Sunday, 15th December 2024

ಏ.30ರಂದು ಶ್ರೀ ದುರ್ಗಾಪರಮೇಶ್ವರಿ ಅದ್ದೂರಿ ಜಾತ್ರಾ ಮಹೋತ್ಸವ 

ಗುಬ್ಬಿ: ತಾಲೂಕಿನ ಎಂಎನ್ ಕೋಟೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ ಏ.30ರಂದು ಮತ್ತು ಮೇ.01ರಂದು ನಡೆಯಲಿದೆ.
ಮಂಗಳವಾರ ಬೆಳಿಗ್ಗೆ ಅಮ್ಮನವರಿಗೆ ಕುಂಕುಮಾರ್ಚನೆ ಸಹಸ್ರನಾಮಸ್ಮರಣೆ ಮಹಾಮಂಗಳಾರತಿಯೊಂದಿಗೆ ಮನೆಮನೆಗೆ ತೆರಳಿ  ಮಡ್ಲಕ್ಕಿ ಸೇವೆ ಸ್ವೀಕರಿಸಿದ ನಂತರ ಸಂಜೆ ಗಂಗಸ್ಥಾನ ನೆರವೇರಲಿದೆ.
ಬುಧವಾರ ಆರತಿ ಸೇವೆಯ ನಂತರ   ದೇವಿಯನ್ನು ಶೃಂಗರಿಸಿ ಚಿನ್ನದ ರಥದಲ್ಲಿ ವೀರಗಾಸೆ ಕುಣಿತದ  ಜೊತೆಗೆ ಮಂಗಳವಾದ್ಯದೊಂದಿಗೆ ಮೆರವಣಿಗೆ ಅದ್ದೂರಿಯಾಗಿ  ನಡೆಯಲಿದ್ದು ಭಕ್ತಾದಿಗಳು ತಾಯಿ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಳಿ ಕೋರಿದೆ.