ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಭೂಮ್ಮೆನಹಳ್ಳಿ, ದೇವರಹಳ್ಳಿ, ಮಾರುತಿ ಬಡಾವಣೆ, ರಾಮೇನಹಳ್ಳಿ ಹಾಗೂ ರಾಮೇನಹಳ್ಳಿ ಗೊಲ್ಲರಹಟ್ಟಿ, ಬೆನ್ನಾಯಕನಹಳ್ಳಿ, ಪೆದ್ದಿಹಳ್ಳಿ, ಭಾಗದ ಬಾಳು ಗುಡ್ಡ ದ ಸರ್ವೇ ನಂಬರ್ ೩೬ರಲ್ಲಿ ಸುಮಾರು ೨೦ ರಿಂದ ೨೫ ಎಕರೆ ಜಾಗವಿದ್ದು ಈ ಭಾಗದಲ್ಲಿ ಈ ಮೇಲ್ಕಂಡ ಗ್ರಾಮಗಳ ಅಧಿದೇವತೆ ಗಂಗಮ್ಮ ದೇವ ಸ್ಥಾನವಿದ್ದು, ಜಾನುವಾರು ಗಳನ್ನು ಮೇಯಿಸಲು ಏಕೈಕ ಜಾಗವಾಗಿದ್ದು, ಇನ್ನೆಲ್ಲಿಯೂ ಗೋಮಾಳವಿರುವುದಿಲ್ಲ, ಅಲ್ಲದೆ ಈ ಭಾಗದಲ್ಲಿ ರೈತ ಕುಟುಂಬಗಳು ವಾಸಿಸುವ ನೂರಾರು ಹಳೆ ಮನೆಗಳು, ಎತ್ತಿನಹೊಳೆ ಹಾದು ಹೋಗಿದ್ದು ಇಂತಹ ಸ್ಥಳದಲ್ಲಿ ಜಿಲ್ಲೆಯ ಪ್ರಭಾವಿ ಕಾನೂನು ಮತ್ತು ಸಂಸದೀಯ ಸಚಿವರಾದ ಮಾಧುಸ್ವಾಮಿಯವರು ತಮ್ಮ ಪತ್ನಿಯ ಹೆಸರಿನಲ್ಲಿ, ಶ್ರೀಮತಿ ತ್ರಿವೇಣಿ, ಮಾಧುಸ್ವಾಮಿ, ಹೆಸರಿನಲ್ಲಿ ಒಂದು ಎಕರೆ ಜಮೀನು ಪಡೆದು ಅಕ್ರಮವಾಗಿ ಕ್ರಷರ್ ಸ್ಥಾಪಿಸಲು ಸಂಬ0ಧಪಟ್ಟ ಅಧಿಕಾರಿಗಳನ್ನು ಸರ್ವೆ ಮಾಡಲು ಕಳುಹಿಸಿರುತ್ತಾರೆ. ನಾವು ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗ ಹಾಗೂ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದೇವೆ. ತಕ್ಷಣ ನಿಲ್ಲಿಸದಿದ್ದರೆ ಈ ಸ್ಥಳದಲ್ಲಿ ಹೋರಾಟ ಮತ್ತು ಮುಷ್ಕರ ಹಮ್ಮಿಕೊಳ್ಳಲಾಗುತ್ತದೆ ಎಂದು ಕುಮಾರಸ್ವಾಮಿ ಹಾಗೂ ಈ ಭಾಗದ ಗ್ರಾಮಸ್ಥರು ಪತ್ರಿಕೆ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾತೃಭೂಮಿ ಸಂಘದ ಲೋಕೇಶ್ ಮಾತನಾಡಿ ಇದೇ ೨೩ರಂದು ಸರ್ವೆಯವರು ಅಳತೆ ಮಾಡುತ್ತಿರುವ ಸಂದರ್ಭದಲ್ಲಿ ರೈತರು ಕೇಳಿದಾಗ ಕೆಲ ಗೊಂಡಗಳು ರೈತರಿಗೆ ತೊಂದರೆ ನೀಡಿದ್ದಾರೆ ಎಂದು ಹೇಳಿದರು.
ಪೆದ್ದನಹಳ್ಳಿ ನರಸಿಂಹಯ್ಯ ಮಾತನಾಡಿ ಜಿಲ್ಲೆಯ ಕಾನೂನು ಸಚಿವರಾದ ಮಾಧುಸ್ವಾಮಿ ಮತ್ತು ಸಂಬ0ಧಿಕರ ಹೆಸರಿನಲ್ಲಿ ತಿಮ್ಮರಾಯನಹಳ್ಳಿಯಿಂದ ತುರುವೇಕೆರೆ ತಾಲ್ಲೂಕಿನ ಕೋಳಘಟ್ಟದವರೆಗೆ, ಸುಮಾರು ೧೫ಕ್ಕೂ ಹೆಚ್ಚು ಕ್ರಷರ್ಗಳಿದ್ದು ವಿರೋಧಿಸಿದ ರೈತರ ಮೇಲೆ ೨೨ಕ್ಕೂ ಹೆಚ್ಚು ಕೇಸ್ ದಾಖಲಿಸಿದ್ದಾರೆ, ಕಾನೂನು ಸಚಿವರು ಕಾನೂನನ್ನು ದುರ್ಬಳಕೆ ಮಾಡಿ ಕೊಳ್ಳುವುದು ಎಷ್ಟು ಸರಿ.