Saturday, 14th December 2024

ಕೆ.ಎನ್.ರಾಜಣ್ಣ ಅವರ ಹತ್ತಾರು ಅಕ್ರಮ ಬಯಲು ಮಾಡುವೆ : ಜೆ.ಸಿಎಂ

ಚಿಕ್ಕನಾಯಕನಹಳ್ಳಿ : ಡಿಸಿಸಿ ಬ್ಯಾಂಕ್ ಹಾಗು ಅದರ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಅಕ್ರಮಗಳನ್ನು ಬಯಲು ಮಾಡುವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ ನಡೆಸಿದರು.

ಜೆ.ಸಿ.ಪುರದಲ್ಲಿ ಗಂಗಾಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇನ್ನೆರಡು ದಿನದಲ್ಲಿ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಡಿಸಿಸಿ ಬ್ಯಾಂಕಿನ ಅಕ್ರಮ ವ್ಯವಹಾರದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ.

ಪುಕ್ಸಟ್ಟೆ ದುಡ್ಡು, ಬಡ್ಡಿ ಮನ್ನಾ ಅಂದರೆ ಅವರ ಮತದಾರರಿಗೆ ಕ್ಷೇತ್ರದಲ್ಲಿ ಹುಡುಕಿ ೧೮.೦೦೦ ಕುಟುಂಬಗಳಿಗೆ ಸಾಲ ನೀಡಿದ್ದಾರೆ. ಕೇವಲ ಸೆಲ್ಫ್ ಇನ್ ಪ್ರೂಫ್ ದಾಖಲೆ ಪಡೆದು ಸ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಿಸಿದ್ದಾರೆ. ಸಾಲ ಯೋಜನೆಯ ಶೇ.೫೦ ರಷ್ಟು ಹಣವನ್ನು ಮಧುಗಿರಿಗೆ ವಿನಿಯೋಗಿಸಿದ್ದಾರೆ ಎಂದು ಅಪಾದಿಸಿದರು. ಮಧುಗಿರಿಗೆ ೮೦ ಸಾವಿರ ಅವರೇಜ್ ನೀಡಿ ಚಿಕ್ಕನಾಯಕನಹಳ್ಳಿಗೆ ೩೬ ಸಾವಿರ ಅವರೇಜ್ ನೀಡಿದ್ದಾರೆ. ಇದೆಲ್ಲವೂ ತನಿಖೆಗೆ ಒಳಪಡಲಿದ್ದು ರಾಜಣ್ಣ ಹೆದರಿಸಿದರೆ ಹೆದರುವವನಲ್ಲ ಎಂದು ಗುಡುಗಿದರು.

ಸಹಕಾರ ಸಂಘಗಳ ದುಡ್ಡಿನಿಂದ ಡಿಸಿಸಿ ಬ್ಯಾಂಕ್ ರೈತರಿಗೆ ಸಾಲ ನೀಡುತ್ತಿದೆ. ಸೊಸೈಟಿ ಗಳ ಅಡಿಷನಲ್ ಶೇರುಗಳನ್ನು ಡಿಪಾಸಿಟ್ ಎಂದು ತಿಳಿಸಿ ಆ ಹಣದಿಂದ ರೈತರಿಗೆ ಸಾಲ ನೀಡಿ ಬಡ್ಡಿ ಪಡೆಯುತ್ತಿದ್ದಾರೆ. ಈ ಹಣಕ್ಕೆ ಸೊಸೈಟಿ ಅವರಿಗೆ ನಯಾ ಪೈಸೆಯನ್ನು ನೀಡದೆ ಸರಕಾರದಿಂದ ಬರುವ ಬಡ್ಡಿ ಮನ್ನಾ ಮತ್ತು ಇತರೆ ಅನುಕೂಲಗಳನ್ನು ಡಿಸಿಸಿ ಬ್ಯಾಂಕ್ ಪಡೆಯುತ್ತಿದೆ. ಇದರಿಂದ ಸಹಕಾರ ಸಂಘಗಳ ಆದಾಯ ಖೋತಾವಾಗುತ್ತಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಸಹಕಾರ ಸಂಘಗಳು ಇಟ್ಟಿರುವ ಡಿಪಾಸಿಟ್ ವಾಪಸ್ ಪಡೆದರೆ ಸಂಘಗಳು ಸ್ವ ಸಾಮಾರ್ಥ್ಯದ ಮೇಲೆ ಕೃಷಿ ಸಾಲ ಕೊಡಬಹುದು.

ಇನ್ನು ಮುಂದೆ ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಸಾಲ ತಂದು ನೇರವಾಗಿ ರೈತರಿಗೆ ವಿತರಿಸುವ ಅಧಿಕಾರವನ್ನು ಸಂಘಗಳಿಗೆ ನೀಡುವಂತೆ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ನಿರ್ದೇಶನ ನೀಡಿದ್ದೇನೆಂದು ತಿಳಿಸಿದರು.