Sunday, 24th November 2024

ಶೇ.೮೦ರಷ್ಟು ಸಹಾಯಧನದ ಸದ್ಬಳಕೆ ಮಾಡಿಕೊಳ್ಳಿ: ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ : ರೈತರಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಶೇ.80ರಷ್ಟು ಸಹಾಯಧನವನ್ನು ಸರಕಾರ ನೀಡುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು.

ಪಟ್ಟಣದ ಲೋಕೋಪಯೋಗಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲವು ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸಲು ೧೫ ರಿಂದ ೨೦ ಕಂಬಗಳನ್ನು ಹಾಕಿ ಲೈನ್ ಎಳೆದಿದ್ದೀರಿ. ಇದಕ್ಕೆ ತಗುಲುವ ವೆಚ್ಚವನ್ನು ರೈತನು ಭರಿಸಬೇಕಾಗಿದ್ದು ಅವನಿಗೆ ಅದು ಹೊರೆಯಾಗುತ್ತಿದೆ. ಅದರ ಬದಲು ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಮನವೊಲಿಸಿ. ಹಣ ಪೀಕದಿದ್ದರೆ ನೀವುಗಳು ಯಾವುದೇ ಕೆಲಸ ಮಾಡುವುದಿಲ್ಲ ಎಂಬ ಮಾಹಿತಿ ಬಂದಿದ್ದು ನಿಮಗೆ ಲಂಚ ನೀಡುವ ಹಣದಲ್ಲಿ ರೈತರು ಸೋಲಾರ್ ಪಂಪ್‌ಸೆಟ್‌ಗಳನ್ನೇ ಖರೀದಿಸ ಬಹುದೆಂದು ಬೆಸ್ಕಾಂ ಇಂಜಿನಿ ಯರ್ ರಾಜಶೇಖರ್‌ಗೆ ಕುಟುಕಿದರು.

ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯು ಸಚಿವರು ಕೇಳಿದ ಮಾಹಿತಿ ಯನ್ನು ಸಮರ್ಪಕವಾಗಿ ನೀಡಲಿಲ್ಲ. ಮತ್ತು ಹುಳಿಯಾರಿನಲ್ಲಿ ಹಾಸ್ಟೆಲ್ ಆರಂಭಿಸಲು ದಾನಿಗಳು ಉಚಿತವಾಗಿ ಬಾಡಿಗೆ ಇಲ್ಲದೆ ಬಿಲ್ಡಿಂಗ್ ನೀಡುತ್ತಿದ್ದಾರೆ.

ನಿಗಾ ವಹಿಸುವಂತೆ ಆರು ತಿಂಗಳ ಹಿಂದೆ ತಿಳಿಸಿದ್ದರೂ, ಅದರ ಅರಿವೆ ಇಲ್ಲದನ್ನು ಕಂಡು ಸಿಟ್ಟಿನಿಂದ ಸಚಿವರು ನಿಮ್ಮಂತವರು ಆಡಳಿತಾತ್ಮಕ ಹುದ್ದೆಗೆ ಏಕೆ ಬರುತ್ತೀರಾ ದಯವಿಟ್ಟು ನೀವು ವರ್ಗಾವಣೆ ಮಾಡಿಸಿಕೊಳ್ಳಿ ಎಂದರು.

ಗ್ಯಾಸ್ ಏಜೆನ್ಸಿಯವರೊಂದಿಗೆ ಶಾಮೀಲಾಗಿ ಶಾಲೆಗಳಲ್ಲಿ ಎರಡರಿಂದ ಮೂರು ಕೆಜಿ ಗ್ಯಾಸ್ ಇರುವಾಗಲೇ ಸಿಲಿಂಡರ್ ಬದಲಾ ಯಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಗೈರು ಹಾಜರಾದರೂ ಹಾಜರಾತಿ ನೀಡಿ ರೇಷನ್ ತಿನ್ನುತ್ತಿದ್ದಾರೆ. ಜೆಸಿಪುರ, ಹೆಚ್.ತಮ್ಮಡಿ ಹಳ್ಳಿ, ಬೋರನಕಣಿವೆ ಫ್ರೌಢಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್‌ಗೆ ಸೂಚಿಸಿದರು.

ಕೆಲವು ಶಿಕ್ಷಕರು ಕಚೇರಿಗಳಲ್ಲಿ ಕೆಲಸ ಮಾಡದೆ ಆಟ ಆಡಿಕೊಂಡು ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳೆಗಳಿಗೆ ವಿಮೆ ಮಾಡಿಸುವಂತೆ ರೈತರನ್ನು ಜಾಗೃತ ಗೊಳಿಸಿ ಕೇವಲ ೩೦೦೦ ಸಾವಿರ ರೈತರು ತಾಲ್ಲೂಕಿನಲ್ಲಿ ವಿಮಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಬೆಳೆ ನಷ್ಟವಾದರೆ ರೈತರು ಬೀದಿ ಪಾಲಾಗಲಿದ್ದು, ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ವಿಮೆ ಮಾಡಿಸಿ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ತಾಲ್ಲೂಕಿನ ೩೬ ಸಾವಿರ ರೈತರು ನೊಂದಯಿಸಿಕೊoಡಿದ್ದು, ನೊಂದ ಯಿಸದೇ ಇರುವ ಅರ್ಹ ಇರುವ ರೈತರನ್ನು ಗುರುತಿಸಿ ನೊಂದಾಯಿಸುವAತೆ ಕೃಷಿ ಅಧಿಕಾರಿಗೆ ಸೂಚಿಸಿದರು. ರೈತರಿಗೆ ಎಣ್ಣೆ ಕಾಳುಗಳ ಬೆಳೆಯನ್ನು ಬೆಳೆಯುವಂತೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.

ಎಗ್ಗಿಲ್ಲದೆ ಸಾಗಿದೆ ಮದ್ಯ ಮಾರಾಟ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಿರಾಂತಕವಾಗಿ ನಡೆಯುತ್ತಿದೆ. ಮದ್ಯದಂಗಡಿಗಳು ಅಬಕಾರಿ ನಿಯಮ ಪಾಲಿಸುತ್ತಿಲ್ಲ. ಸಿಎಲ್ ೧ ಲೈಸನ್ಸ್ ಹೊಂದಿರುವ ಬಾರ್ ಅಂಡ್ ರೆಸ್ಟೊ ರೆಂಟ್‌ನಲ್ಲಿ ಮಾತ್ರ ಕುಳಿತು ಮದ್ಯ ಸೇವಿಸಲು ಅವಕಾಶ ಇದೆ. ಅಬಕಾರಿ ನಿಯಮದ ಪ್ರಕಾರ ಉಳಿದ ಅಂಗಡಿಗಳಲ್ಲಿ ಮದ್ಯ ಸೇವಿಸಲು ಅವಕಾಶ ಇಲ್ಲದಿದ್ದರೂ ಟೇಬಲ್ ಕುರ್ಚಿ ಹಾಕಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ. ಎಂಆರ್‌ಪಿ ದರಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ತಮ್ಮ ಪಾಲನ್ನು ಪಡೆದು ಮೌನ ಸಮ್ಮತಿ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗಣಧಾಳು, ದಸೂಡಿ ಭಾಗಗಳಲ್ಲಿ ಅರಣ್ಯ ಮಾಯವಾಗಿದ್ದು, ಮರಗಳನ್ನು ಕಡಿದಿದ್ದಾರೆ. ಐದು ವಾಚ್ ಟವರ್, ಸಿಬ್ಬಂದಿಗಳನ್ನು ನೇಮಿಸಿಯೂ ಅರಣ್ಯವನ್ನು ರಕ್ಷಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಯೋಜನೆಗಳಿಗೆ ತೊಂದರೆ ನೀಡುವುದು ರೈತರಿಗೆ ಕಿರುಕುಳ ನೀಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದೀರ ಎಂದು ವಲಯ ಅರಣ್ಯಾಧಿಕಾರಿ ರಾಕೇಶ್ ವಿರುದ್ದ ಅಸಮಧಾನ ವ್ಯಕ್ತ ಪಡಿಸಿದರು. ಸಾಮಾಜಿಕ ವಲಯ ಅರಣ್ಯಾಧಿಕಾರಿಗಳು ಮಾಡಿರುವ ರಸ್ತೆ ಬದಿಯ ಪ್ಲಾಂಟೇಶನ್ ಯಾವುದು ಬೆಳದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ತಾ.ಪಂ ಆಡಳಿತಾಧಿಕಾರಿ ರಾಜ ಸುಲೋಚನ, ಇಓ ವಸಂತ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.