Sunday, 15th December 2024

ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ಆತ್ಮಹತ್ಯೆಗೆ ಶರಣು

ಶಿರಸಿ: ನಗರದ ಪ್ರತಿಷ್ಠಿತ ಕಾಮಧೇನು ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರೀತಮ್ ಪ್ರಕಾಶ ಪಾಲನಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರೀತಮ್ ಎರಡು ವರ್ಷದ ಹಿಂದೆ ಮದುವೆ ಯಾಗಿದ್ದು ಒಂದುವರೆ ವರ್ಷದ ಮಗುವಿದೆ.

ಪ್ರೀತಮ್ ಆತ್ಮಹತ್ಯೆ ಹಿಂದೆ ಕಾಣದ ವ್ಯಕ್ತಿಯ ಕೈವಾಡ ಇರಬಹುದೆನ್ನುವ ಬಲವಾದ ಶಂಖೆ ವ್ಯಕ್ತವಾಗಿದೆ. ಬಹುಶಃ ಯಾರಿಂದಲೂ ಬ್ಲ್ಯಾಕ್ ಮೆಲ್ ಗೆ ಒಳಗಾಗಿ ಹಿಂಸೆ ತಡೆಯಲಾರದೇ ಆತ್ಮಹತ್ಯ ಮಾಡಿಕೊಂಡಿರ ಬಹುದೆನ್ನುವ ಶಂಖೆ ಕುಟುಂಬ ಮೂಲದವರಿಂದ ಕೇಳಿ ಬಂದಿದೆ.

ಯಾವುದಕ್ಕೂ ಪೊಲೀಸರು ಈ ಬಗ್ಗೆ ನಿಷ್ಕಾಳಜಿ ವಹಿಸದೇ ದಿಟ್ಟ ತನದಿಂದ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರ ತೆಗೆಯಬೇಕೆನ್ನುವುದು ಸಾರ್ವಜನಿಕರ ಆಶಯವಾಗಿದೆ.