾ, ಆಶಾ,ರತ್ನಮ್ಮಪಾರಿಜಾತ, ಲಕ್ಷö್ಮಮ್ಮ,ಬೈರಮ್ಮ, ನಾಗು, ರೇಣುಕಮ್ಮ ಇದ್ದರು.