ಚಿಕ್ಕನಾಯಕನಹಳ್ಳಿ : ಪಟ್ಟಣದಲ್ಲಿರುವ ಜ್ಞಾನಪೀಠ ಪ್ರೌಢಶಾಲೆಯಲ್ಲಿ ವಿವೇಕಾನಂದ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ಭಾರತದ ಹಿರಿಮೆಯನ್ನು ವಿಶ್ವಕ್ಕೆ ಸಾರಿದ ಸ್ವಾಮಿ ವಿವೇಕಾನಂದರ ಜನುಮ ದಿನವನ್ನು ರಾಷ್ಟಿçÃಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಅತಿಥಿಗಳು ವಿವೇಕಾನಂದರ ಜೀವನ ಚರಿತ್ರೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ನಾವೇಲ್ಲರೂ ತಿಳಿದುಕೊಳ್ಳ ಬೇಕಾಗಿದೆ. ಅವರ ಜೀವನದ ಮೌಲ್ಯವನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು. ವಿದ್ಯಾರ್ಥಿಗಳು ವಿವೇಕಾನಂದ ಚಿಂತನೆಯ ಕುರಿತು ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಪ್ರಸನ್ನಕುಮಾರ್, ಉಜ್ಜಜ್ಜಿ ರಾಜಣ್ಣ, ಇಂದಿರಮ್ಮ, ಮುಖ್ಯ ಶಿಕ್ಷಕ ಬಸವನಾಯಕ್, ಸಹ ಶಿಕ್ಷಕ ಶ್ರೇಷ್ಠಾದ್ರಿ, ಮೇನಕ ಹಾಗು ವಿದ್ಯಾರ್ಥಿಗಳಿದ್ದರು.