Sunday, 15th December 2024

400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿಂದ ಸಾಮೂಹಿಕ ರಾಜೀನಾಮೆ

ಗುಬ್ಬಿ: ಚೇಳೂರು  ಶ್ರೀ ಮರಳು ಬಸವೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಶಾಸಕ ಎಸ್ಆರ್ ಶ್ರೀನಿವಾಸ್( ವಾಸಣ್ಣ) ಅಭಿಮಾನಿ ಬಳಗದ ವತಿಯಿಂದ ಹಮ್ಮಿ ಕೊಂಡಿದ್ದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕಾರ್ಯಕ್ರಮದಲ್ಲಿ  ಸುಮಾರು 400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟ ಹಾಗೂ ಪ್ರಾಥ ಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀ ನಾಮೆ ನೀಡಿ ಜೆಡಿಎಸ್ ವಿರುದ್ಧ ಪ್ರತಿಭಟಿಸಿದರು.

ನಂತರ  ಮಾತನಾಡಿದ ವಾಸಣ್ಣ  ಅಭಿಮಾನಿ ಬಳಗದ ಮುಖಂಡ ಕೆಆರ್ ವೆಂಕಟೇಶ್ ಜೆಡಿಎಸ್ ಪಕ್ಷಕ್ಕೆ ವಾಸಣ್ಣನ ಅವಶ್ಯಕತೆ ಇಲ್ಲದಿರಬಹುದು ಆದರೆ ತಾಲೂಕಿನ ಜನತೆಗೆ ವಾಸಣ್ಣ ನವರು ಅತ್ಯವಶ್ಯಕವಾಗಿದ್ದು ಸ್ವಂತ ಬಲದಿಂದ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಜಾತ್ಯಾತೀತವಾಗಿ ಎಲ್ಲರನ್ನೂ ಒಂದು ಗೂಡಿಸಿ ತಾಲೋಕಿನ  ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕುಮಾರಸ್ವಾಮಿಯವರು ನೇಮಿಸಿರುವ ಅಭ್ಯರ್ಥಿಯು ನಮ್ಮ ಶಾಸಕರ ವಿರುದ್ಧ ಅಭಿವೃದ್ಧಿಗಳು ಶೂನ್ಯ ಎಂದು ಸುಳ್ಳು ಹೇಳಿಕೊಂಡು ತಾಲೂಕಿನಾದ್ಯಂತ ಓಡಾಡು ತ್ತಿದ್ದಾರೆ ಮತ್ತು ಅವರು ಸಿ.ಎಸ್ ಪುರ ಭಾಗವನ್ನು ಸಿಂಗಾಪುರ ಮಾಡಿದ್ದೇನೆ ಎಂದು ತಾಲೂಕಿನ  ಜನತೆಗೆ ಹೇಳಲು ಹೊರಟಿದ್ದಾರೆ ಜೆಡಿಎಸ್ ನಲ್ಲಿ ನಾಲ್ಕು ಜನ ಆಕಾಂಕ್ಷಿಗಳಿದ್ದು ಅವರ  ಬುಡವೇ ಅಲುಗಾಡು ತ್ತಿದ್ದು ಶಾಸಕರ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯೇ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದ ಮಾತನಾಡಿ ವಾಸಣ್ಣನವರು ತಾರತಮ್ಯವಿಲ್ಲದ ವ್ಯಕ್ತಿತ್ವ, ಜಾತ್ಯಾತೀತ ಮನೋಭಾವ ಹೊಂದಿದ್ದು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಊಹಾಪೋಹಗಳಿಗೆ ಕಿವಿಗೊಡದೆ ವಾಸಣ್ಣ ನವರ ಅಭಿಮಾನಿಗಳಾಗಿ ಸಂಘಟಿತರಾಗೋಣ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅವರ ಜೊತೆ ಕೈಜೋಡಿಸಿ ಅವರ ಶಕ್ತಿಯನ್ನು ಬಲಪಡಿಸೋಣ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಜೆಡಿಎಸ್ ಉಚ್ಚಾಟಿತ ಅಧ್ಯಕ್ಷ ಗುರು ರೇಣುಕಾರಾಧ್ಯ, ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಕೊಡಿಯಾಲ ಮಹದೇವ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿ. ರಮೇಶ್, ವೆಂಕಟೇಶ್,ಸಿ.ಎನ್ ನಾಗರಾಜು,  ಮುಖಂಡರಾದ ಶಿವನಂಜಪ್ಪ, ಬಸವರಾಜು, ರಂಗಧಾಮ್ , ಸಣ್ಣ ರಾಜು, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ಪದ್ಮ, ಶಂಕರಪ್ಪ, ಶಿವ ಲಿಂಗಪ್ಪ, ರಾಮಕೃಷ್ಣಯ್ಯ, ಬಾಲರಾಜು, ಬಾಬು, ಮೋಹನ್ ಇನ್ನೂ ಹಲವಾರು ಮುಖಂಡರುಗಳು ಭಾಗಿಯಾಗಿದ್ದರು