ತುಮಕೂರು: ಚದುರಂಗ, ಶತ್ರಂಜ್ ಎಂದು ಕರೆಯಲ್ಪಡುವ ಚೆಸ್ ಆಟ ಭಾರತೀಯ ಮೂಲದ್ದು,ಆ ನಂತರ ಅದು ಬ್ರಿಟಿಷರ ಮೂಲಕ ವಿಶ್ವಕ್ಕೆ ಪರಿಚಯವಾಯಿತು ಎಂದು ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದಜೀ ತಿಳಿಸಿದರು.
ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಅಡಿಟೋರಿಯಂನಲ್ಲಿ ನ್ಯೂ ತುಮಕೂರು ಡಿಸ್ಟಿçಕ್ ಚೆಸ್ ಅಸೋಸಿಯೇಷನ್ ಮತ್ತು ಎಂ.ಎಂ.ಚೆಸ್ ಡೆವಲಪ್ಮೆಂಟ್ ಟ್ರಸ್ಟ್, ಚೆಸ್ ಫೆಡರೇಷನ್ ಅಫ್ ಪಿಸಿಕಲಿ ಡಿಸೆಬಲ್ಡ್(ಸಿ.ಎಫ್.ಪಿ.ಡಿ.) ಅವರ ಸಹಯೋಗ ದಲ್ಲಿ ಆಯೋ ಜಸಿದ್ದ 3ನೇ ರಾಷ್ಟಿçÃಯ ವಿಶೇಷಚೇತನರ ಚೆಸ್ ಚಾಂಪಿಯನ್ಶಿಪ್-2022 ಉದ್ಘಾಟಿಸಿ ಮಾತನಾಡಿದರು.
ಮೂರನೇ ರಾಷ್ಟಿçÃಯ ವಿಕಲಚೇತನ ಚೆಸ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಲು 16 ರಾಜ್ಯಗಳಿಂದ ವಿಶೇಷಚೇತನ ಆಟಗಾರರು ಬಂದಿದ್ದಾರೆ.ಅವರ ಈ ಸಾಧನೆಯ ಹಿಂದೆ ಅವರ ಪೋಷಕರ ಮಹತ್ವದ ತ್ಯಾಗವಿದೆ. ಮಕ್ಕಳ ಸಮಗ್ರ ಬೆಳವಣಿಗೆಗೆ ತಮ್ಮನ್ನು ತಾವು ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ.ನಿಜಕ್ಕೂ ಅವರು ಅಭಿನಂದನಾರ್ಹರು.
ವಿಕಲಚೇತನರಿಗೆ ನಮ್ಮ ಹಣ ಬೇಕಿಲ್ಲ. ಅವರಿಗೆ ಸೂಕ್ತ ಅವಕಾಶವನ್ನು ಕಲ್ಪಿಸಬೇಕು. ಈ ದಿಸೆಯಲ್ಲಿ ಟಿ.ಎನ್.ಮಧುಕರ್, ಮಾಧುರಿ, ಅಖಿಲಾನಂದ್. ರಮಣ್ ಹುಲಿನಾಯ್ಕರ್ ಮತ್ತಿತರರು ತುಮಕೂರಿನಲ್ಲಿ ರಾಷ್ಟಿçÃಯ ಪಂದ್ಯಾವಳಿ ಆಯೋಜಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಇಲ್ಲಿ ಆಟವಾಡಲು ಬಂದಿರುವ ಆಟಗಾರರು ದೈಹಿಕವಾಗಿ ನೂನ್ಯತೆ ಇದ್ದರೂ ಮಾನಸಿಕವಾಗಿ ಬಹಳ ಸದೃಢರು. ಆದರೆ ದೈಹಿಕವಾಗಿ ಸಶಕ್ತವಾಗಿರುವವರೇ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿರುತ್ತಾರೆ. ಹಾಗಾಗಿ ಪ್ರತಿಯೊಬ್ಬರಲ್ಲೂ ಒಂದು ರೀತಿ ವೈಫಲ್ಯತೆ ಇರುತ್ತದೆ. ಎಲ್ಲಾ ವೈಫಲ್ಯಗಳನ್ನು ಮೀರಿ ಸಾಧಿಸುವುದೇ ನಿಜವಾದ ಜೀವನ. ವಿಶೇಷಚೇತನರಿಗೆ ಪಂದ್ಯಾವಳಿಯನ್ನು ಸವಾಲಾಗಿ ಸ್ವೀಕರಿಸಿ ವ್ಯವಸ್ಥಿತವಾಗಿ ಚೆಸ್ ಅಸೋಸಿ ಯೇಷನ್ನ ಎಲ್ಲಾ ಪದಾಧಿಕಾರಿಗಳಿಗೂ ಜಿಲ್ಲಾಡಳಿತದಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆಂದರು.
ವಿಶೇಷಚೇತನರಲ್ಲಿ ಸಾಮಾರ್ಥ್ಯ ಹೆಚ್ಚು:ಪ್ಯಾರಾ ಒಲಂಪಿಕ್ ಅಥ್ಲೆಟ್, ಪದ್ಮಶ್ರೀ ಕೆ.ವೈ.ವೆಂಕಟೇಶ್ ಮಾತನಾಡಿ, ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ವಿಶೇಷಚೇತನರು ವೈಕಲ್ಯವನ್ನು ಬದಿಗೆ ಸರಿಸಿ ತಮ್ಮಲ್ಲಿರುವ ಸಾಮಾರ್ಥ್ಯದ ಮೇಲೆ ನಂಬಿಕೆ ಯಿಟ್ಟು ಮುನ್ನುಗ್ಗಬೇಕು. ಕಳೆದ ಒಲಂಪಿಕ್ನಲ್ಲಿ ಸಾಮಾನ್ಯ ಆಟಗಾರರು ಭಾರತಕ್ಕೆ 9 ಪದಕಗಳನ್ನು ತಂದರೆ,ವಿಶೇಷಚೇತನರು ಪ್ಯಾರಾ ಒಲಂಪಿಕ್ನಲ್ಲಿ 19 ಪದಗಳನ್ನು ತಂದಿದ್ದೇವೆ. ಇದು ವಿಶೇಷಚೇತನರಿಗಿರುವ ಶಕ್ತಿ ಎಂದು ಹೇಳಿ ಆಟಗಾರರನ್ನು ಹುರಿದುಂಬಿಸಿದರು.
ಪ್ರಜಾಪ್ರಗತಿ ಸಂಪಾದಕ ಹಾಗೂ ರೆಡ್ಕ್ರಾಸ್ ಸಂಸ್ಥೆಯ ರಾಷ್ಟಿçÃಯ ಸದಸ್ಯ ಎಸ್.ನಾಗಣ್ಣ ಮಾತನಾಡಿ,2018ರಲ್ಲಿ ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 7 ವರ್ಷದ ಒಳಗಿನ ಚೆಸ್ ಚಾಂಪಿಯನ್ ಕ್ರೀಡಾಕೂಟ ವಿಶೇಷಚೇತನರ ಪಂದ್ಯಾವಳಿ ಆಯೋಜನೆಗೆ ಪ್ರೇರಣೆ. ಮಧುಕರ್ ಮತ್ತು ಅವರ ತಂಡ ಹಾಗೂ ಆನಂದಬಾಬು ಮತ್ತು ತಂಡದ ಅವಿರತ ಶ್ರಮದ ಫಲವಾಗಿ ನಾಲ್ಕು ದಿನಗಳ ಈ ಚಾಂಪಿಯನ್ಶಿಫ್ ಆಯೋಜನೆಗೊಂಡಿದೆ. ಜೀವನವೂ ಒಂದು ರೀತಿ ಚೆಸ್ ಆಟವಿದ್ದಂತೆ, ರಣರಂಗದಲ್ಲಿ ಅನುಸರಿಸುವ ತಂತ್ರಗಾರಿಕೆಯನ್ನೇ ಕಡೆಯವರೆಗೂ ಅನುಸರಿಸಬೇಕಾಗುತ್ತದೆ ಎಂದರು.
ಕ್ರೀಡಾಕೂಟದ ಆಯೋಜಕರಾದ ಆನಂದಬಾಬು ಮಾತನಾಡಿ, ಮೆಟ್ರೋಸಿಟಿಯಲ್ಲಿ ಮಾಡಬೇಕಿದ್ದ ಪಂದ್ಯಾವಳಿಯನ್ನು ತುಮಕೂರಿನಲ್ಲಿ ಹೇಗೆ ಆಚರಿಸುವುದು ಎಂಬ ಸಂದೇಹವಿತ್ತು. ಆದರೆ ಇಲ್ಲಿನ ಆಯೋಜಕರ ಉತ್ಸಾಹ, ಕಾಲೇಜು ಟ್ರಸ್ಟಿಗಳು ಮಾಡಿಕೊಟ್ಟಿರುವ ವ್ಯವಸ್ಥೆ ನೋಡಿ ಚೆಸ್ ಒಲಂಪಿಯಾಡ್ನೇ ಇಲ್ಲಿ ನಡೆಸಬಹುದು ಅನಿಸುತ್ತಿದೆ ಎಂದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಚೆಸ್ ತಾಂತ್ರಿಕ ಆಟವಾದರೂ ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಇಂತಹ ಒಂದು ಕ್ರೀಡಾಕೂಟ ನಡೆಯುತ್ತಿರುವುದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಚಾರ. ರಾಷ್ಟçದ ವಿವಿಧೆಡೆಯಿಂದ ಆಗಮಿಸಿರುವ ಆಟಗಾರರು ನಡೆದಾಡುವ ದೇವರೆಂದೆ ಕರೆಯಲ್ಪಡುತ್ತಿದ್ದಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಲಿಂಗೈಕ್ಯ ಸ್ಥಳ ಸಿದ್ಧಗಂಗೆ ಸೇರಿದಂತೆ ತುಮಕೂರು ಸುತ್ತಮುತ್ತಲ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸುವಂತೆ ಸಲಹೆಯಿತ್ತರು.
ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಟಿ.ಎನ್. ಮಧುಕರ್ ಮಾತನಾಡಿ,ದೇಶದ 16 ರಾಜ್ಯಗಳಿಂದ ನೂರಾರು ವಿಕಲಚೇತನ ಚೆಸ್ ಆಟಗಾರರು ಇಲ್ಲಿ ಪಾಲ್ಗೊಂಡಿ ದ್ದಾರೆ.ವಿಲ್ಹ್ ಚೇರ್ ಮತ್ತು ಸಾಮಾನ್ಯ ಎಂಬ ಎರಡು ವಿಭಾಗಗಳಿವೆ.ನಿಯಮದಂತೆ 9 ರೌಂಡ್ಗಳ ಆಟದ ನಂತರ ಗಳಿಸುವ ಅಂಕಗಳನ್ನು ಆಧರಿಸಿ,ವಿಜೇತರನ್ನು ಘೋಷಿಸಲಾಗುವುದು.ಇಲ್ಲಿನ ವಿಜೇತರು ವಿಶ್ವ ವಿಕಲಚೇತನ ಚೆಸ್ ಚಾಂಪಿಯನ್ ಶಿಫ್ನಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದ್ದಾರೆ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಟಿ.ಎನ್.ಮಧುಕರ್ ಮತ್ತು ಸ್ನೇಹಿತರ ಇಂತಹ ಒಂದು ಟೂರ್ನಿಯನ್ನು ಆಯೋಜಿಸುವ ಮೂಲಕ ತುಮಕೂರು ನಗರವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.ವಿಕಲಚೇತನರು ತಮ್ಮ ನೂನ್ಯತೆಗಳನ್ನು ಬದಿಗಿರಿಸಿ,ಎಲ್ಲ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಶಕ್ತಿ ಎನು ಎಂಬುದನ್ನು ಪ್ರಚುರಪಡಿಸಲು ಇದೊಂದು ವೇದಿಕೆಯಾಗಿದೆ ಎಂದರು.
ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ ವಿಶೇಷ ಚೇತನರ ಈ ಪಂದ್ಯಾವಳಿ ತುಮಕೂರಿಗೆ ಹೆಮ್ಮೆಯ ಗರಿ ಮೂಡಿಸಿದೆ ಎಂದರು.
ವೇದಿಕೆಯಲ್ಲಿ ಡಾ.ರಮಣ ಹುಲಿನಾಯ್ಕರ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಅರವಿಂದ ಶಾಸ್ತಿç,ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ನ ಉಪಾಧ್ಯಕ್ಷರಾದ ಕಿರಣ್ಮೋರಸ್, ಅಖಿಲಾನಂದ,ಎಸ್., ಕಾರ್ಯದರ್ಶಿ ಮಾಧುರಿ, ಖಜಾಂಚಿ ಶ್ರೀನಿವಾಸ್ ಉಪಸ್ಥಿತರಿದ್ದರು. ತುಮಕೂರಿನ ಎಂ.ಜಿ.ರಸ್ತೆಯ ಮಾನಸ ಬುದ್ದಿಮಾಂದ್ಯ ಶಾಲೆ ಮಕ್ಕಳು ಸಿದ್ಧಗಂಗಾ ಶ್ರೀಗಳ ಕುರಿತಂತೆ ನಡೆಸಿಕೊಟ್ಟ ನೃತ್ಯ ರೂಪಕ ಸಭಿಕರ ಮೆಚ್ಚುಗೆಗಳಿಸಿತು. ಪದ್ಮಜ ನಿರೂಪಿಸಿದರು.