Thursday, 12th December 2024

75ನೇ ವರ್ಷದ ಅಮೃತ ಮಹೋತ್ಸವ: ಜಾಥಕ್ಕೆ ಚಾಲನೆ

ಗುಬ್ಬಿ : ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ಮೇಲೆ ಜನಸಾಮಾನ್ಯರ ಜೀವನ ಮಾಡುವುದು ಕಷ್ಟ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ತಿಳಿಸಿದರು.
ತಾಲೂಕಿನ ಚೇಳೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ 75ನೇ ವರ್ಷದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಾಥ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ಕಾರ್ಮಿಕರು ಹಿಂದುಳಿದವರು ಬದುಕು ನಡೆಸಬೇಕು ಎಂದರೆ ಉತ್ತಮ ಸರ್ಕಾರದ ಅವಶ್ಯಕತೆ ಇದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸ ನ್ನು ಕೈಹಿಡಿಯುವ ಮೂಲಕ ಉತ್ತಮ ಸಮಾಜಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರ ದಲ್ಲಿದ್ದಾಗ ಜನಸಾಮಾನ್ಯರಿಗೆ ಅನು ಕೂಲವಾಗುವಂತಹ ಹಲವು ಭಾಗ್ಯಗಳನ್ನು ಹಿಡಿದು ಆ ಮೂಲಕ ಜನರ ಕೈಹಿಡಿದಿದ್ದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಯನ್ನು ಕೂಡ ಗಳಿಸುವ ಮೂಲಕ ಜನಪರವಾದ ಸರ್ಕಾರವಾಗಿತ್ತು.
ಆದರೆ ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆಯೂ ಸಹ ಜನರಿಗೆ ಹೊರೆ ಹಾಕುವಂತಹ ಜಿ ಎಸ್ ಟಿ, ಪೆಟ್ರೋಲ್ ದರ ಹೆಚ್ಚಳ, ತಿನ್ನುವ ಅನ್ನಕ್ಕೋ ಬರೆ ಹಾಕುವಂತಹ ಕೆಲಸಕ್ಕೆ ಮುಂದಾಗಿರುವುದು ಬೇಸರದ ಸಂಗತಿ 70 ವರ್ಷಗಳ ಆಡಳಿತ ಮಾಡಿದ ಕಾಂಗ್ರೆಸ್ ಯಾರನ್ನು ಸಹ ಒಕ್ಕಲೆಬ್ಬಿಸುವ ಬಡತನಕ್ಕೆ ನೋಡುವಂತಹ ಕೆಲಸವನ್ನು ಮಾಡಿರಲಿಲ್ಲ ಆದರೆ ಬಿಜೆಪಿ ಸರಕಾರ ಉದ್ಯೋಗ ಕೊಡುತ್ತೇವೆ ಎಂದು ತಲಾಆದಾಯ ಹೆಚ್ಚಿಸುತ್ತೇವೆ ಎಂದು ಅಧಿಕಾರಕ್ಕೆ ಬಂದು ಇಂದು ಆರ್ಥಿಕವಾದ ದಿವಾಳಿಯ ಬೀಸುತ್ತಿದೆ ಎಂದು ಕಿಡಿಕಾರಿದರು.
ವಿಧಾನಸಭಾ ಚುನಾವಣೆ ಆಕಾಂಕ್ಷಿ ಪ್ರಸನ್ನಕುಮಾರ್ ಮಾತನಾಡಿ ಅಭಿವೃದ್ಧಿಯ ವಿಚಾರವನ್ನು ಬಿಟ್ಟು ಮಾತನಾಡದ ಬಿಜೆಪಿ ಸರ್ಕಾರ ಧರ್ಮಗಳ ನಡುವೆ ಜಾತಿಯ ನಡುವೆ ವೈಷಮ್ಯವನ್ನು ತಂದು ನಮ್ಮೊಳಗೆ ಬೇರೆ ಬೇರೆ ಮಾಡಲು ಮುಂದಾಗಿದೆ ಅಭಿ ವೃದ್ಧಿಯ ವಿಚಾರ ಮಾತನಾಡದೆ ಕೇವಲ ಧರ್ಮದ ಆಫೀಮನ್ನು ದೇಶಕ್ಕೆ ಅಂಟಿಸಿ ಪ್ರಜಾಪ್ರಭುತ್ವ ದೇಶಕ್ಕೆ ಕಳಂಕವನ್ನು ತರಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಚುನಾವಣಾ ಆಕಾಂಕ್ಷೆ ಹೊನ್ನಗಿರಿ  ಗೌಡ ಮಾತನಾಡಿ ಕಳೆದ ಹತ್ತು ವರ್ಷಗಳಿಂದಲೂ ಕಾಂಗ್ರೆಸ್ ಕಟ್ಟಿ ಬೆಳೆಸಲು ಮುಂದಾಗಿರುವ ನನಗೆ ಈ ಬಾರಿ ಟಿಕೆಟ್ ನೀಡುತ್ತಾರೆ ಎಂಬ ಭರವಸೆ ಇದ್ದು ತಾಲೂಕಿನ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಯೋಜನೆಯನ್ನು ಮಾಡಿದ್ದು ಈ ಬಾರಿ ತಾವೆಲ್ಲರೂ ಕಾಂಗ್ರೆಸ್ಸನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಶ್ರೀನಿವಾಸ್, ಶಾರದಮ್ಮ, ಗಂಗಾಧರಯ್ಯ,ಸಲೀಂ ಪಾಷಾ,ಮಂಜುನಾಥ್, ಚಿಕ್ಕರಂಗೇಗೌಡ, ನರಸಿಂಹಯ್ಯ ಕೊಡಿಯಾಲ , ನಾಗರಾಜು , ರೂಪ , ಸೌಭಾಗ್ಯ , ಶಿವಣ್ಣ, ರಂಗಣ್ಣ ಸೇರಿದಂತೆ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.